TOP STORIES:

ಸಣ್ಣ ಮಗುವಿಗೆ ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ!


ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ!

ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. BUTTER TREE ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇಪ್ಪೆ ಮರ ಎಂದು, ತಮಿಳಿನಲ್ಲಿ ಇಲ್ಲಿಪ್ಪೆ, ತೆಲುಗಿನಲ್ಲಿ ಇಪ್ಪಿ ಎಂದು, ಹಿಂದಿಯಲ್ಲಿ ಮೊಹ್ವ, ಸಂಸ್ಕ್ರತದಲ್ಲಿ ಮಧೂಕ, ಮಂಗಳೂರು ಮತ್ತು ಉಡುಪಿ ಆಸುಪಾಸಿನಲ್ಲಿ ‘ನಾನಿಲ್ ಮರ’ ಎಂದೂ ಕರೆಯುತ್ತಾರೆ. ಮೋಹ, ಮಹಲ, ಇಲುಪ, ಪೂನಮ, ಮಹುವಾ ಎಂದೂ ನಾನಾ ಭಾಷೆಗಳಲ್ಲಿ ಕರೆಯುವುದುಂಟು. ಇದರ ವೈಜ್ಙಾನಿಕ ಹೆಸರು ‘ಬ್ಯಾಸ್ಸಿಯ ಲ್ಯಾಟಿಫೂಲಿಯಾ’. ಇದು ‘ಸಪೋಟೇಸಿ’ ಕುಟುಂಬ ವರ್ಗಕ್ಕೆ ಸೇರಿದೆ.

ಇದು ಎಲೆ ಉದುರುವ ಮರದ ಜಾತಿಗೆ ಸೇರಿದೆ. ಸುಮಾರು 12 ರಿಂದ 20 ಮೀ ಎತ್ತರ ಬೆಳೆಯುವ ಇಪ್ಪೆ ಮರ, ಒಣ ಹವೆ ಮತ್ತು ತೇವ ಹವೆಯ ಕಾಡುಗಳಲ್ಲಿ ಬಿಡಿ ಬಿಡಿಯಾಗಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಪಶ್ಚಮ ಘಟ್ಟದ ಕಾಡು ಹೊಳೆಯ ಸಮೀಪದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೊಗಟೆ ತಿಳಿ ಕಪ್ಪು ಅಥವಾ ಬೂದು ಬಣ್ಣದಿಂದ ಕೂಡಿದ್ದು, ಗೆಲ್ಲುಗಳು ಚದುರಿ ಚದುರಿದಂತೆ ಇದ್ದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ.

ಚಳಿಗಾಲ ಬಂತೆಂದರೆ ಈ ಮರ ವಿಶಿಷ್ಟವಾದ ಕಟು ಮಧುರ ಹೂವಿನ ಪರಿಮಳವನ್ನು ಸೂಸುತ್ತದೆ. ನೇರವಾದ ಕಾಂಡದ ಮೇಲೆ ಕೊಂಬೆಗಳು ಮತ್ತು ತುದಿ ಚೂಪಾಗಿರುವ ಎಲೆಗಳು – ಛತ್ರಿಗಳು ಬಿಡಿಸಿಟ್ಟಂತೆ ಹರಡಿಕೊಂಡಿರುತ್ತದೆ. ವರ್ಷಕ್ಕೊಮ್ಮೆ ಎಲೆ ಉದಿರುವ ಈ ಮರ, ಹೊಸ ಚಿಗುರು ಬಂದಾಗ ತಾಮ್ರಗೆಂಪು ಬಣ್ಣದಿಂದ ನಳನಳಿಸುತ್ತದೆ.  ಈ ಸಮಯದಲ್ಲಿ ಬಸ್ತಾರ್ ನ ಆದಿವಾಸಿಗಳು ಮತ್ತು ಮಧ್ಯಪ್ರದೇಶದ ಗೊಂಡ ಆದಿಮಾಸಿಗಳು ಆ ಮರವನ್ನು ಪೂಜಿಸುತ್ತಾರೆ.

ಹೊಸ ಚಿಗುರು ಮಾಗಿ ಎಲೆ ದಪ್ಪಗಾದ ಕೂಡಲೇ ಮರ ಹೂ ಬಿಡಲು ಆರಂಭಿಸುತ್ತದೆ. ಈ ಹೂಗಳು ಮಾಸಲು ಬಣ್ಣವನ್ನು ಹೊಂದಿದ್ದು, ಕೊಂಬೆಯ ತುದಿಯಲ್ಲಿ ಜೋತು ಬಿದ್ದಿರುತ್ತದೆ. ಈ ಹೂವಿನ ಪುಷ್ಪಪಾತ್ರೆಯ ಭಾಗ ಹಣ್ಣಾಗಿ ತಿನ್ನಲು ರುಚಿಯಾಗಿರುತ್ತದೆ. ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಿಗೂ ಈ ಹಣ್ಣು ಬಹಳ ಪ್ರಿಯ. ಇಪ್ಪೆ ಹಣ್ಣಿನಿಂದ ಆದಿವಾಸಿಗಳು ಹೆಂಡವನ್ನು ತಯಾರಿಸುತ್ತಾರೆ. ಇದರ ಬೀಜದಿಂದ ಎಣ್ಣೆ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ.  ಕಾಡಿನಲ್ಲಿ ಆಹಾರಕ್ಷಾಮ ಉಂಟಾದಾಗ ಆದಿವಾಸಿಗಳಿಗೆ ಈ ಮರದ ಹೂವು ಹಣ್ಣುಗಳೇ ಆಹಾರ. ಗೊಂಡ ಆದಿವಾಸಿಗಳಲ್ಲಿ ಚಳಿಗಾಲದಲ್ಲಿ ಮಗು ಜನಿಸಿದರೆ, ತಾಯ ಹಾಲಿಗೂ ಮೊದಲು ಇಪ್ಪೆ ಹಣ್ಣಿನ ರಸವನ್ನು ನೆಕ್ಕಿಸುತ್ತಾರೆ. ಯಾಕೆಂದರೆ ಅದು ಆದಿವಾಸಿಗಳ ಪಾಲಿನ ಪವಿತ್ರ ಮತ್ತು ಆರಾಧನೀಯ ಮರ.

(ಸಂಗ್ರಹ)

PC: Dinesh bangera irvattur


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »