ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ ಸಮಾಜದ ಸುದೀಪ್ ರಾಜ್ ಆಯ್ಕೆಯಾಗಿದ್ದು ಹೆಮ್ಮೆಯ ವಿಚಾರ.
510 ಪುರುಷರು ಮತ್ತು 64 ಮಹಿಳೆಯರನ್ನು ಒಳಗೊಂಡ ಒಟ್ಟು 574 ಅಭ್ಯರ್ಥಿಗಳು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ಇತಿಹಾಸ ಮತ್ತು ಅರ್ಥಶಾಸ್ತ್ರ ವಿಭಾಗ ದಲ್ಲಿ ಶಿಕ್ಶಣ ನಡೆಸುತ್ತಿದ್ದು. ಭಾರತೀಯ ಸೇನೆಯಲ್ಲಿ ನಿಯೋಜಿತ ಅಧಿಕಾರಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳನ್ನು 122ನೇ ಶಾರ್ಟ್ ಸರ್ವಿಸ್ ಕಮಿಷನ್ ಕೋರ್ಸ್ (ತಾಂತ್ರಿಕೇತರ) ಪುರುಷರಿಗೆ ಮತ್ತು 36ನೇ ಶಾರ್ಟ್ ಸರ್ವಿಸ್ ಕಮಿಷನ್ ಮಹಿಳಾ (ತಾಂತ್ರಿಕೇತರ) ಕೋರ್ಸ್‌ಗೆ ಸೇರಿಸಿಕೊಳ್ಳಲಾಗುತ್ತದೆ, ಇವೆರಡೂ ಅಕ್ಟೋಬರ್ 2025 ರಲ್ಲಿ ಪ್ರಾರಂಭವಾಗಲಿವೆ.
ಮಂಗಳೂರಿನ ಚಿಲಿಂಬಿಯ ಶಿವರಾಜ್ ಮತ್ತು ರಾಜೀವಿ ಪುತ್ರ ಇವರು , ನಮ್ಮ ಬಿಲ್ಲವ ಸಮಾಜ ಕ್ಕೆ ಹೆಮ್ಮೆಯ ವಿಷಯ ವಾಗಿದೆ.
ಪೂರ್ವ-ಕಮಿಷನ್ ತರಬೇತಿಯನ್ನು 1 ವರ್ಷದ ಅವಧಿಗೆ ಭಾರತೀಯ ಸೇನೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ-ಚೆನ್ನೈನಲ್ಲಿ ನಡೆಸಲಾಗುವುದು.
ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಗೆಜೆಟ್ ಮೂಲಕ ಅಧಿಕಾರಿಗಳನ್ನು ಸೈನ್ಯದ ವಿವಿಧ ವಿಭಾಗಗಳಲ್ಲಿ ಲೆಫ್ಟಿನೆಂಟ್ ಶ್ರೇಣಿಯಲ್ಲಿ ನಿಯೋಜಿಸಲಾಗುತ್ತದೆ.