ಬಿರುವೆರ್ ಕುಡ್ಲದ ಫುಡ್‍ಫೆಸ್ಟ್ ಲಾಭಾಂಶದ 2.50ಲ.ರೂ ಚಿಕಿತ್ಸೆಗೆ ಹಸ್ತಾಂತರ
ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘನೆ
ಕುದ್ರೋಳಿ,ಜ.31: ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್ ,ಬಿರುವೆರ್ ಕುಡ್ಲದ ಯುವಕರ ಸಮೂಹ ಮಾಡುತ್ತಿರುವ ಸಮಾಜಮುಖೀ ಕೆಲಸವು ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಉತ್ತಮ ನಿದರ್ಶನ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಫ್ರೆಂಡ್ಸ್ ಬಳ್ಳಾಳ್ ಭಾಗ್ ಬಿರುವೆರ್ ಕುಡ್ಲ ಸಂಸ್ಥೆಯು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಸ್ಟ್ರೀಟ್ ಫುಡ್ ಉತ್ಸವದಲ್ಲಿ ಲಸ್ಸಿ ಸ್ಟಾಲ್ ಇಟ್ಟಿದ್ದು, ಇದರಲ್ಲಿ ಬಂದ 2.50 ಲಕ್ಷ ರೂ.ಪೂರ್ಣ ಲಾಭಾಂಶವನ್ನು ಐದು ಕುಟುಂಬಗಳ ಚಿಕಿತ್ಸೆಗಾಗಿ ಧನ ಸಹಾಯವನ್ನು ಹಸ್ತಾಂತರಿಸಿ ಮಾತನಾಡಿದರು.
ಈ ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದ ಸುಮಾರು 10 ಕೋ.ರೂಗಳಷ್ಟು ನಿಧಿಯನ್ನು ಅಶಕ್ತರ ಚಿಕಿತ್ಸೆಗೆ, ಶಿಕ್ಷಣಕ್ಕೆ, ವೀಲ್‍ಚೇರ್ ಸೇರಿದಂತೆ ವಿವಿಧ ಸಲಕರಣೆಯ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಹಿಂದೂ ಸಮಾಜದ ಒಗ್ಗಟ್ಟು ಹೀಗೆ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಾ ಬರುತ್ತಿದೆ.ಇಂತಹ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇದೆ ಎಂದರು.
*ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್* ಅವರು ಮಾತನಾಡಿ, ಯಾವುದೇ ಜಾತಿ ಮತ ನೋಡದೆ ಬಿರುವೆರ್ ಕುಡ್ಲ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡುತ್ತಾ ಬರುತ್ತಿರುವುದನ್ನು ಗಮನಿಸಿದ್ದೇನೆ.ಇಂತಹ ಸಂಘಟನೆಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು.ಬಡವರ್ಗಕ್ಕೆ ನೆರವು ಸಿಗುವಂತಾಗಬೇಕೆಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬಿರುವೆರ್ ಕುಡ್ಲ ಸಂಸ್ಥೆಗೆ ಸಮಾಜದಲ್ಲಿನ ಕಷ್ಟಗಳನ್ನು ನೀಗಿಸಲು ದೇವರು ಶಕ್ತಿ ನೀಡಲಿ,ಒಗ್ಗಟ್ಟಿನಿಂದ ಈ ಸಂಸ್ಥೆಯಿಂದ ಉತ್ತಮ ಸಮಾಜ ಮುಖಿ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ಅಧ್ಯಕ್ಷರಾದ ಎಚ್. ಎಸ್ ಸಾಯಿರಾಮ್, ಮುಡಾ ಮಾಜಿ ಅಧ್ಯಕ್ಷ ರವಿ ಶಂಕರ್ ಮಿಜಾರ್,ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಅಧ್ಯಕ್ಷ ಗಿರಿಧರ್ ಶೆಟ್ಟಿ, ರಣದೀಪ್ ಕಾಂಚನ್,ಜೋಸೆಫ್ ಕ್ರಾಸ್ತ ಮಾರ್ಟೀನ್,ರಾಧಾಕೃಷ್ಣ, ವಸಂತ ಪೂಜಾರಿ, ಉದಯಪೂಜಾರಿ ಬಳ್ಳಾಲ್‍ಬಾಗ್, ಜಿತೇಶ್ ಜೈನ್,ದರ್ಶನ್ ಜೈನ್, ಪ್ರಕಾಶ್ ಪಾಂಡೇಶ್ವರ,ಪ್ರಮೋದ್ ಬಳ್ಳಾಲ್ ಭಾಗ್,ರಜನಿ ಶೆಟ್ಟಿ,ರಾಕೇಶ್ ಪೂಜಾರಿ,ಲತೀಶ್ ಪೂಜಾರಿ,ರಾಕೇಶ್ ಚಿಲಿಂಬಿ, ವಿನೀತ್ ಬಂಗೇರ, ಮಹೇಶ್ ಪೂಜಾರಿ,ಕಿರಣ್ ಪೂಜಾರಿ ಬಂಟ್ವಾಳ,ರಾಮ , ಲೋಹಿತ್ ಗಟ್ಟಿ,ದಿನಿಲ್, ವಿಖ್ಯಾತ್ ಪೂಜಾರಿ,ರೋಷನ್ ಮೆನೆಜಸ್ ಬೋಳೂರು,ರಾಜೇಶ್ ಉರ್ವ,ವಾಝಿ ಪದವಿನಂಗಡಿ,ಕಿರಣ್ ಶೆಟ್ಟಿ,ರೋಷನ್ ಬಳ್ಳಾಲ್‍ಬಾಗ್, ಸುನೀಲ್ ಶೆಟ್ಟಿ ಬಳ್ಳಾಲ್‍ಬಾಗ್, ಜಗದೀಶ್ ಕದ್ರಿ,ರೂಪೇಶ್ ಶೆಟ್ಟಿ,ಪೃಥ್ವಿ ಅಂಬರ್,ಶರಣ್, ವಾಸೀಮ್ ಮತ್ತಿತರಿದ್ದರು.