TOP STORIES:

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


 ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ ಒಮ್ಮತ ಮತ್ತು ಸಹಕಾರದ ಜೀವನವನ್ನು ನಾವು ಅನುಸರಿಸಿಕೊಂಡು ಬಂದಿದ್ದೇವೆ. ಕಾಲಕ್ರಮೇಣ ಪರ ಊರುಗಳು, ಪರ ದೇಶಗಳತ್ತ ತೆರಳಿ, ಅಲ್ಲಿ ಕೂಡಾ ಯಶಸ್ವಿ ಬದುಕನ್ನು ಕಟ್ಟಿಕೊಂಡಿದ್ದೇವೆ.

 

ಈ ಪುಟ್ಟ ದೇಶವಾದ ಓಮಾನ್‌ನಲ್ಲಿಯೂ ನಮ್ಮ ಕೂಟಗಳ ಮುಖೇನ ಒಂದಾಗಿ, ದೈವ,ದೇವಾಲಯ ನಿರ್ಮಾಣದಿಂದ ಹಿಡಿದು ಅನೇಕ ಸಾಮಾಜಿಕ ಹಾಗೂ ಮಾನವೀಯ ಕೊಡುಗೆಗಳ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ದುಡಿದು ಉಳಿಸಿದ ಹಣದಿಂದ ಸಾಧ್ಯವಾದಷ್ಟು ನಮ್ಮವರಿಗೂ, ಅಗತ್ಯವಿರುವ ಬಂಧು-ಮಿತ್ರರಿಗೂ ಆಸರೆಯಾಗುತ್ತಿದ್ದೇವೆ. ಅದರ ಜೊತೆಗೆ, ನಮ್ಮ ಕರ್ಮಭೂಮಿಗೂ ಏನಾದರೂ ನಮ್ಮಿಂದ ಕೊಡುಗೆ ಇರಬೇಕು ಎಂಬ ನಿಟ್ಟಿನಲ್ಲಿ ಕೈಗೊಂಡ ಅತ್ಯಂತ ಮಹತ್ವದ ಸೇವೆಯೇ ರಕ್ತದಾನ ಶಿಬಿರ

 

ಒಂದು ಸಮಯದಲ್ಲಿ ಓಮಾನ್ ನಲ್ಲಿ ರಕ್ತದಾನ ಶಿಬಿರಗಳು ಹೆಚ್ಚಾಗಿ ಭಾರತೀಯ ಸಾಮಾಜಿಕ ಸಂಸ್ಥೆಗಳ ಮೂಲಕ ಅಥವಾ ಕೆಲವು ಕಂಪನಿಗಳ ಸಹಕಾರದಿಂದ ನಡೆಯುತ್ತಿದ್ದವು. ಆ ದಿನಗಳಲ್ಲಿ ಕರ್ನಾಟಕದ ಕಡೆಯಿಂದ, ವಿಶೇಷವಾಗಿ ಸಮುದಾಯಿಕವಾಗಿ ಇಂತಹ ಶಿಬಿರಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆದರೆ 2017ರಲ್ಲಿ ನಮ್ಮ ಬಿಲ್ಲವ ಬಂಧುಗಳು ಒಂದಾಗಿ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿ, ಸುಮಾರು 65 ಜನರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಭದ್ರವಾದ ಚಾಲನೆ ನೀಡಿದರು.

 

ಅದರ ನಂತರದ ದಿನಗಳಲ್ಲಿ ನಮ್ಮ ಶಿಬಿರಗಳು ಸಾವಿರ ಯುನಿಟ್‌ಗಿಂತಲೂ ಹೆಚ್ಚು ರಕ್ತವನ್ನು ದಾನವಾಗಿ ಓಮನ್ ಬ್ಲಡ್ ಬ್ಯಾಂಕ್ ಗೆ ನೀಡಿರುವುದು ಗಮನಾರ್ಹ ಸಾಧನೆ. ರಕ್ತ ಶೇಖರಣೆ ಕಡಿಮೆಯಾದಾಗ ಅಥವಾ ವಿಶೇಷವಾಗಿ O ಪಾಸಿಟಿವ್ ರಕ್ತದ ಅಗತ್ಯವಿದ್ದ ಸಂದರ್ಭಗಳಲ್ಲಿ, ರಕ್ತ ಬ್ಯಾಂಕ್‌ಗಳಿಂದ ನಮ್ಮನ್ನು ನೇರವಾಗಿ ಸಂಪರ್ಕಿಸುವ ಮಟ್ಟಿಗೆ ನಮ್ಮ ಸೇವೆ ವಿಶ್ವಾಸಾರ್ಹವಾಗಿ ಬೆಳೆದಿದೆ.

 

ನಮ್ಮ ಶಿಬಿರಗಳ ಯಶಸ್ಸನ್ನು ಕಂಡು, ಇತರ ಜಾತಿ ಸಮುದಾಯದ ವರು ಹಾಗೂ ಅನ್ಯ ಧರ್ಮದವರೂ ಕೂಡಾ ನಮ್ಮ ಮಾದರಿಯನ್ನು ಅನುಸರಿಸಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾದರು. ಈ ಮೂಲಕ ನಮ್ಮ ಬಿಲ್ಲವ ಬಂಧುಗಳ ಸೇವೆ ಮಸ್ಕತ್‌ನಲ್ಲಷ್ಟೇ ಅಲ್ಲದೆ ಇತರ ಗಲ್ಫ್ ದೇಶಗಳಲ್ಲಿಯೂ ಪ್ರಶಂಸೆಗೆ ಪಾತ್ರವಾಯಿತು.

 

ರಕ್ತದಾನ ಶಿಬಿರವು ಕೇವಲ ದಾನದ ಕಾರ್ಯಕ್ರಮವಾಗಿರಲಿಲ್ಲ; ಅದು ನಮ್ಮತನದ, ಸೇರಿಕೆಯ ಮತ್ತು ಸಹೋದರತ್ವದ ಸಂಕೇತವಾಗಿತ್ತು. ನೂಲ ಹುಣ್ಣುಮೆಯ ತಿಂಗಳಲ್ಲಿ ನಡೆದ ಶಿಬಿರದಲ್ಲಿ ರಾಕಿ ಕಟ್ಟುವ ಕಾರ್ಯವನ್ನು ಮಾಡಲಾಗಿತ್ತು. ರಕ್ತ ದಾನಿಗಳಗಿ ನಮ್ಮ ಬಿಲ್ಲವ ಮಹಿಳಾ ಬಳಗವು ಪುರುಷರಷ್ಟೆ ಉತ್ಸಾಹ ತೋರಿದರು. ಕೋವಿಡ್‌ ನಂತರದ ಸಮಯದಲ್ಲಿಯೂ ಶಿಬಿರ ಅಯೂಜನೆ ನಡೆದವು ಮಾನವೀಯ ಸಂಬಂಧಗಳ ಮೌಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದೇವೆ ಎನ್ನುವ ಸಾರ್ಥಕ ಭಾವನೆ ನಮ್ಮಲ್ಲಿ ಎಂದಿಗೂ…..

ತಾವೂ ಬನ್ನಿ ತಮ್ಮವರ ಕರೆ ತನ್ನಿ ಜೀವ ಉಳಿಸುವ ಕಾರ್ಯಕ್ಕೆ ಜೈ ಎನ್ನಿ.

 

🙏🙏🙏

ಮಾನ್ಯದಲಿ

ಶಿವಾನಂದ ಕೋಟ್ಯಾನ್.


Related Posts

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »