TOP STORIES:

” ಹಿಂದು ಮತ್ತು ಕ್ರೈಸ್ತರ ಸಾಮರಸ್ಯದ ಸಂಕೇತ ಶ್ರಿ ಮಂಗ್ಲಿಮಾರ್ ಅಣ್ಣಪ್ಪಪಂಜುರ್ಲಿ ದೈವಸ್ಥಾನ “


ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಶ್ರಿ ಅಣ್ಣಪ್ಪಪಂಜುರ್ಲಿ ದೈವಸ್ತಾನ ಹಿಂದು ಮತ್ತೂ ಕ್ರೈಸ್ತರ ನಡುವಿನ ಸಾಮರಸ್ಯದ ಕೊಂಡಿ ಯಾಗಿದೆ. ಹೌದು ಅಮ್ಟಾಡಿ ಗ್ರಾಮದ ಗ್ರಾಮ ದೈವ ಅಣ್ಣಪ್ಪ ಪಂಜುರ್ಲಿಯ ಗುಡಿ (ಸಾನ) ಕಟ್ಟಿಸಿದವರು ಅಗತ್ತಿಮಾರು ಸಾಲ್ವದೊರ್ ಕಾಮತ್ (ಸಾಲು ಕಂಬತ್ತಿ)ಮೂಲತಃ ಕ್ರೈಸ್ತಧರ್ಮದವರಾದ ಇವರು ಅಣ್ಣಪ್ಪ ಪಂಜುರ್ಲಿ ದೈವದ ಪರಮಭಕ್ತರು,ಇವರು ಆ ಕಾಲದಲ್ಲಿ ಆಗರ್ಭ ಶ್ರಿಮಂತರಗಿದ್ದರು, ವರ್ಷದಲ್ಲಿ 12 ಪೂಜೆಗಳನ್ನು ಇಗರ್ಜಿಯಲ್ಲಿ ಸಲ್ಲಿಸಿದರೆ ಅದಕ್ಕೂ ಮಿಗಿಲಾಗಿ 13 ನೇಮಗಳನ್ನು ಅಣ್ಣಪ್ಪನಿಗೆ ನೀಡುತಿದ್ದರು. ಇವರಿಗೆ ತುಳುನಾಡಿನ ಸತ್ಯ ದೈವವಾದ ಅಣ್ಣಪ್ಪ ಪಂಜುರ್ಲಿಯ ಮೇಲೆ ಈ ರೀತಿಯಾದ ನಂಬಿಕೆ, ಭಕ್ತಿ ಬರಲು ಒಂದು ಕಾರಣವಿದೆ.


ಬಹಳ ವರ್ಷಗಳ ಹಿಂದೆ ಇದೆ ಸಾಲು ಕಂಬತ್ತಿ ತನ್ನ ಗೆಳೆಯರೊಂದಿಗೆ ನಲ್ಕೆಮಾರ್ ಗೆ ಬಂದು ಸಾರಾಯಿ ಸೇವಿಸಿ,ಅಮಲೆರಿಸಿಕೊಂಡು ದೈವಸ್ತಾನದ ಕಡೆ ಬರುವುದು ವಾಡಿಕೆಯಾಗಿತ್ತು, ಅಪ್ಪಟ ಕ್ರೈಸ್ತನಾಗಿದ್ದ ಇವನಿಗೆ ಸ್ವಲ್ಪ ಸ್ವಧರ್ಮದ ಮೇಲೆ ಪ್ರೀತಿ, ಊರಿನಲ್ಲಿ ಶ್ರಿಮಂತನೆಂಬ ಅಹಂಕಾರ ಹಾಗೂ ಮದಿರೆಯ ಅಮಲಿನಲ್ಲಿ ದೈವಸ್ತಾನವನ್ನು ಅದರ ಸುತ್ತಮುತ್ತಲಿನ ಪ್ರದೇಶವನ್ನು ಅಶೌಚಗೊಳಿಸುತಿದ್ದನು, ಇದರಿಂದ ಬೇಸರಗೊಂಡ ಗ್ರಾಮಸ್ತರು ವರ್ಷದ ನೇಮದ ಸಮಯದಲ್ಲಿ ನೇರವಾಗಿ ಅಣ್ಣಪ್ಪನ ಬಳಿ ದೂರು ಕೊಟ್ಟರು ಅದಕ್ಕೆ ದೈವವು “ನಾನು ನಿಮಗೊಂದು ಉಪಾಯ ಹೇಳುತ್ತೇನೆ ಮುಂದಿನ ಅಮಾವಾಸ್ಯೆಯ ದಿನ ರಾತ್ರಿ ನೀವೆಲ್ಲರೂ ಒಟ್ಟು ಸೇರಿ ದೈವಸ್ತಾನ ಪ್ರಾಂಗಣದ ತುಂಬಾ ನೆಲ್ಲಿಕಾಯಿಯನ್ನು ಹರಡಿಬಿಡಿ ಮುಂದಿನದ್ದು ನಾನು ನೋಡಿಕೊಳ್ಳುತ್ತೆನೆ “ಎಂದು ಅಭಯದ ನುಡಿಯನ್ನು ಕೊಟ್ಟಿತು.

@beautyoftulunad
ಹಾಗೆ ಗ್ರಾಮಸ್ತರು ದೈವ ಹೇಳಿದಂತೆಯೆ ನಡೆದುಕೊಂಡರು, ಆ ಅಮಾವಾಸ್ಯೆಯ ದಿನ ಸಾಲು ಕಂಬತ್ತಿ ಸಾರಾಯಿಯ ನಶೆಯಲ್ಲಿ ದೈವಸ್ತಾನದ ಪ್ರಾಂಗಣಕ್ಕೆ ಬಂದಾಗ ಚೆಲ್ಲಿದ್ದ ನೆಲ್ಲಿಕಾಯಿಯ ಅರಿವಿಲ್ಲದೆ ಅದರ ಮೇಲೆ ಕಾಲಿಟ್ಟು ಜಾರಿ ಬಿಳುತ್ತಾನೆ, ಅವನು ನೆಲಕ್ಕೆ ಬಿಳುತಿದ್ದಂತೆಯೆ ಅಣ್ಣಪ್ಪ ಪಂಜುರ್ಲಿಯು ಆತನ ಕೊರಳನ್ನು ಅಮುಕಿ ಹಿಡಿಯುತ್ತದೆ ಇದನ್ನು ನೋಡಿದ ಆತನ ಹಿಂಬಾಲಕರು ಹೆದರಿ ಓಡಿ ಹೋಗುತ್ತಾರೆ, ಆಗ ಸಾಲು ಕಂಬತ್ತಿಯು “ಯಾರು ನೀನು ಎಂದು ಕೇಳುತ್ತಾನೆ, ನನಗೆ ಏನೂ ಮಾಡಬೇಡ, ನನ್ನನ್ನೂ ಬಿಟ್ಟುಬಿಡು ಎಂದು ಕೇಳಿಕೊಳ್ಳು ತ್ತಾನೆ ಆಗ ದೈವವು “ನಾನು ಅಣ್ಣಪ್ಪ ದೈವ, ನೀನು ನನ್ನ ಸನ್ನಿಧಾನವನ್ನು ಹಾಳುಮಾಡುತಿದ್ದಿ ಎಂದು ಕೋಪದಿಂದ ನುಡಿಯಿತು ಆಗ ಭಯಗೊಂಡ ಸಾಲು ಕಂಬತ್ತಿ “ನನ್ನನ್ನೂ ಬಿಟ್ಟುಬಿಡು, ನಿನಗೆ ಏನು ಬೇಕೆಂದು ಕೇಳು ನಾನು ಕೊಡುತ್ತೇನೆ, ನನ್ನ ಜೀವನ ಪರಿಯಂತ ನಿನ್ನ ಆರಾಧನೆಯನ್ನು ಮಾಡಿಕೊಂಡು ಬರುತ್ತೇನೆ, ನನ್ನನ್ನು ನಂಬು” ಎಂದು ಕೇಳಿಕೊಂಡ ನಂತರ ಆತನನ್ನು ಬಿಟ್ಟು ಮಾಯವಾಗಿ ಹೋಯಿತು.

@beautyoftulunad
ನಂತರ ಸಾಲು ಕಂಬತ್ತಿಯು ಚರ್ಚಿನ ಸ್ತಳದಲ್ಲಿ ಅಣ್ಣಪ್ಪನಿಗೆ ಗುಡಿಯನ್ನು ಕಟ್ಟಿ, ವರ್ಷಂಪ್ರತಿ ಅದ್ದೂರಿಯಿಂದ ನೇಮೊತ್ಸವವನ್ನು ಮಾಡಿ ಅಣ್ಣಪ್ಪನನ್ನು ಭಕ್ತಿಪೂರ್ವಕವಾಗಿ
ಆರಾಧಿಸಿಕೊಂಡು ಬಂದ, ಇದ್ದಕ್ಕೆಯೆ “ಭಯವೆ ಭಕ್ತಿಯ ಮೂಲವೆಂದು ಹಿರಿಯರು ಹೇಳಿರಬೇಕು. ಈ ವಿಷಯವು ಮೊಡಂಕಾಪು ಇಗರ್ಜಿಯವರಿಗೆ ತಲುಪಿತು, ಆದರೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದರು, ಒಂದು ದಿನ ವಂದನಿಯ ಧರ್ಮ ಗುರುಗಳಾದ ಬಲ್ತಾಜಾರ್ ಅರಾನ್ಹಾ ಅವರು ಸಾಲು ಕಂಬತ್ತಿಯನ್ನು ಕರೆದು ದೇವರ ಸಮ್ಮುಖದಲ್ಲಿ ತಪ್ಪಿತಸ್ಥ, ಧರ್ಮ ಬಾಹಿರ ಕೆಲಸ ಮಾಡಿದವನು ಎಂದು ಹೇಳಿ ಒಂದು ಮಾತನ್ನು ಹೇಳಿದರು “ನೀನು ಸತ್ತರೆ ನರಕಕ್ಕೆ ಹೋಗುತ್ತಿ, ನಿನಗೆ ಸ್ವರ್ಗ ಸಿಗುವುದಿಲ್ಲ ಎಂದು ಹೇಳುತ್ತಾರೆ ಆಗ ಸಾಲು ಕಂಬತಿ ನಾನು ದೈವವನ್ನು ನಂಬುತ್ತೆನೆ, ಏಸುಸ್ವಾಮಿಯನ್ನು ನಂಬುತ್ತೆನೆ ನನ್ನ ಭಕ್ತಿ ಅಚಲ ಹಾಗಾಗಿ ನಾನು ಸತ್ತರೆ ಖಂಡಿತವಾಗಿ ಸ್ವರ್ಗಕ್ಕೆಹೋಗುತ್ತೇನೆ, ಇದರ ಗುರುತಾಗಿ ನಾನು ಸತ್ತದಿನ ಇಗರ್ಜಿಯ ಮುಖ್ಯದ್ವಾರದಲ್ಲಿ ನನ್ನ ಕೈಯ ಪಡಿಯಚ್ಚು ಮೂಡುತ್ತದೆ ಎಂದು ಹೇಳಿ ಹೋಗುತ್ತಾರೆ. @beautyoftulunad

“ಹಾಗೆಯೆ ಸಾಲು ಕಂಬತ್ತಿ ಸತ್ತ ದಿನ ಆತನ ಕೈಯ ಪಡಿಯಚ್ಚು ಮುಖ್ಯದ್ವಾರದಲ್ಲಿ ಇದ್ದದನ್ನು ಕಂಡ ಗುರುಗಳು ಅಚ್ಛರಿಗೊಂಡು ಸಾಲುಕಂಬತ್ತಿಗಾಗಿ ವಿಶೇಷ ಪೂಜೆ ಮಾಡಿದರು ಕೆಲವು ವರ್ಷಗಳ ಹಿಂದೆ ಆತನ ಕೈಯ ಗುರುತು ಮುಖ್ಯದ್ವಾರದಲ್ಲಿ ಕಾಣಸಿಗುತ್ತಿತ್ತು, ಇಗರ್ಜಿಯ ಪುನರ್ ನವೀಕರಣದ ನಂತರ ಈ ದ್ವಾರವನ್ನು ತೆರವುಗೊಳಿಸಿದ್ದಾರೆ. ಹಾಗಾಗಿ ಸಾಲು ಕಂಬತ್ತಿಯನ್ನು ಈಗಲೂ ದೈವ ವಲಸರಿ ನೇಮದ ಸಂಧರ್ಬ “ಸಾಲ್ ಕಂಬತ್ತಿ ಮಲ್ತಿನ ಕಟ್ಟ್ ಯನ್ನ “ಎಂದು ಆತನ ಭಕ್ತಿಯನ್ನು ಸ್ಮರಿಸುತ್ತದೆ. ಆಧಾರ ಗ್ರಂಥ: ” ಮಂಗ್ಲಿಮಾರ್ ಶ್ರಿ ಅಣ್ಣಪ್ಪ ಸ್ವಾಮಿ, ಜುಮಾದಿ ಬಂಟ ಪರಿವಾರ ದೈವಗಳು ನಡೆದು ಬಂದ ದಾರಿ ” ಬರಹ : ಫನಿಷ್ ಅಮ್ಟಾಡಿ

inputs: beauty of tulunad


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »