ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ವತಿಯಿಂದ ಇಂದು ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ 5ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಹಿಂದು ಹಿಂದುಗಳನ್ನೇ ತುಳಿದು ಬಡಿದಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮಾಜಕ್ಕೆ ತನ್ನಿಂದೆನಾದರೂ ಸಹಾಯ ಹಸ್ತವನ್ನು ನೀಡ ಬೇಕೆನ್ನುವ ಸದುದ್ದೇಶದಿಂದ ಹುಟ್ಟಿ ಕೊಂಡಿರುವ ಸಂಘಟನೆ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ 5ವರ್ಷದಿಂದ ನಿರಂತರ 400ಮಕ್ಕಳಿಗೆ ಪುಸ್ತಕ ವಿತರಣೆ ನೀಡುತ್ತಿರುವ ನಮ್ಮ ಸಂಸ್ಥೆಯು ಈ ವರ್ಷ 500ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿರುವುದು ಸಂತಸ ವಿಚಾರ ಅದೇ ರೀತಿ ಯಾವದೇ ಜಾತಿ ಮತ ಬೇದವಿಲ್ಲದೆ ತನ್ನಿಂದಾದ ಸಹಾಯಧನವನ್ನು ನೀಡಿರುತ್ತದೆ.
ಇಂದು ನಡೆದ ಕಾರ್ಯಕ್ರಮದಲ್ಲಿ ತಮ್ಮ ಸೇವೆಯಿಂದ ನಿವೃತ್ತಿಗೊಳ್ಳಲಿರುವ ಶಿಕ್ಷಕಿ ಶ್ರೀಮತಿ ಜಯಶ್ರೀಯವರನ್ನು ಹಾಗೂ ಬಿರುವೆರ್ ಕುಡ್ಲ ರಿ ಸಂಘಟನೆಯ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಲ್ ಬಾಗ್ ಮತ್ತು 7ನೇ ತರಗತಿಯಲ್ಲಿ ಅತ್ಯಧಿಕ ಅಂಕವನ್ನು ಗಳಿಸಿರುವ ವಿದ್ಯಾರ್ಥಿನಿ ಕುಮಾರಿ ಪೂರ್ಣಿಮಾರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಜೊತೆ ಶ್ರೀ ಮಹಾಬಲ ಪೂಜಾರಿ ಕಡಂಬೊಡಿ, ಉದಯಪೂಜಾರಿ, ಶ್ರೀ ಸತೀಶ್ ಮುಂಚೂರ್, ಶ್ರೀ ಸುಧೀರ್ ಮಾಲಕರು ದೀಕ್ಷಾ ಟ್ರಾವೆಲ್ಸ್ ,ಶ್ರೀ ವರುಣ್ ಚೌಟ ಮಂಗಳೂರು ನಗರ ಪಾಲಿಕೆ ಸದಸ್ಯರು , ಶ್ರೀಮತಿ ಜಯಶ್ರೀ, ಶ್ರೀಮತಿ ಕಲಾವತಿ, ಶ್ರೀಮತಿ ವೇದಾವತಿ ಶ್ರೀ ಲೋಕೇಶ್ ಕೋಡಿಕೆರೆ, ಶ್ರೀ ವಿಶ್ವನಾಥ್ ಕೋಡಿಕೆರೆ ಹಾಗೂ ಸಂಘಟನೆಯ ಪ್ರಮುಖರು, ಹಿತೈಷಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು
ನಮ್ಮ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಅಭಿನಂದನೆಗಳು
ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )