ನಾಗುರಿಯಲ್ಲಿ ನವಂಬರ್ 19ರಂದು ಆಟೋರಿಕ್ಷದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಸಂಭವಿಸಿ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕಪುರುಷೋತ್ತಮ್ ಪೂಜಾರಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಪುರುಷೋತ್ತಮ್ ಅವರು ಪೂರ್ಣವಾಗಿ ಗುಣಮುಖಗೊಂಡಿದ್ದಾರೆ ಎಂದು ಅವರು ಚಿಕಿತ್ಸೆ ನೀಡಿದ ಮಂಗಳೂರಿನ ಫಾದರ್ಮುಲ್ಲರ್ ಆಸ್ಪತ್ರೆಯ ಅಧೀಕ್ಷಕ ಡಾ. ಉದಯಕುಮಾರ್ ಕೆ ತಿಳಿಸಿದ್ದಾರೆ.
ಪುರುಷೋತ್ತಮ ಅವರು ಸೋಂಕಿನಿಂದ ರಕ್ಷಿಸಿಕೊಳ್ಳಲು ಇನ್ನು ಕನಿಷ್ಠ ಒಂದು ತಿಂಗಳ ಕಾಲ ಮನೆಯಲ್ಲಿ ಉಳಿದುಕೊಳ್ಳುವಂತೆವೈದ್ಯರು ಸೂಚಿಸಿದ್ದಾರೆ ಎಂದು ಅವರು ಮನೆಯವರು ತಿಳಿಸಿದ್ದಾರೆ .
ಪುರುಷೋತ್ತಮ ಅವರು ಮನೆ ದುಃಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಬೆಳದಿಂಗಳು ಫೌಂಡೇಶನ್ ಮೂಲಕ ದುರಸ್ತಿ ಕೈಗೊಳ್ಳಲಾಗಿದೆಹೀಗಾಗಿ ಕುಟುಂಬ ಸದಸ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.
ಪುರುಷೋತ್ತಮ ಅವರಿಗೆ ಸರಕಾರದಿಂದ ಪರಿಹಾರ ನೀಡುವುದಾಗಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ ಆದರೆಪರಿಹಾರ ಇನ್ನಷ್ಟೇ ದೊರೆಯಬೇಕಿದೆ ವ್ಯಕ್ತಿಕ ನೆಲೆಯಲ್ಲಿ ಸಚಿವರು 50,000 ಮತ್ತು ಸುನಿಲ್ ಕುಮಾರ್ ೨೫ ಸಾವಿರ ರೂಪಾಯಿನೆರವು ನೀಡಿದ್ದರು.
ಪುರುಷೋತ್ತಮ ಅವರು ಚಿಕಿತ್ಸೆಯ ವೆಚ್ಚವನ್ನು ಇ ಎಸ್ ಐ ಮತ್ತು ಸರಕಾರದ ವತಿಯಿಂದ ಬರಿಸಲಾಗಿದೆ ಎಂದು ಮೂಲಗಳುತಿಳಿಸಿವೆ.