ಕುಂದಾಪುರ :-8 ಅಕ್ಟೋಬರ್, ಕಾಳಾವರದಲ್ಲಿ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್( ರಿ ) ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್, ಶ್ರೀ ಗೋವಿಂದ ಬಾಬು ಪೂಜಾರಿ ಅವರು ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆ ಗೃಹಪ್ರವೇಶ ಇಂದು ಸಂತಸದಿಂದ ನಡೆಯಿತು.
ರಿಕ್ಷಾ ಡ್ರೈವರ್ ಒಬ್ಬರ “ಕನಸು” ನನಸು ಮಾಡಿದ ಆಶ್ರಯದಾತ ಶ್ರೀ ಗೋವಿಂದ ಬಾಬು ಪೂಜಾರಿ, ಕಾಳಾವರರದ ನರಿಕೋಡ್ಲು ಮನೆ ಸತೀಶ್ ಪೂಜಾರಿ ಯವರು ನೂತನ ಮನೆ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡು ಮನೆ ನಿರ್ಮಾಣಕ್ಕೆ ಕೈ ಹಾಕಿದ್ದರು.
ಆದರೆ ವಿಧಿ ಆಟವೇ ಬೇರೆಯಾಗಿತ್ತು ಮನೆ ಪೂರ್ಣವಾಗುವ ಮೊದಲೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಇದರಿಂದ ಮನೆಯವರು ಮನೆ ನಿರ್ಮಾಣ ಮಾಡಲು ಸಾಧ್ಯವಾಗದೇ ತೀವ್ರ ಕಷ್ಟದಲ್ಲಿ ಇರುವುದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೋವಿಂದ ಬಾಬು ಪೂಜಾರಿ ಅವರ ಗಮನಕ್ಕೆ ಬಂದು ಮನೆಯನ್ನು ಪೂರ್ಣಗೊಳಿಸಿ ಕೊಡುವ ಭರವಸೆ ನೀಡಿದರು.
ಇದೀಗ ಸುಸಜ್ಜಿತ ನಿರ್ಮಾಣಗೊಂಡಿದ್ದು ಈ ಮನೆ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿ ಕೊಡುತ್ತಿರುವ 5ನೇ ಮನೆ ಇದಾಗಿರುತ್ತದೆ.
ಶುಭಗಳಿಗೆಯಲ್ಲಿ “ಶ್ರೀ ವರಲಕ್ಷ್ಮಿ ನಿಲಯದ “ಗ್ರಹಪ್ರವೇಶವು ಕಾಳಾವರ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಶಾಸಕರು ಕುಂದಾಪುರ, ಗೋವಿಂದ ಬಾಬು ಪೂಜಾರಿ, ಅಶೋಕ್ ಪೂಜಾರಿ ಬಿಲ್ಲಾಡಿ, ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಆಶಾಲತಾ ಶೆಟ್ಟಿ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರು. ಬಿಲ್ಲವ ಸಂಘದ ಹಿರಿಯ ಮುಖಂಡರು,ಪಂಚಾಯತ್ ಸದಸ್ಯರು ಮತ್ತು ಶ್ರೀ ಗೋವಿಂದ ಬಾಬು ಪೂಜಾರಿ ಅಭಿಮಾನಿ ಬಳಗ ಶ್ರೀಯುತರ ಮಾತಾಪಿತರು ಮತ್ತು ಸಂಸಾರದ ಸರ್ವಸದಸ್ಯರು ಊರ ಜನತೆಯ ಉಪಸ್ಥಿತಿಯೊಂದಿಗೆ ಬಹಳ ಮಹತ್ವಪೂರ್ಣವಾಗಿ ಕಾರ್ಯಕ್ರಮ ನಡೆಯಿತು.
✍️ಈಶ್ವರ್ ಸಿ ನಾವುಂದ.