ಮನುಷ್ಯರೆಲ್ಲ ಒಂದೇ, ಒಂದೇ ಜಾತಿ, ಒಂದೇ ಮತ ಮತ್ತು ಒಬ್ಬರನೇ ದೇವರು ಎಂದು ಜಗತ್ತಿಗೆ ಸಂದೇಶ ನೀಡುವುದರೊಂದಿಗೆಸಮಾಜಕ್ಕೆ ಅರಿವಿನ ಬೆಳಕು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಚಿತ್ರವಿದ್ದ ಸ್ತಬ್ಧಚಿತ್ರವನ್ನುತಿರಸ್ಕರಿಸಿರುವುದು ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಬಹುದೊಡ್ಡ ಅವಮಾನವಾಗಿದೆ. ಈಗಾಗಲೇ ನಮ್ಮ ನಾಯಕರಾದಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕೂಡ ಇದರ ಬಗ್ಗೆ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದು ಕೂಡಲೇ ಕೇಂದ್ರಸರಕಾರ ತನ್ನ ನಿರ್ಧಾರವನ್ನು ವಾಪಾಸು ಪಡೆಯಬೇಕು.
ಸಾತ್ವಿಕ ಸಂದೇಶಗಳ ಮಾನವೀಯ ಮೌಲ್ಯದಿಂದ ಒಮ್ಮತದ ಸಮಾಜವನ್ನು ಪ್ರತಿಪಾದಿಸಿದ ನಾರಾಯಣ ಗುರುಗಳ ಅದರ್ಶ ಪ್ರಸ್ತುತಅತಿ ಅಗತ್ಯವೆನಿಸಿದೆ. ಆದ್ದರಿಂದ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಕೈ ಬಿಡಬೇಕು. ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶಕೊಡಬೇಕು. ಈ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಚಲನ ಮೂಡಿಸಿ ಸಮಾಜ ಸುಧಾರಣೆ ಮಾಡಿದ ಸರ್ವಶ್ರೇಷ್ಠಸಂತನಿಗೆ ಸೂಕ್ತ ಗೌರವವನ್ನು ನೀಡಬೇಕು ಎಂದು ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.