ಪೊಳಲಿ : ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ನಡೆಯುವ ಒಂದು ತಿಂಗಳ ಜಾತ್ರೆ, ಜಾತ್ರೆಯ ಸೊಬಗು, ಔಚಿತ್ಯ, ಐತಿಹ್ಯ, ಸ್ಥಳನಾಮ ವಿಶೇಷತೆ, ನಂಬಿಕೆ, ಶ್ರೀ ದೇವಿಯ ಕಾರ್ಣಿಕದ ಜೊತೆಗೆ ಶ್ರೀ ಕ್ಷೇತ್ರದ ಸಂಪೂರ್ಣ ಚಿತ್ರಣ ಹಾಗೂ ಇತರ ಕೆಲವು ಮಹತ್ವದ ವಿಷಯಗಳನ್ನೊಳಗೊಂಡ ವಿಶಿಷ್ಟ ವೀಡಿಯೋ ಸಂಕಲನ `ಮೃಣ್ಮಯ ಮೂರ್ತಿ’ ಎ. ೧೦ ರಂದು ಶನಿವಾರ ಪೊಳಲಿ ದೇವರ ಸನ್ನಿಧಾನದಲ್ಲಿ ವಿದ್ಯುಕ್ತವಾಗಿ ಬಿಡುಗಡೆಗೊಂಡಿತು.
ಮೊದಲಿಗೆ ವೀಡಿಯೋ ಕ್ಲಿಪ್ಲಿಂಗ್‌ನ್ನು (ಪೋಸ್ಟರ್) ಶ್ರೀ ರಾಜರಾಜೇಶ್ವರಿ ಅಮ್ಮನವರ ಪದತಲದಲ್ಲಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ. ಮಾಧವ ಭಟ್ , ನಾರಾಯಣ ಭಟ್,ಕೆ.ರಾಮ್ ಭಟ್, ಮಾಧವ ಮಯ್ಯ,ನಡುಮನೆ. ಕಂಠೀರಾಯ ರಾಮಕೃಷ್ಣ ಭಟ್ ಅರ್ಚಕ, ಪರಮೇಶ್ವರ ಭಟ್ ಅವರ ಸಮಾಕ್ಷಮದಲ್ಲಿ ಚಂದ್ರಶೇಖರ ಭಟ್ ಮೃಣ್ಮಯ ಮೂರ್ತಿಯ ಯಶಸ್ವಿಗೆ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ರಾದ ಯು .ತಾರನಾಥ ಆಳ್ವ ,ಚೇರ ಸೂರ್ಯನಾರಾಯಣ ರಾವ್ ಹಾಗೂ ರಮೇಶ್ ರಾವ್ ಚೇರಾ, ಸುಭಾಷ್ ಆಳ್ವ ಉಳಿಪಾಡಿಗುತ್ತು, ಅರುಣ್ ಆಳ್ವ ಉಳಿಪಾಡಿಗುತ್ತು, ಕೃಷ್ಣ ಕುಮಾರ್ ಪೂಂಜ, ಚಂದ್ರಹಾಸ ಶೆಟ್ಟಿ ಪೆರ್ಮಂಕಿ, ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು, ಉದಯ ಆಳ್ವ, ವಿಷ್ಣುಮೂರ್ತಿ ನಟ್ಟೋಜ, ಸೋಮಶೇಖರ್ ಶೆಟ್ಟಿ, ಅ.ನ.ಭ ಪೊಳಲಿ, ರೂಪಾ ಡಿ ಶೆಟ್ಟಿ, ದುರ್ಗಾಪ್ರಸಾದ ಶೆಟ್ಟಿ, ಸಂತೋಷ್ ಕುಮಾರ್ ಆಯೆರೆಮಾರ್ .ದೇವಳದ ಕಾರ್ಯನಿರ್ವಣಾಧಿಕಾರಿ ಜಯಮ್ಮ, ವೀಡಿಯೋ ನಿರ್ಮಾಪಕ ವಾಮನ್ ಪೂಜಾರಿ ಸೂರ್ಲ, ವೀಡಿಯೋ ಸಂಕಲನ ಮಾಡಿರುವ ಹರ್ಷ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪೊಳಲಿ ಅಮ್ಮನವರ ಆಶೀರ್ವಾದದೊಂದಿಗೆ `ಸುದ್ದಿ೯’ ಸುದ್ದಿ ಪ್ರಸಾರ ಸಂಸ್ಥೆಯ ಮಾಲಕ ವಾಮನ ಪೂಜಾರಿ ಸೂರ್ಲ ನಿರ್ಮಾಣದ ಈ ವೀಡಿಯೋ ಚಿತ್ರಣದಲ್ಲಿ ಹಲವರು ಕೈಜೋಡಿಸಿದ್ದಾರೆ. ಅ.ನ.ಭ ಪೊಳಲಿ ಚಿತ್ರಕತೆಗೆ ರೂಪಾ ಡಿ ಶೆಟ್ಟಿ ನಿರೂಪಣೆ ಇದೆ. ಟ್ಯಾಬ್ ಸ್ಟೂಡಿಯೋ ಬೆದ್ರ ಧ್ವನಿ ಮುದ್ರಣ ಮಾಡಿದ್ದರೆ, ವಿನಾಯಕ ಶೆಣೈ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಹರ್ಷ ಕುಮಾರ್ ಕಳಸಗುರಿ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪೊಳಲಿ ಶ್ರೀ ಕ್ಷೇತ್ರದ ಕಾಲಾವಧಿ ಜಾತ್ರೆ ಹಾಗೂ ಜಾತ್ರೆಯ ಮರುದಿನ ಶ್ರೀ ಕ್ಷೇತ್ರದಲ್ಲಿ ನಡೆಯುವ ದೈವಾರಾಧನೆಯ ಸೊಬಗನ್ನು ಈ ವೀಡಿಯೋ ಚಿತ್ರಣದ ಮೂಲಕ ಹತ್ತಿರದಿಂದ ಕಂಡು ಧನ್ಯರಾಗಲು ಅವಕಾಶವಿದೆ. ಅತ್ಯಂತ ಸುಂದರ ಹಾಗೂ ಅಷ್ಟೇ ನೈಜವಾಗಿ ಮೂಡಿ ಬಂದಿರುವ ವೀಡಿಯೋ ಆಸ್ತಿಕ ಬಂಧುಗಳ ದೇವ-ದೈವಾರಾಧನೆಯ ಆಸಕ್ತಿ ಇನ್ನಷ್ಟು ಹೆಚ್ಚಿಸುವಂತಿದೆ. ಇದರಲ್ಲಿ ಅನೇಕರ ಶ್ರಮವಿದೆ ಎಂದು ಹೇಳುವ ಪತ್ರಕರ್ತ ವಾಮನ ಪೂಜಾರಿ ಸೂರ್ಲ, ಈ ವೀಡಿಯೋ ನಿರ್ಮಾಣದ ಪೊಳಲಿ ಅಮ್ಮನವರ ಭಕ್ತರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ಹೇಳಲು ಅಭ್ಯಂತರವಿಲ್ಲ ಎಂದು ವೀಡಿಯೋ ವೀಕ್ಷಿಸಿದ ಭಕ್ತರು ಆಡಿಕೊಂಡಿದ್ದಾರೆ.