ಶಾರದಾ ಎ.ಅಂಚನ್ ಇವರ ವೈದ್ಯಕೀಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ 2022 ನೇ ಸಾಲಿನ ದತ್ತಿ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದ್ದು ಮುಂಬಯಿ ಲೇಖಕಿ,ಸಾಹಿತಿ ಶ್ರೀಮತಿ ಶಾರದಾ ಎ.ಅಂಚನ್ ಕೊಡವೂರು ಇವರ ವೈದ್ಯಕೀಯ ಕೃತಿ “ರಕ್ತಶುದ್ಧಿ- ಆರೋಗ್ಯವೃದ್ಧಿ” ಕೃತಿಗೆ “ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ “ಲಭ್ಯವಾಗಿದೆ. ಈಗಾಗಲೇ ತನ್ನ”ರಕ್ತವೇ ಜೀವನದಿ”ಕೃತಿ ಗೆ ಕನ್ನಡ ಸಾಹಿತ್ಯ ಪರಿಷತ್ತಿನ ದಿ//ಡಾ.ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿಯನ್ನು ಪಡೆದಿರುವ ಶಾರದಾ ಎ.ಅಂಚನ್ ಇವರು ಇದುವರೆಗೆ ಸುಮಾರು ಹದಿನೇಳು ಕೃತಿಗಳನ್ನು ಪ್ರಕಟಿಸಿದ್ದು ಇವರ “ಪಾಡ್ದನ” ತುಳು ಕವನ ಸಂಕಲನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ,”ರಕ್ತವೇ ಜೀವನದಿ “ವೈದ್ಯಕೀಯ ಕೃತಿಗೆ ವಿಶ್ವೇಶ್ವರಯ್ಯ ಇಂಜೀನೀಯರಿಂಗ್ ಪ್ರತಿಷ್ಠಾನದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, “ನಡೆ ನೀ ಮುಂದೆ” ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಕೊಡಮಾಡುವ “ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ”ಗಳನ್ನು ಪಡೆದುಕೊಂಡಿದ್ದಾರೆ.
ಡಾ.ಕೆ.ಶಿವರಾಮ ಕಾರಂತ ಕಥಾ ಪುರಸ್ಕಾರ,PROF.H.S.K ಸಾಹಿತ್ಯ ಪ್ರಶಸ್ತಿ,ಚೈತನ್ಯಶ್ರೀ ಪ್ರಶಸ್ತಿ,ಕಾವ್ಯಸಿರಿ ಪ್ರಶಸ್ತಿ,ಬಸವ ಶ್ರೀ ಹಾಗೂ ಕಾವ್ಯಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಸಿರಿ ಪ್ರಶಸ್ತಿ,ಪ್ರೇಮಕವಿ ಪ್ರಶಸ್ತಿ,ಕರ್ನಾಟಕ ಯುವ ರತ್ನ ಪ್ರಶಸ್ತಿ,ತ್ಹೌಳವ ಸಿರಿ ಪ್ರಶಸ್ತಿ, ಪಂಚಕಥಾ ಪ್ರಶಸ್ತಿ,ಹುಬ್ಬಳ್ಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ವೀರರಾಣಿ ಕಿತ್ತೂರು ಚೆನ್ನಮ್ಮ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ,ದಸರಾ ಕಾವ್ಯ ಪುರಸ್ಕಾರ,ಗಡಿನಾಡ ಧ್ವನಿ ಕಾವ್ಯಭೂಷಣ ಪ್ರಶಸ್ತಿ.ಎಂ.ಬಿ .ಕುಕ್ಯಾನ್ ರೈಟರ್ ಆಫ್ ದಿ ಇಯರ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಶಾರದಾ ಅಂಚನ್ ಇವರು ಔದ್ಯೋಗಿಕವಾಗಿ ರಕ್ತನಿಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತನ್ನ ಕಾರ್ಯ ಕ್ಷೇತ್ರದಲ್ಲಿ ಇದುವರೆಗೆ ಸುಮಾರು 1000ಕ್ಕೂ ಹೆಚ್ಚು ರಕ್ತದಾನ ಶಿಭಿರಗಲ್ಲಿ ಭಾಗವಹಿಸಿದ್ದಾರೆ.ಸಂಗೀತದಲ್ಲೂ ಆಸಕ್ತಿ ಇರುವ ಇವರು ಗಾಯಕಿಯಾಗಿಯೂ ಪರಿಚಿತರಾಗಿದ್ದಾರೆ.