ಪುತ್ತೂರು: ಈ ಶಾಲಾ ವಠಾರದಲ್ಲಿ ಓಡಾಡಿದರೆ ತತ್‌ಕ್ಷಣ
ನಿಮ್ಮ ಕಣ್ಣಿಗೆ ಆಗಾಗ ಒಬ್ಬರಂತೆಯೇ ಇರುವ ಇನ್ನೊಬ್ಬ ಮಕ್ಕಳು ಕಂಡರೆ ಅಚ್ಚರಿಪಡಬೇಡಿ. ಯಾಕೆಂದರೆ, ಈ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಎಂಟು ಅವಳಿಗಳು ಇದ್ದಾರೆ!
ಕೆಲವು ದಿನಗಳ ಹಿಂದೆ ಎಣ್ಣೂರಿನ ಶಾಲೆಯಲ್ಲಿ ಪಂಚ ಅವಳಿಗಳಿರುವ ಸುದ್ದಿ ಸದ್ದು ಮಾಡಿತ್ತು. ಈಗ ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಅವಳಿಗಳ ಕಥೆ. ವಿಶೇಷವೆಂದರೆ ಎಣ್ಣೂರು ಮತ್ತು ಈ ಶಾಲೆ ಇರುವ ಊರು ಎರಡಕ್ಕೂ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯ್ಯರ ನಂಟಿದೆ!
ಅವಳಿ ವೀರರ ಗ್ರಾಮ..!
ಕೋಟಿ-ಚೆನ್ನೆಯ ಅವರ ಹುಟ್ಟೂರಿನ ನೆಲೆಗಳು, ಅವರು ಇರುವಿಕೆಯ ಕುರುಹು ಗಳು ಹರಡಿಕೊಂಡಿರುವ ಪಡವನ್ನೂರು – ಬಡಗನ್ನೂರು ಗ್ರಾಮಗಳಲ್ಲಿ ಒಂದಾಗಿ ರುವ ಪಡವನ್ನೂರು ಗ್ರಾಮದಲ್ಲಿ ಈ ಶಾಲೆ ಇದೆ. ಪಡವನ್ನೂರು, ಬಡಗನ್ನೂರು ಕೋಟಿ ಚೆನ್ನಯರ ಹುಟ್ಟೂರು. ಇವರ ಜನ್ಮದಾತೆ ದೇಯಿ ಬೈದೇತಿಯ ಸಮಾಧಿ ಇರುವ ಪುಣ್ಯ ಭೂಮಿ. ಈ ಕಾರಣಿಕ ಶಕ್ತಿಗಳು ನಡೆದಾಡಿದ ಹಲವು ಐತಿಹ್ಯಗಳು ಇಲ್ಲಿ ಈಗಲೂ ಇವೆ. ಕೋಟಿ ಚೆನ್ನಯ ಜನ್ಮಸ್ಥಳ, ಗೆಜ್ಜೆಗಿರಿ ಮೂಲಸ್ಥಾನಗಳು ಈ ಗ್ರಾಮದಲ್ಲಿ ಇವೆ.
ಹೇಗಿದ್ದಾರೆ ಇಲ್ಲಿನ ಅವಳಿಗಳು?
ಈಶ್ವರ ಮಂಗಲ ಶಾಲೆಯಲ್ಲಿರುವ ಎಂಟು ಅವಳಿ ಗಳಲ್ಲಿ 3 ಜೋಡಿಗಳು ಹುಡುಗರಾಗಿದ್ದರೆ, ಇನ್ನು 3 ಅವಳಿ ಹುಡುಗಿಯರು. ಎರಡು ಜೋಡಿಗಳು ಹುಡುಗ ಮತ್ತು ಹುಡುಗಿ. ಹೀಗೆ 3 ವಿಭಾಗದಲ್ಲಿಯು ಇರುವ ಈ ಪುಟಾಣಿಗಳ ಪೈಕಿ 2 ಜೋಡಿಗಳು ಒಂದೇ ತರಗತಿಯ ಸಹಪಾಠಿಗಳು. ಉಳಿದವರು ಬೇರೆ ತರಗತಿಯವರು.
ಇವರೇ ನೋಡಿ ಅವಳಿಗಳು! ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ ಈಶ್ವರಮಂಗಲ:
ಚರಿತ್ ರೈ ಮತ್ತು ಚಾರ್ವಿಕ್ ರೈ- ಪ್ರಿಕೆಜಿ (ಹೆತ್ತವರು: ಸನತ್ ಕುಮಾರ್ ರೈ ಎಂ. ಹಾಗೂ ಹರ್ಷಿತಾ )
ಚತುಷ್ಕ.ಎಂ.ಕೆ ಮತ್ತು ಚರಿಷ್ಮ ಎಂ. ಕೆ.-ಎಲ್‌ಕೆಜಿ (ಮನೋಜ್ ಕುಮಾರ್ ಕೆ. ಮತ್ತು ಪೂಜಿತ ಎಂ.ವಿ)
ಯಶಸ್ ಡಿ.ಆರ್. ಹಾಗೂ ಶ್ರೇಯಸ್ ಡಿ.ಆರ್.- 1ನೇ ತರಗತಿ (ರಾಜೇಶ್ ಡಿ.ಬಿ ಮತ್ತು ಸುಹಾಸಿನಿ ಎನ್)
ವಂಶಿಕ ಎ. ಮತ್ತು ವಿಶ್ಚಿಕ – 2ನೇ ತರಗತಿ (ಆನಂದ ನಾಯ್ಕ ಎ. ಮತ್ತು ಪ್ರಮೀಳಾ ಕೆ ಆರ್)
ಆಸಿಯತ್ ಶಫಾನ ಮತ್ತು ಮರಿಯಂ ಶಿಫಾನ – 3ನೇ ತರಗತಿ (ಕೆ.ವಿ. ಹೈದರಾಲಿ ಮತ್ತು ಆಯುಷತ್ ಸುಮಿಯ)
ಅನ್ವಿತ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ- 5ನೇ ತರಗತಿ (ಉದಯ ಶೆಟ್ಟಿ ಮತ್ತು ರೂಪ)
ನವ್ಯ ಬಿ. ಮತ್ತು ನಿತಿನ್ ಬಿ.- 5ನೇ ತರಗತಿ (ಸುದೇಶ ಮತ್ತು ಪ್ರಫುಲ್ಲ)
ಸಾನ್ವಿ ಎಂ.ಪಿ. ಮತ್ತು ಶ್ರಾವ್ಯ ಎಂ.ಪಿ -8 ತರಗತಿ (ಮನಮೋಹನ ಎಂ. ಮತ್ತು ಪುಷ್ಪಾವತಿ ಟಿ