TOP STORIES:

FOLLOW US

ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು …


ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು

ಪದ್ಮರಾಜ್ ರಾಜಕೀಯಕ್ಕೆ ಬರುತ್ತಾರಾ…? ಬಂದರೂ ಯಾವ ಪಕ್ಷ..? ಕೊಳಕು ರಾಜಕಾರಣಕ್ಕೆ ಪದ್ಮರಾಜ್ ರಂತಹ ವ್ಯಕ್ತಿತ್ವಸರಿಹೊಂದುತ್ತದೆಯೋ..? ಹೀಗೆ ಹತ್ತು ಹಲವಾರು ಪ್ರಶ್ನೆಗಳು

ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಬೆರೆತು, ಜನ ಮೆಚ್ಚಿದ ನಾಯಕನಾಗಿ, ಸಮಾಜಸೇವೆಯನ್ನೇ ಉಸಿರಾಗಿ ಇರಿಸಿಕೊಂಡಪದ್ಮರಾಜ್ ದೀನರ ಕಷ್ಟಕ್ಕೆ ಸ್ಪಂದಿಸುವ ದಾನಿಯಾಗಿ, ದಮನಿತರ ದನಿಯಾಗಿ, ಪದ್ಮರಾಜ್ ಎಂದರೆ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಎಂಬ ಮಟ್ಟಕ್ಕೆ ಬೆಳೆದದ್ದು ಗುರುತತ್ವದಲ್ಲಿ ಅವರಿರಿಸಿದ ನಿಷ್ಠೆಯಿಂದಲೇ ಎಂದರೆ ತಪ್ಪಾಗಲಾರದು

ಸಮಾಜದ ಎಲ್ಲಾ ಸಮಸ್ಯೆ ಬಗೆಹರಿಸಲು ಜನಬಲ ಹಾಗೂ ಧನಬಲ ಇದ್ದರೆ ಸಾಲದು, ರಾಜಕೀಯ ಶಕ್ತಿಯೂ ಬೇಕೆಂಬ ಹಿರಿಯರಸಲಹೆಯ ಅನುಸಾರ, ರಾಜಕೀಯ ಪ್ರವೇಶಕ್ಕೂ ಸಿದ್ಧ ಎಂಬ ನಿರ್ಧಾರ ತಳೆದಾಗ, ತನ್ನ ಜನಪ್ರಿಯ ವ್ಯಕ್ತಿತ್ವ, ಇದುವರೆಗೆ ಸವೆಸಿದಹೋರಾಟದ ಹಾದಿ, ನಂಬಿಕೊಂಡು ಬಂದ ಜಾತ್ಯಾತೀತ ಸಿದ್ಧಾಂತಗಳ ಪ್ರಕಾರ ಪದ್ಮರಾಜ್ ಹೆಸರು ಚುನಾವಣಾ ಅಭ್ಯರ್ಥಿಯಾಗಿರಾಷ್ಟ್ರೀಯ ಪಕ್ಷಗಳ ಅಂಗಣಕ್ಕೆ ತಲುಪಿದ್ದು ದೇಶದಲ್ಲಿ ಪ್ರಬುದ್ಧ ರಾಜಕೀಯ ವ್ಯವಸ್ಥೆ ಬಯಸಿದ್ದ ಜನರಿಗೆ ಸಂತಸ ತಂದವಿಚಾರವಾಗಿತ್ತು.

ಜಿಲ್ಲೆಯಾದ್ಯಂತ ಜನಪ್ರಿಯತೆ ಹೊಂದಿದ್ದ ಪದ್ಮರಾಜ್ ಹೆಸರು ಲೋಕಸಭೆ ಅಥವಾ ರಾಜ್ಯಸಭೆಗೋ ಎಂಬ ಚರ್ಚೆಯಲ್ಲಿದ್ದಾಗಲೇ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾರಮ್ಯ ಪಡೆಯಲು ಪ್ರಯತ್ನಿಸುತ್ತಿದ್ದ ಪಕ್ಷಗಳಿಗೆ ಪದ್ಮರಾಜ್ ಹೆಸರು ಟ್ರಂಪ್ ಕಾರ್ಡ್ ಆಗಿಕಾಣಿಸಿದ್ದು ಕೋಮು ದಳ್ಳುರಿಯಿಂದ ಬೇಸತ್ತಿದ್ದ ಕರಾವಳಿಗೆ ಆಶಾಕಿರಣವಾಗಿ ಕಂಡಿದೆ.

ಟಿಕೆಟ್ ಸಿಗುತ್ತದೆಯೋ ಇಲ್ಲವೋ ಪದ್ಮರಾಜ್ ಅವರನ್ನು ತಮ್ಮ ನಾಯಕರೆಂದು ಜನ ಒಪ್ಪಿಯಾಗಿದೆ.  ಅಪಪ್ರಚಾರವನ್ನೆ ನಂಬಿರುವಇಂದಿನ ರಾಜಕೀಯ ಯುಗದಲ್ಲಿ ಪದ್ಮರಾಜ್ ವ್ಯಕ್ತಿತ್ವದ ಬೆಲೆ ಪುಟಕ್ಕಿಟ್ಟ ಚಿನ್ನದಂತೆ ಮಿನುಗಿ, ಅವರ ಸಮಾಜಸೇವಾ ಕೈಂಕರ್ಯಗಳುಸಾಂಗವಾಗಿ ಮುಂದುವರಿಯುವುದಂತೂ ಖಂಡಿತ

ಪದ್ಮರಾಜ್ ಗೆ ರಾಜಕೀಯ ಅವಕಾಶ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ರಾಜಕೀಯಕ್ಕೆ ಪದ್ಮರಾಜ್ ಅಂತಹ ವ್ಯಕಿಗಳಅಗತ್ಯವಿರಿವುದು ಅಕ್ಷರಶಃ ಸತ್ಯ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »