ಕದ್ರಿ ಮಂಜುನಾಥ ದೇವಸ್ಥಾನ,ಪಣಂಬೂರು ನಂದನೇಶ್ವರ ದೇವಸ್ಥಾನಕ್ಕೂ ಬಿಲ್ಲವರಿಗೂ ಪ್ರಾಚೀನ ನಂಟು
ಕದ್ರಿ ಮಂಜುನಾಥ ದೇವಸ್ಥಾನ,ಪಣಂಬೂರು ನಂದನೇಶ್ವರ ದೇವಸ್ಥಾನಕ್ಕೂ ಬಿಲ್ಲವರಿಗೂ ಪ್ರಾಚೀನ ನಂಟು ಬಿಲ್ಲವ ಸಮಾಜದ ಪ್ರಮುಖರಾದ ಅರಸಪ್ಪನವರು 1865ರಲ್ಲಿ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಬಿಲ್ಲವರಿಗೆ ಪ್ರವೇಶ ಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು ಆದರೆ ಪ್ರಯೋಜನ ಆಗಲಿಲ್ಲ. ಈ ನೆಲವನ್ನು ಆಳಿದ ಬಿಲ್ಲವರಿಗೂ ಕದ್ರಿ ದೇವಸ್ಥಾನಕ್ಕೂ ಪ್ರಾಚೀನ ನಂಟು. ಈ ದೇವಸ್ಥಾನದ ಬದಿಯಲ್ಲೇ ಪೂರ್ವ ದಿಕ್ಕಿನಲ್ಲಿ ಬಿಲ್ಲವರ ಮನೆ ಇದ್ದು, ಆ ಮನೆತನದವರೇ ಇಲ್ಲಿಯ ದುರ್ಗಾದೇವಿಗೆ ವಜ್ರದ ಮೂಗುತಿಯನ್ನು ಮತ್ತು ಮಂಜುನಾಥನಿಗೆ ಕಂಚಿನ ದೀಪದಾನಿಯನ್ನು ಹರಕೆಯಾಗಿ ಒಪ್ಪಿಸಿದರೆಂದು ಐತಿಹ್ಯಗಳ ಉಲ್ಲೇಖವಿದೆ. […]