ಬಿಲ್ಲವ ಸಮಾಜದ ಭರವಸೆಯ ಸೂರ್ಯ ಜನ್ಮದಿನದ ಸಲುವಾಗಿ ನುಡಿ ಬರಹ

ಎರಡು ವರ್ಷಗಳ ಹಿಂದೆ ಜಯ ಸುವರ್ಣರ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅವರ ಮಗ ಸೂರ್ಯಕಾಂತ್ ಸುವರ್ಣರನ್ನು ಸಂದರ್ಶನ ಮಾಡಲು ಗೊರೆಗಾವ್‍ನಲ್ಲಿರುವ ಜಯ ಸುವರ್ಣರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಜಯ ಸುವರ್ಣರನ್ನೇ ಹೋಲುತ್ತಿದ್ದ ಸೂರ್ಯಕಾಂತ್ ಮಿತಭಾಷಿಯೆಂದು ತಿಳಿದಾಗ ನಾನು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತೋ ಇಲ್ಲವೋ ಎನ್ನುವ ಸಂದೇಹ ಮೂಡಿತ್ತು. ಗಂಭೀರವಾದ ಮುಖದಲ್ಲಿ ಸ್ಥಾಯಿಯಾಗಿರುವ ಶಾಂತಭಾವ ಮತ್ತು ಪರಿಶುದ್ಧವಾದ ಮನಸ್ಸನ್ನು ಸಾಕ್ಷೀಕರಿಸುವ ಮೃದು ಮಂದಹಾಸದಿಂದಲೇ ಅಂದು ನನ್ನನ್ನು ಸ್ವಾಗತಿಸಿದರು. ನಾನು ಕೇಳಿದ ಎಲ್ಲಾ […]