ಸೌದಿ ಅರಬಿಯಾ: ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ವಿಶ್ವ ಮಾನ್ಯ” ಪ್ರಶಸ್ತಿ 2024 ನೀಡಿ ಗೌರವಿಸಲಾಯಿತು.
17 ನೇ ವಿಶ್ವ ಕನ್ನಡ ಸಮ್ಮೇಳನವು ಫೆಬ್ರವರಿ 8 ರಂದು ಸೌದಿ ಅರೇಬಿಯಾದಲ್ಲಿ ಸತೀಶ್ ಕುಮಾರ್ ಅಂಚನ್ ಬಜಾಲ್ ನೇತೃತ್ವದಲ್ಲಿ , ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತ ಜನಾಬ್ ಝಕರಿಯಾ ಮತ್ತು ಜನಾಬ್ ಶೇಖ್ ಕರ್ನಿರೆ,ರಫೀಕ್ ಸೂರಿಂಜೆ ಮತ್ತು ಅದೆಷ್ಟೋ ಕಾರ್ಯಕರ್ತರು ಬಹಳ ವಿಜಂಭಣೆಯಿಂದ ನೆರವೇರಿತು.
ಅಸಮಾನ್ಯರಾಗಿ ಬೆಳೆದು ನಿಂತ ಮೇರು ವ್ಯಕ್ತಿಯ ಸತೀಶ್ ಕುಮಾರ್ ಬಜಾಲ್ ಅದೆಷ್ಟೋ ಸಮಾಜದ ಬಡ ಕುಟುಂಬಗಳಿಗೆ ಸಹಾಯ ಹಸ್ತಾನೀಡಿ , ಕಣ್ಣೀರು ಒರಸುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿದ್ದರೆ.
ಮೂಲತ: “ಅಂಚನ್ಸ್ ಹೌಸ್” ಕಂಕನಾಡಿ ಪಕ್ಕಲಡ್ಕ ಬಜಾಲ್ ನವರು. ತಂದೆ :ದಿ! ಚಂದ್ರಶೇಖರ್ ಕುಂದರ್ ಕೊಡಿಯಲ್ ಬೈಲ್, ತಾಯಿ:ದಿ! ಶಾರದ ಅಂಚನ್, ಕಂಕನಾಡಿ ಪಕ್ಕಲಡ್ಕ, ಬಜಾಲ್. 3ಗಂಡು ಮಕ್ಕಳಲ್ಲಿ ಕಿರಿಯವನು ಸತೀಶ್ ಕುಮಾರ್ ಬಜಾಲ್. ತನ್ನ 3ನೇ ವಯಸಿನಲ್ಲೇ ತಾಯಿಯನ್ನು ಕಳೆದುಕೊಂಡು ನಂತರ ತನ್ನ ಅಜ್ಜಿ ಹಾಗೂ ಮಾವ ಶ್ರೀ ರಾಘವ ಅಂಚನ್ ಆರೈಕೆಯಲ್ಲಿ -ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹಾಗೂ ರೋಸಾರಿಯೊ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ. ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಅಲಾಸಿಯಸ್ ಸಂಧ್ಯಾ ಕಾಲೇಜ್ ವಿಧ್ಯಾಭ್ಯಾಸ ಮುಗಿಸಿದರು.