TOP STORIES:

ಸೋಲನ್ನು ಮೆಟ್ಟಿ ನಿಂತ ಸಾಧಕನ ಸ್ಫೂರ್ತಿಯ ಕಥೆ


ಜೀವನದಲ್ಲಿ ಸೋಲು ಮುಖ್ಯ ಅಲ್ಲ. ಆದರೆ ಸೋಲನ್ನು ಮೆಟ್ಟಿ ನಿಂತು ಸಾಧಿಸುವುದು ಮುಖ್ಯ. ಹೋಂಡಾ ಕಂಪೆನಿ ಅಂದರೆ ಎಲ್ಲರಿಗೂ ಚಿರಪರಿಚಿತ. ಈ ವಿಶ್ವವಿಖ್ಯಾತ ಕಂಪೆನಿಯ ಸ್ಥಾಪಕ ಸೋಯಿಚಿರೋ ಹೋಂಡಾರವರ ಕಲ್ಲು ಮುಳ್ಳಿನ ಹಾದಿಯ ಕಥೆಯೂ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿದಾಯಕವಾದುದು.

ಬಡ ಕುಟುಂಬದಲ್ಲಿ ಹುಟ್ಟಿದ ಸೋಯಿ ಚಿರೋ ಹೋಂಡಾ ಚಿಕ್ಕಂದಿನಿಂದಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಅದಮ್ಯ ಬಯಕೆ ಇಟ್ಟುಕೊಂಡಿದ್ದರು. ಹಾಗೆಯೇ ಕಾಲೇಜಿನ ವರ್ಕ್‌ ಶಾಪ್‌ನಲ್ಲಿದ್ದಾಗ ಹಠಾತ್ತಾನೆ ಪಿಸ್ಟನ್‌ ತಯಾರಿಸುವ ಐಡಿಯಾ ಹೊಳೆಯಿತು.

ಹಗಲು-ರಾತ್ರಿ ಶ್ರಮಪಟ್ಟು ತಯಾರಿಸಿ ಟೊಯೊಟೊ ಕಂಪೆನಿಗೆ ಮಾರಲು ಹೋದಾಗ, ಗುಣ ಮಟ್ಟದ ಉತ್ಪನ್ನ ಇದಲ್ಲ ಎಂದು ಕಂಪೆನಿ ನಿರಾಕರಿಸಿತು. ಎಲ್ಲರೂ ಗೇಲಿ ಮಾಡಿ ನಕ್ಕರು. ಆದರೆ ಹೋಂಡಾ ಅವರು ಮಂದಹಾಸ ಬೀರಿ ತನ್ನ ಪ್ರಯತ್ನವನ್ನು ಮುಂದುವರಿಸಿದರು. ಮುಂದೊಂದು ದಿನ ತನ್ನ ಸತತ ಪ್ರಯತ್ನದಿಂದ ತನ್ನದೇ ಆದ ಫ್ಯಾಕ್ಟರಿಯನ್ನು ಆರಂಭಿಸಿದರು. ಆದರೆ ಭೂಕಂಪಕ್ಕೀಡಾಗಿ ಧರೆಗುರುಳಿತು.

ಮತ್ತೆ ಕಾರ್ಖಾನೆ ನಿರ್ಮಾಣಕ್ಕೆ ಮುಂದಾದಾಗ 2ನೇ ಮಹಾಯುದ್ಧವು ಪ್ರವೇಶಿಸಿಬಿಟ್ಟಿತ್ತು. ಆ ಹೊತ್ತಿಗೆ ಸಿಮೆಂಟಿನ ಪೂರೈಕೆ ನಿಂತೇ ಹೋಯ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಹೋಂಡಾ ಅವರು ತಾನೆೇ ಸಿಮೆಂಟ್‌ ತಯಾರಿಸಿ ಕಾರ್ಖಾನೆಯ ಕೆಲಸ ಪೂರ್ಣಗೊಳಿಸಿದರು. ಹೀಗೆ ಮುಂದಿನ ದಿನಗಳಲ್ಲಿ ಹಲವು ಬಾರಿ ಸೋಲುಗಳನ್ನು ಕಂಡರೂ ಎಲ್ಲವನ್ನೂ ಮೆಟ್ಟಿನಿಂತು ಮುಂದೊಂದು ದಿನ ಹೋಂಡಾ ಕಂಪೆನಿಯನ್ನು ಜಗದ್ವಿಖ್ಯಾತ ಮಾಡಿದರು.

ನಾವು ಸೋಯಿಚಿರೋ ಹೋಂಡಾ ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆವು? ಎಷ್ಟೇ ಸೋಲು ಕಂಡರೂ ಹೋಂಡಾ ಅವರು ಮಂದ ಹಾಸ ಬೀರಿ ಅದನ್ನೆಲ್ಲ ಜಯಿಸಿ ಮುನ್ನಡೆದು ಇಡೀ ವಿಶ್ವಕ್ಕೆ ಮಾದರಿ ಯಾದರು. ನಮಗೂ ಕೂಡ ಜೀವನದಲ್ಲಿ ಸೋಲುಗಳು ಬರುವುದು ಸಹಜ. ಆದರೆ ಅವನ್ನೆಲ್ಲ ಮೆಟ್ಟಿ ಮಂದಹಾಸ ಬೀರಿ ಜಯಿಸಬೇಕು ಅಷ್ಟೇ… ಎಲ್ಲದಕ್ಕೂ ಸಾಧಿಸುವ ಛಲವಿರಬೇಕು.

– ರಾಜೇಶ್ ಎಸ್ ಬಲ್ಯ


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »