ಭಾನುವಾರ ರಾತ್ರಿ ಭಾರೀ ಗುಡುಗು- ಸಿಡಿಲಿನಿಂದ ಕೂಡಿದ ಮಳೆ ಸಂದರ್ಭ ಸಜಿಪಮುನ್ನೂರು ಗ್ರಾಮದ ಮಿತ್ತಕಟ್ಟೆ ನಿವಾಸಿ ಲಲಿತಾ ಅವರ ಮನೆಗೆ ಸಿಡಿಲು ಬಡಿದ ವೇಳೆ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳು ಸುಟ್ಟು ಕರಕಲಾಗಿದ್ದವು. ಸಂಬಂಧಿಕರ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ನಗದು ಹಣವೂ ಬೆಂಕಿಗೆ ಆಹುತಿಯಾಗಿದ್ದವು. ಈ ಕಾರಣದಿಂದ ತುರ್ತು ನೆರವು ನೀಡುವ ನಿಟ್ಟಿನಲ್ಲಿ ಗುರುಬೆಳದಿಂಗಳು ಸೇವಾ ಯೋಜನೆ ಕುದ್ರೋಳಿ ಇದರ ಆಸರೆ ನೆರವು ಯೋಜನೆಯಿಂದ ಪ್ರಥಮ ಸೇವಾರ್ಥವಾಗಿ 50 ಸಾವಿರ ರೂ. ಧನಸಹಾಯ ನೀಡಲಾಯಿತು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಅಭಿವೃದ್ಧಿ ಸಮಿತಿ ರ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ದೇವಳ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್., ಉದ್ಯಮಿ ನವೀನ್ ಸುವರ್ಣ, ಸತೀಶ್ ಗುರುಮಂದಿರ, ವಿವೇಕ್ ಕೋಟ್ಯಾನ್ ಪಡೀಲ್, ಯಶವಂತ್ ದೇರಾಜೆ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್ ಮತ್ತಿತರರಿದ್ದರು.
ಮನೆಗೆ ಉಂಟಾದ ಸಿಡಿಲಾಘಾತದಿಂದ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳ ಸಹಿತ ಇತರ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಕೋಣೆಯೊಳಗಿನ ಕಪಾಟಿಗೂ ಸಿಡಿಲು ಬಡಿದ ಪರಿಣಾಮ ಕಪಾಟಿನಲ್ಲಿದ್ದ ಚಿನ್ನಾಭರಣಗಳು ಸುಟ್ಟು ಕರಕಲಾಗಿದ ಹಳದಿ ಚಿನ್ನ ಕಪ್ಪು ಬಣ್ಣಕ್ಕೆ ತಿರುಗಿದ್ದು ಭಾರಿ ಹಾನಿ ಸಂಭವಿಸಿ ಸಂಬಂಧಿಕರ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ನಗದು ಸಿಡಿಲಿನ ಬೆಂಕಿಗೆ ಸುಟ್ಟು ಹೋಗಿದೆ.