ಭಾಷೆ, ಧರ್ಮ ಹೀಗೆ ಅನೇಕ ರೀತಿಯ ಪೇಜುಗಳು ತಮ್ಮದೇ ಆದ ನಿಲುವಿನ ಮೂಲಕ ಸಮಾದಲ್ಲಾಗುವ ಪ್ರತಿಭೆ, ಸಂಸ್ಕ್ರತಿ, ಆಚರಣೆಗಳ ವಿಚಾರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಭಂದಪಟ್ಟಂತಹ ಪೇಜುಗಳನ್ನು ರಚಿಸಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದೆ…
ಹೀಗೆ ಬಿಲ್ಲವ ಸಮಾಜದ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ, ಬಿಲ್ಲವ ಯುವ ತರುಣರು ತಮ್ಮದೇ ಆದ ಪೇಜುಗಳನ್ನು ರಚಿಸಿ ಜನರಿಗೆ ಸಮಾಜದ ಸಂಸ್ಕ್ರತಿಯ ಅರಿವು, ಸಮಾಜದ ಪ್ರತಿಭೆಗಳ ಪರಿಚಯ ಹೀಗೆ ಅನೇಕ ವಿಚಾರಗಳನ್ನು ಪೇಜಿನ ಮೂಲಕ ತಮ್ಮ ಒಂದಿಷ್ಟು ಸಮಯವನ್ನು ಇಟ್ಟು ತಲುಪಿಸುತ್ತಿದ್ದಾರೆ…
ಬಿಲ್ಲವ ಸಮಾಜದ ಹೆಸರಾಂತ ಪೇಜುಗಳಲ್ಲಿ ಬಿಲ್ಲವ ವಾರಿಯರ್ಸ್ ತಂಡವು ಕೂಡ ಅತಿ ವೇಗದಲ್ಲಿ ಅನೇಕಜನರ ಮೆಚ್ಚುಗೆಯನ್ನು ಪಡೆದು 71 ಸಾವಿರ ಪ್ರೀತಿಗೆ ಪಾತ್ರವಾಗಿದೆ…
ಸಮಾಜಕ್ಕಾಗಿ ಇನ್ನಷ್ಟು ಸೇವೆಯನ್ನು ಮಾಡುವ ಶಕ್ತಿ ಈ ಪೇಜಿಗಿರಲಿ, ಹಾಗು ಸಮಾಜಕ್ಕೆ ನಿರಂತರ ಶ್ರಮಿಸುವ ಪ್ರತಿಯೊಂದು ಪೇಜಿಗು ನಮ್ಮ ಪೇಜಿನ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು…