ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..!
ಅದಷ್ಟೇ ನಾವು ಪ್ರಾರ್ಥಮಿಕ ಶಿಕ್ಷಣ ಮುಗಿಸಿ ಕಾಲೇಜು ಸೇರಿದ ಸಮಯ. ಆಗ ತಾನೇ ಭೂಗತ ಜಗತ್ತು ಮಂಗಳೂರನ್ನು ಕಬ್ಜಾ ಮಾಡಲು ಹವಣಿಸುತ್ತಿದ್ದ ಕಾಲ.ಸಂಘ ಸಿದ್ಧಾಂತವನ್ನು ನೆಚ್ಚಿಕೊಂಡಿರುವ ನಾವು ಸಂಘದಂಗಳದಲ್ಲಿ ಆಟ ಆಡಿಕೊಂಡು ಸಂಘದ ಪ್ರಾರ್ಥಮಿಕ ಶಿಕ್ಷಾ ವರ್ಗ ಮುಗಿಸಿ ವಿದ್ಯಾರ್ಥಿಗಳಿಗೆ
ನಾಯಕರಾಗಿದ್ದೆವು.
ಉದಯ ಪೂಜಾರಿ ಎನ್ನುವ ಯುವಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದವೇ ಸರಿ.ಕಾಲೇಜು ಸಮಯದಲ್ಲೇ ವಿದ್ಯಾರ್ಥಿಗಳಿಗೆ ನಾಯಕನಾಗಿದ್ದು ಕೊಂಡು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಗೂಡಿಸಿದ ನಾಯಕನೆಂದರೆ ತಪ್ಪಾಗಲಾರದು.
ಸಮಸ್ಯೆ ಏನೇ ಆಗಿರಲಿ ಅದನ್ನು ಸಲೀಸಾಗಿ ಮುಗಿಸುವ ಜಾಯಮಾನ ನನ್ನ ಸ್ನೇಹಿತನದ್ದು.ಯಾರ ಬಗ್ಗೆನೂ ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ,ಅದು ಎಷ್ಟೇ ದೊಡ್ಡ ಕೊಂಬನಾದ್ರೂ
ಸರಿ.ಪದವಿ ವ್ಯಾಸಂಗ ಮುಗಿದ ನಂತರ ನಾನು ಉನ್ನತ ಶಿಕ್ಷಣ ಪಡೆದು ಬೇರೆಯೇ ನಾನು ನನ್ನದೇ ಕೆಲಸದಲ್ಲಿದ್ದೆ.ಆಗ ತಾನೇ ಬಿರುವೆರ್ ಕುಡ್ಲ ಹುಟ್ಟಿಕೊಂಡ ಸಮಯವದು.
“ಯಂಗ್ ಎಂಡ್ ಎನರ್ಜಿಕ್ ಲೀಡರ್ ಉದಯ್ ಪೂಜಾರಿ”ಯವರಿಂದ ನೇತೃತ್ವದಲ್ಲಿ ಆಗ ತಾನೇ ಉದಯಗೊಂಡ ಸಂಸ್ಥೆ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ).ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ನಮ್ಮಲ್ಲಿ ಜಾತಿ ಹುಡುಕಲ್ಲಿಲ್ಲ ಎಲ್ಲರೂ ಒಂದೇ ವಯಸ್ಸಿನ ಹುಡುಗರು.ಕಷ್ಟ ಬಂದರೂ ಒಟ್ಟಾಗಿ ಎದುರಿಸುವ ತಾಕ್ಕತ್ತು ದೇವರು ನಮಗೆ ಈಗಲೂ ನೀಡಿದ್ದಾರೆ.
ಸಾಮಾನ್ಯ ಸಂಸ್ಥೆಯಲ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡು ಅಶಕ್ತ ಬಡ ಜನರಿಗೆ ಹತ್ತು ಕೋಟಿಗೂ ಮಿಕ್ಕಿದ ಧನ ಸಹಾಯ ನೀಡಿದ್ದೇವೆ.ಕೈಲಾದ ಸಹಾಯ ನೀಡಿದ ತೃಪ್ತಿ ನಮಗಿದೆ.ಚಾಲಿ ಪೋಲಿ ದರ್ಬೇಸಿಗಳು ತಾಕ್ಕತ್ತು ಇದ್ರೆ ನಮ್ಮ ಎದುರು ಬಂದು ಮಾತಾಡಿ.ಅದು ಬಿಟ್ಟು ಹಿಂದಿನಿಂದ ಬಂದು ಉದಯ ಪೂಜಾರಿಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ಉತ್ತರ ಕುಮಾರನ ಪೌರುಷ ತೋರಿಸಬೇಡಿ.
#ಟೀಮ್_ಫ್ರೆಂಡ್ಸ್_ಬಲ್ಲಾಳ್_ಭಾಗ್_ಬಿರುವೆರ್_ಕುಡ್ಲ