TOP STORIES:

FOLLOW US

ಜಯವುಲ್ಲ ಬೆಮ್ಮೆರ್

Author Venkatesh Karkera ಬೈದರ್ಕಳ ಪಾಡ್ದನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಬುದ್ಯಂತನನ್ನು ಕೊಲ್ಲುವ ಪ್ರಕರಣದಲ್ಲಿ “ಬುದ್ಯಂತನ್ ಜಯಿಪುನು” (ಬುದ್ಯಂತನನ್ನು ಜಯಿಸುವುದು) ಎಂಬ ಪದಪ್ರಯೋಗ ಕಂಡುಬರುತ್ತದೆ. ಆದರೆ ಮುಂದಕ್ಕೆ ಅದೇ ಬೈದರ್ಕಳು ಚಂದುಗಿಡಿಯನ್ನು ಕೊಲ್ಲುವಾಗ ಚಂದುಗಿಡಿಯನ್ನು ಕೊಂದಿದ್ದು ಎನ್ನಲಾಗುತ್ತದೆಯೇ ಹೊರತು ಜಯಿಸಿದ್ದು ಎನ್ನಲಾಗುವುದಿಲ್ಲ. ಬುದ್ಯಂತ ಪಡುಮಲೆಯ ಮಹಾಮಂತ್ರಿಯಾದರೆ ಚಂದುಗಿಡಿ ಪಂಜದ ಮಹಾಮಂತ್ರಿಯಾಗಿದ್ದ. ಇಬ್ಬರೂ ಸಮಾನ ಸ್ಥಾನಮಾನ ಹೊಂದಿದ್ದರೂ ಇಬ್ಬರ ವಧೆಯನ್ನು ಬೇರೆಬೇರೆ ಹೆಸರಿಂದ ಕರೆಯಲಾಗಿದೆ. ಅದರಲ್ಲೂ ವಿಶೇಷವೆಂದರೆ ಚಂದುಗಿಡಿಯನ್ನು ಕೊಂದಿದ್ದು ಯುದ್ದರಂಗದಲ್ಲಿ, ಅಲ್ಲಾದರೆ ಸಾಮಾನ್ಯ ಭಾಷಾ ಬಳಕೆಯಂತೆ ಕೊಲ್ಲುವುದು ಎನ್ನುವ […]