TOP STORIES:

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು ಹಾರ ಹಾಕುವ ಮೂಲಕ ಹೆಸರು ಗಳಿಸುವ ಮುಂದಾಳೊಚನೆಯಿಂದ ಸಮಾಜದಲ್ಲಿ ನಾಯಕರಾಗಿ ಗುರುತಿಸಲ್ಪಡುವವರೇ ಹೆಚ್ಚು….

ಆದರೆ ಇಲ್ಲೊಬ್ಬ ವ್ಯಕ್ತಿ ಕಾರ್ಕಳ   ಪ್ರತೀಷ್ಠಿತ ಮನೆಯೊಂದರಲಿ ಜನಿಸಿ, ತಂದೆಯಂತೆ, ಸಮಾಜಕ್ಕಾಗಿ ಹತ್ತು ಹಲವಾರು ಸೇವೆಗಳನ್ನು ನೀಡಿರುವ ಒರ್ವ ಶ್ರೇಷ್ಠ ಸೇವಕರ ಬಗೆಗಿನ ಪುಟ್ಟ ಪರಿಚಯ…

ಸಂದೀಪ್ ಕೋಟ್ಯಾನ್, ಭಾರತೀಯ ಸಂಸ್ಕ್ರತಿಯ ಬಗ್ಗೆ ಅಪಾರವಾದ ಗೌರವ ಹೊಂದಿರುವ ಒರ್ವ ವ್ಯಕ್ತಿ, ಉದ್ಯೋಗಕ್ಕಾಗಿ ದುಬೈ ದೇಶಕ್ಕಾಗಿ ಬಂದು ತನ್ನ ವಯಕ್ತಿಕ ಶ್ರಮದಿಂದ ಯಾರೊಬ್ಬರ ಹಂಗಿಲ್ಲದೆ ದುಡಿಯುತ್ತ ನಂತರದಲ್ಲಿ ತನ್ನದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು, ಪ್ರಾರಂಭದಲ್ಲಿ ಅನೇಕ ರೀತಿಯ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸಿ, ಯಾವ ಸಂಘಟನೆ ಸಹಾಯವನ್ನು ಪಡೆಯದೆ, ತನ್ನ ಆತ್ಮಸ್ತೈರ್ಯದ ಮೂಲಕ ತಾನು ಕಲಿತಂತಹ ಕೆಲಸ ಹಾಗೂ ತಾನು ನಂಬಿರುವ ದೇವರ ಮೇಲೆ‌ ಬಾರವನ್ನು ಹಾಕಿ ದುಬೈ ದೇಶದಲ್ಲಿ ಯಶಸ್ವಿ ಉದ್ಯಮಿಯಾಗಿ ಇಂದು ನಿಂತಿರುವ ವ್ಯಕ್ತಿ ಸಂದೀಪ್‌ ಕೋಟ್ಯಾನ್…

ಯಾವ ವ್ಯಕ್ತಿಗೂ ಮೋಸ ವಂಚನೆಯನ್ನು ಮಾಡದೆ ತನ್ನಲ್ಲಿರುವ ಅಪಾರವಾದ ಮಾನವೀಯತೆಯನ್ನು ಬಳಸಿ, ತಂದೆಯಂತೆ ಬಿಲ್ಲವ ಸಂಘಟನೆ ಹಾಗೂ ಬಿರುವೆರ್ ಕುಡ್ಲ ದುಬೈ ಘಟಕದ ಜೊತೆ ತಾನು ಒಬ್ಬರಾಗಿ ಪ್ರತಿಯೊಂದು ವಿಚಾರದಲ್ಲೂ ಸೇವೆಯನ್ನು ನೀಡುತ್ತಿರುವಂತಹ‌ ವ್ಯಕ್ತಿ‌ ಇವರು. ಇಷ್ಟೇ ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ತನ್ನಿಂದಾಗುವಂತಹ ಯಾವುದೇ ಸಹಕಾರ ವಿದ್ದರೂ ತಕ್ಷಣವೇ ಸ್ಪಂದಿಸುವಂತವರು. ಇವರ ಜೊತೆಗೆ ಬೆಂಬಲವಾಗಿ ನಿಂತಿರುವ ಶ್ರೀಮತಿ ಶ್ವೇತ ಸಂದೀಪ್ ಕೋಟ್ಯಾನ್ ಹಾಗೂ ಇಬ್ಬರು ಮಕ್ಕಳ ಜೊತೆಗಿರುವ ಇವರು ತನ್ನ ಹಿರಿಯ ಮಗನನ್ನು ಬಾಲ್ಯದಿಂದಲೇ ತುಳುಮಾತೃ ಭೂಮಿಯ ಸಂಸ್ಕ್ರತಿಯ ಯನ್ನು ಅರಿಯಲು ಯಕ್ಷಗಾನ ಅಭ್ಯಾಸ‌ ಕೇಂದ್ರಕ್ಕೆ ಸೇರ್ಪಡಿಸಿ, ಯಕ್ಷಗಾನದ ಹಾಗೂ ತುಳು ಮತ್ತು ಕನ್ನಡ ಭಾಷೆಯ ಮಹತ್ವವನ್ನು ತಮ್ಮ ಮಕ್ಕಳಿಗೂ ತಿಳಿಸಿಕೊಡುವಂತಹ ತುಳುನಾಡಿನ‌ ಮಗ ಇವರು…

ಯಾವತ್ತೂ ಯಾವ ವೇದಿಕೆಗೂ ಆಸೆಯನ್ನು ಪಡದೆ, ಯಾವ ಆಮಂತ್ರಣ ಬ್ಯಾನರಿನಲ್ಲೂ‌ ಹೆಸರಿನ ಆಸೆಯನ್ನಿಡದೆ, ಯಾವ ಸಾಮಾಜಿಕ ಜಾಲತಾಣದಲ್ಲೂ ಪ್ರಚಾರದ ಹಂಬಲವನ್ನಿಡದೆ ಸೇವೆಯನ್ನು ನೀಡುತ್ತಿರುವ ಅದ್ಭುತ ಸೇವಕ ಸಂದೀಪ್ ಕೋಟ್ಯಾನ್ ಕಾರ್ಕಳ.

ಇವರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ಆ ದೇವರು ಅನುಗ್ರಹಿಸಲಿ ಎಂದು ಈ ಮೂಲಕ ದೇವರಲ್ಲಿ ಪ್ರಾರ್ಥಿಸುತ್ತೇವೆ🙏🏻

ಅಧ್ಯಕ್ಷರು ಹಾಗೂ ಸರ್ವಸದಸ್ಯರು      

ಯೂತ್ ಬಿಲ್ಲವ (ರಿ) ಕಾರ್ಕಳ


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »