TOP STORIES:

ಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಕೂಡಲೇ ಹಣ ಮೀಸಲಿಡುವುದಕ್ಕೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡುವುದಕ್ಕೆ ಒತ್ತಾಯ.


ಪೂಜ್ಯ ಸ್ವಾಮೀಜಿಯವರ  ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ್ ರವರನ್ನು ಮತ್ತುಹಿಂದುಳಿದ ವರ್ಗದ ಸಚಿವರು ಶ್ರೀ ಶಿವರಾಜ್ ತಂಗಡಿ ಯವರನ್ನು ಭೇಟಿ ಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಕೂಡಲೇ ಹಣಮೀಸಲಿಡುವುದಕ್ಕೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡುವುದಕ್ಕೆ ಒತ್ತಾಯ.

ದಿನ ಬೆಂಗಳೂರಿನಲ್ಲಿ ಪೂಜ್ಯ ಸ್ವಾಮೀಜಿಯವರು ಮತ್ತು ಸಮಾಜದ ಹಿರಿಯ ಮುಖಂಡರು ಶ್ರೀ ಹೆಚ್. ಆರ್ ಶ್ರೀನಾಥ ಧಣಿಗಳುರಾಷ್ಟ್ರೀಯ ಈಡಿಗ  ಬಿಲ್ಲವ  ನಾಮಧಾರಿ ದೀವರ ಮಹಾ ಮಂಡಳಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳಾದಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರನ್ನು  ಮತ್ತು ಹಿಂದುಳಿದ ವರ್ಗದ ಸಚಿವರು ಶ್ರೀ ಶಿವರಾಜ್ ತಂಗಡಿ ಯವರನ್ನು  ಭೇಟಿಯಾಗಿಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಹಣವನ್ನು  ಮೀಸಲಿಡದ ಕಾರಣ  ಸಮಾಜದ ನೋವನ್ನು ವ್ಯಕ್ತಪಡಿಸಿದರು ಮತ್ತು ದಿನಕರ್ನಾಟಕದ  ಕೆಲ ಪತ್ರಿಕೆಯಲ್ಲಿ ಕೂಡ 24 ನಿಗಮಗಳಲ್ಲಿ 7 ನಿಗಮಗಳಿಗೆ ಹಣವನ್ನು ಮೀಸಲೀಡಲಾಗಿರುವುದ್ದನ್ನು ಶ್ರೀ ಗಳುಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ  ಶ್ರೀ ಡಿ.ಕೆ ಶಿವಕುಮಾರ್ ಮತ್ತು ಹಿಂದುಳಿದ ವರ್ಗದ ಸಚಿವರು ಶ್ರೀ ಶಿವರಾಜ್ತಂಗಡಿಯವರಿಗೆ ಪತ್ರಿಕೆ ಪ್ರತಿಯನ್ನು ನೀಡಿದರು, ಹಾಗಾಗಿ ಕೂಡಲೇ  ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಚುನಾವಣೆಪರ್ವದಲ್ಲಿ ನೀಡಿದ ಭರವಸೆಯಂತೆ 250  ಕೋಟಿ ರೂಗಳನ್ನು  ಬಿಡುಗಡೆ ಮಾಡಬೇಕು ಮತ್ತು ಬ್ರಹ್ಮ ಶ್ರೀ ನಾರಾಯಣ ಗುರು  ನಿಗಮಕ್ಕೆ ಅಧ್ಯಕ್ಷರನ್ನು ಮತ್ತು  ಪದಾಧಿಕಾರಿಗಳನ್ನು  ಆಯ್ಕೆ ಮಾಡಬೇಕೆಂದು  ಶ್ರೀಗಳು ಸಚಿವರಿಗೆ ತಿಳಿಸಿದರು, ಇದಕ್ಕೆಸಕರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ಮತ್ತು ಸಚಿವರು ಕೂಡಲೇ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದುಮತ್ತು ತಮ್ಮ ಸಮಾಜಕ್ಕೆ  ಯಾವ ರೀತಿಯಲ್ಲಿಯೂ ಅನ್ಯಾಯವಾಗದಂತೆ  ನೋಡಿಕೊಳ್ಳಲಾಗುವುದೆಂದು ಬರವಸೆನೀಡಿದರು ಹೀಗೆಸಮಾಜದ ಸಂಪೂರ್ಣ ನೋವುಗಳನ್ನು  ಶ್ರೀಗಳು  ತೋಡಿಕೊಂಡರು, ಕೂಡಲೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ  ಸನ್ಮಾನ್ಯಉಪಮುಖ್ಯಮಂತ್ರಿಗಳು ಮತ್ತು    ಸಚಿವರು ಗುರುಗಳಿಗೆ ತಿಳಿಸಿದರು.

ಸಮಯದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿಯಾದ ಡಾ. ಶ್ರೀ ಮಂಚೇಗೌಡ, ರಾಜ್ಯಾಧ್ಯಕ್ಷರಾದ ಶ್ರೀ  ಜಿ. ಎನ್ ಸಂತೋಷ್, ಶ್ರೀ ನಾಗರಾಜ್ ನಾಯಕ್ ,ಶ್ರೀ ಜನಾರ್ಧನ್,ಶ್ರೀ ಉದಯ ಗೌಡ , ಶ್ರೀ ನಾಗಯ್ಯಗುತೇಧಾರ್, ಶ್ರೀ ಗುರುರಾಜ್ ,ಶ್ರೀ ಸುನಿಲ್,ಶ್ರೀ ಸಚಿನ್ ನಾಯಕ್ ಶ್ರೀಗಳ ಜೊತೆ ಉಪಸ್ಥಿತರಿದ್ದರು.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »