ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ ಗೆಜ್ಜೆಗಿರಿ ಕ್ಷೇತ್ರದ ಧಾರ್ಮಿಕ ಹಿನ್ನಲೆ ಹಾಗೂ ವಿಶ್ವದ ಬಿಲ್ಲವರು ಒಗ್ಗಟ್ಟಿನ ಮೂಲಕ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಹಾಗೂ ಹೊರೆಕಾಣಿಕೆಯ ಇತಿಹಾಸ ನಿರ್ಮಾಣ ಮಾಡಿದ ಬಗ್ಗೆ ವಿವರಿಸಿ ಬಂಟ್ವಾಳ ತಾಲೂಕಿನ ಮೂಲಕ ಬಿಲ್ಲವ ಸಮಾಜ ಭಾಂಧವರು ಜಾತ್ರಾಮಹೋತ್ಸವದ ಯಶಸ್ವಿಗೆ […]