ಕೊರೋನ ಎಂತ ಪರಿಸ್ಥಿತಿಗೆ ಕೆಲವರನ್ನು ತಂದು ನಿಲ್ಲಿಸಿದೆ ಎಂದರೆ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬಂದು ಒದಗಿದೆ ಎಂದರೆ ತಪ್ಪಾಗಲಾರದು.ಇಂತಹ ಸಮಯದಲ್ಲಿ ಪಚ್ಚನಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂದು ಕುಟುಂಬ ತುಂಬಾ ಕಷ್ಟದಲ್ಲಿ ಬದುಕುವ ಪರಿಸ್ಥಿತಿ ಬಂದು ಒದಗಿದೆ.ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕನಿಗೆ ಬೆನ್ನಿನಲ್ಲಿ ಒಂದು ಸಣ್ಣ ನೋವು ಕಾಣಿಸಿಕೊಂಡಿತು.ಅದನ್ನು ಕಂಡ ತಾಯಿ ಮಗನನ್ನು ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾರೆ ಅಲ್ಲಿ ಅದು ಇದು ಅಂತ ಹೇಳಿ ಸುಮಾರು ದೈಹಿಕ ಪರೀಕ್ಷೆಗಳನ್ನು ಮಾಡಿಸಿ ಕೊನೆಗೆ ಕೊರೋನ ಟೆಸ್ಟ್ ಮಾಡಿಸುತ್ತಾರೆ.ಮಗನಿಗೆ ಕೊರೋನ ಪಾಸಿಟಿವ್ ಇದೆ ಅಂತ ಹೇಳಿ ಎರಡು ಹೆಸರಾಂತ ಆಸ್ಪತ್ರೆಗೆಗಳಲ್ಲಿ ಒಂದು ತಿಂಗಳಿಗೂ ಹೆಚ್ಚು ದಿನ ಚಿಕಿತ್ಸೆ ನೀಡುತ್ತಾರೆ.ಆದರೆ ಏನು ಮಾಡುವುದು ವಿಧಿ ಲಿಖಿತ ಎಂಬಂತೆ ಕೊನೆಗೂ ಮಗ ತಾಯಿಯನ್ನು ಬಿಟ್ಟು ದೇವರ ಪಾದ ಸೇರಿಯೆ ಬಿಡುತ್ತಾರೆ.ಆದರೆ ಏನು ಮಾಡೋದು ಮೊದಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಬಡಕುಟುಂಬ ಸಾಲ ಸೋಲ ಮಾಡಿ ಏಳು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದರೂ ಮಗ ಉಳಿಯಲಿಲ್ಲ ಎಂಬ ದು:ಖ ಒಂದೆಡೆಯಾದರೆ ಇನ್ನೊಂದೆಡೆ ಮಗನ ಅಂತ್ಯಕ್ರಿಯೆ ಮಾಡಲು ಹಣವಿಲ್ಲದ ಪರಿಸ್ಥಿತಿಗೆ ಬಂದು ಬಿಟ್ಟಿದೆ ಅಷ್ಟು ಬಡತನ ಆ ಕುಟುಂಬಕ್ಕೆ ಇತ್ತು.
ಈ ವಿಷಯ ತಿಳಿದ ಶ್ರೀಮಂತ ರಾಜ ಗುಳಿಗ ನೆಲೆಸಿರುವ ಶ್ರೀ ಕ್ಷೇತ್ರ ಪಚ್ಚನಾಡಿಯ ಧರ್ಮಾಧಿಕಾರಿ ಸತೀಶ್ ಪೂಜಾರಿ ಬಂದಲೆ ಪಚ್ಚನಾಡಿ ಇವರ ಮುಂದಾಳತ್ವದಲ್ಲಿರುವ ಶ್ರೀಮಂತ ರಾಜ ಗುಳಿಗ ಸೇವಾ ನಿಧಿಯಿಂದ ಈ ಕುಟುಂಬಕ್ಕೆ 25000ರೂಪಾಯಿ ಮತ್ತು ಕೆಲವು ದಿನ ನಿತ್ಯದ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾನವೀಯತೆಯ ಮೆರದರು.ಇಂತಹ ಕಾರ್ಯಗಳು ಇನ್ನಷ್ಟು ಈ ಕ್ಷೇತ್ರದಿಂದಾಗಲಿ ಶ್ರೀಮಂತ ರಾಜ ಗುಳಿಗ ಎಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸುತ್ತೇವೆ..