ಸುಧಾಕರ ಕೆ ಇವರು ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿ ಮಂಗಳೂರು ಪೊಲೀಸ್ ಆಯುಕ್ತರವರ ಕಚೇರಿಗೆ ವರ್ಗಾವಣೆ ಸುಧಾಕರ ಕೆ. ಇವರು ಪುತ್ತೂರು ತಾಲೂಕಿನ ಕೆಯ್ಯುರು ಗ್ರಾಮದ ಕಟ್ಟತ್ತಾರು ವಾಸಿ ದಿ. ಶೇಷಪ್ಪ ಪೂಜಾರಿ, ದಿ. ಶ್ರೀಮತಿ ಗಿರಿಜಾ ದಂಪತಿಗಳ ಪುತ್ರನಾಗಿದ್ದು, ಪೊಲೀಸ್ ಇಲಾಖೆಯಲ್ಲಿ 1996ನೇ ಇಸವಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಮೂಲ್ಕಿ, ಉಳ್ಳಾಲ, ಮಂಗಳೂರು, ಗ್ರಾಮಾಂತರ, ಕರ್ನಾಟಕ ಲೋಕಾಯುಕ್ತ ಹಾಗೂ ಕೇಂದ್ರ ಸರಕಾರದ ಬ್ಯುರೋ ಆಪ್ ಇಂಮಿಗ್ರಷನ್ ಇಲಾಖೆಗೆ ನಿಯೋಜನೆಗೊಂಡು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಜೂನಿಯರ್ ಇಂಮಿಗ್ರಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿ ಪದೋನ್ನತಿ ಗೊಂಡು, ಮಂಗಳೂರು ಪೊಲೀಸ್ ಆಯುಕ್ತರವರ ಕಚೇರಿಯ City Special Branch ಗೆ ವರ್ಗಾವಣೆ ಗೊಂಡಿರುತ್ತಾರೆ.