ಉದಯ ಪೂಜಾರಿ ಸಾರಥ್ಯದ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ ರಿ. ಪುತ್ತೂರು ಘಟಕವು ಬಡ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಶೈಕ್ಷಣಿಕ ದತ್ತು ಯೋಜನೆಯಡಿಯಲ್ಲಿ ದತ್ತು ತೆಗೆದುಕೊಂಡು ಅವರಿಗೆ ಆರ್ಥಿಕ ಸಹಕಾರವನ್ನು ಕಳೆದ ಎರಡು ವರ್ಷದಿಂದ ನೀಡುತ್ತಿದೆ.
ಇವರಲ್ಲಿ ಕಡಬ ತಾಲೂಕು ಕೊಯಿಲ ಗ್ರಾಮದ ಪಟ್ಟೆ ಸಂಜೀವ ಪೂಜಾರಿ ಮತ್ತು ರೇವತಿ ದಂಪತಿಗಳ ಪುತ್ರಿ ನವ್ಯಶ್ರೀ ವಿಜ್ಞಾನ ವಿಭಾಗದಲ್ಲಿ 584 ಅಂಕ 97.33% ಪಡೆದು ಡಿಸ್ಟಿಂಕ್ಷನಿಗೆ ಭಾಜನರಾಗಿದ್ದಾರೆ. ಇನ್ನೂ ಮುಂದಕ್ಕೂ ಕೂಡ ಇವರ ವಿಧ್ಯಾಭ್ಯಾಸಕ್ಕೆ ಬಿರುವೆರ್ ಕುಡ್ಲ ರಿ. ಪುತ್ತೂರು ಘಟಕದಿಂದ ಸಹಕಾರವನ್ನು ನೀಡುತ್ತೇವೆ. ಇವರಿಗೆ ಆರ್ಥಿಕ ನೆರವು ನೀಡಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂಧನೆಗಳು.
Email us: billavaswarriors@gmail.com
www.billavaswarriors.com