ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದಲ್ಲಿ ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಫೈನಲಿಸ್ಟ್ ಪ್ರತಿಭಾನ್ವಿತ ಬಾಲಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರಿಗೆ 2024 ನೇ ಸಾಲಿನ ರಂಗಮನೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಂಗಮನೆಯ ಅಧ್ಯಕ್ಷ ಹಾಗೂ ಪ್ರಸಿದ್ಧ ರಂಗ ನಿರ್ದೇಶಕ ಡಾ| ಜೀವನ್ ರಾಂ ಸುಳ್ಯರವರು ಪ್ರಧಾನ ಮಾಡಿದರು.
ವೇದಿಕೆಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಆನಂದ ಖಂಡಿಗೆ, ರಂಗ ನಿರ್ದೇಶಕರುಗಳಾದ ಸತ್ಯನಾರಾಯಣ ಕೊಡೇರಿ, ಓಂಕಾರ್ ಮೈಸೂರು, ಗೀತಾಕುಮಾರಿ ಮುಳ್ಯ,ಕಲಾ ಪೋಷಕ ರೊ| ಮಧುಸೂಧನ್ ಕೆ., ದಂತ ವೈದ್ಯೆ ಡಾ.ವಿದ್ಯಾ ಶಾರದ, ರಂಗಮನೆ ಸದಸ್ಯರಾದ ವಿನೋದಿನಿ ರೈ, ರವೀಶ್ ಪಡ್ಡಂಬೈಲು ಹಾಗೂ ಬಹುಮುಖ ಪ್ರತಿಭೆಯ ಮಾ| ಮನುಜ ನೇಹಿಗ ಉಪಸ್ಥಿತರಿದ್ದರು.