ಶ್ರೀ ಗೆಜ್ಜೆಗಿರಿ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಟಾಟಾ ಸಮೂಹದನೂತನ ಲಾರಿ ಯ ಸೇವೆಕೊಡುಗೈ ಧಾನಿಗಳೂ, ಸಮಾಜ ಸೇವಕರೂ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಗೌರವ ಸಲಹೆಗಾರರು, ಹೋಟೆಲ್ ಉದ್ಯಮಿ, ಸಾಗರ ರತ್ನಂ ಗ್ರೂಪ್ಸ್ MD, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸರಳ ಸಜ್ಜನಿಕೆಯ ಸಹೃದಯಿ ಶ್ರೀ ಜಯರಾಮ್ ಬನನ್ಅವರಿಂದ ಶ್ರೀ ಗೆಜ್ಜೆಗಿರಿಯ ನೂತನ ಯಕ್ಷಗಾನ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷರೂಪಾಯಿ ಮೊತ್ತದ ನೂತನ ಲಾರಿಯ ಸೇವೆಯ ರೂಪದಲ್ಲಿ ಶ್ರೀ ದೇಯಿ ಬೈದೆತಿ ಕೋಟಿ–ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರಗೆಜ್ಜೆಗಿರಿಗೆ ಸಮರ್ಪಿಸಲಿದ್ದಾರೆ.
ದಿನಾಂಕ 27-11-2022 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅದ್ದೂರಿಯಾಗಿ ಜರುಗುವ ನೂತನ ಮೇಳದ ಉದ್ಘಾಟನೆ ಹಾಗೂಪ್ರಥಮ ದೇವರ ಸೇವೆಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಶ್ರೀಯುತರ ಭಕ್ತಿಯ ಸೇವೆಗೆ ಶ್ರೀಯುತರಿಗೆ ಇನ್ನಷ್ಟು ಕಾಲ ಸರ್ವರ ಹಾರೈಕೆಗಳೊಂದಿಗೆ ಆಯುರಾರೋಗ್ಯ ಸುಖ, ಶಾಂತಿನೆಮ್ಮದಿಯ ಜೀವನವನ್ನು ಆ ಭಗವಂತನು ಹಾಗು ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ದೇಯಿ ಬೈದೆತಿಕೋಟಿ–ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಗೆಜ್ಜೆಗಿರಿ ಮತ್ತು ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಪರವಾಗಿಧನ್ಯವಾದಗಳು.