ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ ಕತೆ ಹೀಗಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನಲ್ಲಿ ಬಾಳಪ್ಪ ಪೂಜಾರಿ ಮತ್ತು ಪ್ರೇಮ ಬಾಳಪ್ಪ ಪೂಜಾರಿ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೆಯವರಾಗಿ ಜನಿಸಿದರು. ಇವರು ತನ್ನ ಎಲ್ ಕೆ ಜಿ ಮತ್ತು ಯು ಕೆ ಜಿ ಶಿಕ್ಷಣವನ್ನು ಬಂಟ್ವಾಳದಲ್ಲಿ ಪೂರೈಸಿದರು. ಇವರ ಅಜ್ಜಿ ಮನೆ ಮತ್ತು ಪರಿವಾರ ಕೊಡಗಿನಲ್ಲಿ ನೆಲೆಸಿದ್ದ ಕಾರಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೊಡಗಿನ ಕೊಡ್ಲಿಪೇಟೆ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಶನಿವಾರ ಸಂತೆ ಕಾಲೇಜಿನಲ್ಲಿ, ಪದವಿ ಮತ್ತು ಉನ್ನತ ವ್ಯಾಸಂಗ(ಬಿಬಿಎಂ)ವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಮುಗಿಸಿದರು. ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಿದ ದ್ರುವಂತ್ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇಂಟರ್ನ್ಯಾಷನಲ್ ಬ್ಯಾಂಕ್ “ಹೆಚ್ ಎಸ್ ಬಿ ಸಿ”ಯಲ್ಲಿ ಕೆಲಸ ದೊರೆಯುತ್ತದೆ. ಮುಂದೆ ನಾಲ್ಕೈದು ವರ್ಷಗಳ ಕಾಲ ಗಗನಸಖನಾಗಿ ತಿಂಗಳಿಗೆ ಹತ್ತಾರು ದೇಶಗಳನ್ನು ಸುತ್ತುವ ಅವಕಾಶವೂ ದೊರೆಯುತ್ತದೆ. ಆದರೆ ಅವರೊಳಗೆ ಕಾಡುತ್ತಿದ್ದ ಅಭಿನಯದ ತುಡಿತ ಕಿರುತೆರೆಗಯನ್ನು ಪ್ರವೇಶಿಸಲು ಕಾರಣವಾಗುತ್ತದೆ.
(Copyrights owned by: billavaswarriors.com )
ಬಡ ಕುಟುಂಬದಲ್ಲಿ ಜನಿಸಿದ ಧ್ರುವಂತ್ ಅವರ ತಂದೆ ಕಾಫಿ ಪ್ಲಾಂಟರ್ ಆಗಿ ಕೆಲಸ ಮಾಡುತ್ತಾ ಮತ್ತು ತಾಯಿ ಗೃಹಿಣಿಯಾಗಿ ಇವರನ್ನು ಬೆಳೆಸಿದ್ದಾರೆ. ಇವರ ಅಜ್ಜ “ತಾರನಾಥ್ ಬಂಗೇರ”, ಬಂಟ್ವಾಳದಲ್ಲಿ ಒಳ್ಳೆಯ ಹೆಸರಾಂತ ಕುಸ್ತಿಪಟು. ಧ್ರುವಂತ್ ಗೆ ಚಿಕ್ಕ ವಯಸ್ಸಿನಲ್ಲಿಯೇ ಕಸರತ್ತು, ಈಜು, ಕುಸ್ತಿ ಇವನ್ನೆಲ್ಲಾ ಕಲಿಸಿಕೊಟ್ಟವರೂ ಇವರೇ. ಇದೇ ಕಾರಣಕ್ಕೆ ಧ್ರುವಂತ್ ಅವರೂ ಒಬ್ಬ ಉತ್ತಮ ಕುಸ್ತಿ ಮತ್ತು ಕ್ರೀಡಾ ಪಟುವಾದರು.
ಧ್ರುವಂತ್ ಅವರ ತಂದೆಗೆ ಮಗ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಮನೆಯಲ್ಲಿ ಕಲಿಕೆಗೆ ಒಂದು ಬಿಟ್ಟರೆ ಬೇರೆ ಯಾವುದೇ ವಿಷಯಕ್ಕೂ ಪ್ರೋತ್ಸಾಹ ಇರಲಿಲ್ಲ. ಶಾಲೆ ಕಾಲೇಜುಗಳಲ್ಲಿ ಸಾಂಸ್ಕೃತಿಕ ವಿಷಯದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಿದ್ದರು. ಬಾಲ್ಯದಲ್ಲಿ ಇವರಿಗೆ ವೇದಿಕೆಯ ಮೆಟ್ಟಿಲು ಏರುವುದೆಂದರೆ ತುಂಬಾನೇ ಖುಷಿ. ಹಾಗಾಗಿಯೇ ಸಾಂಸ್ಕೃತಿಕ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕ್ರೀಡೆಗಳಲ್ಲಿ ಭೇಷ್ ಎನಿಸಿಕೊಂಡು ವೇದಿಕೆಯಲ್ಲಿ ಗಣ್ಯಾತಿಗಣ್ಯರಿಂದ ಬಹುಮಾನ ಸ್ವೀಕಾರ ಮಾಡಿ ಖುಷಿ ಪಡುತ್ತಿದ್ದರು. ಮುಖ್ಯವಾಗಿ ವೇದಿಕೆಗೆ ಹೋದಾಗ ಜನರಿಂದ ಸಿಗೋ ಚಪ್ಪಾಳೆ ಮತ್ತು ಶಿಳ್ಳೆಗಳೇ ಇವರಿಗೆ ಪ್ರೋತ್ಸಾಹ. ಇವತ್ತು ಇವರು ಈ ಮಟ್ಟಕ್ಕೆ ಬೆಳೆಯಲು ಇವೆಲ್ಲ ಪ್ರೇರಣೆಯಾಯಿತು.
(Copyrights owned by: billavaswarriors.com )
ಧ್ರುವಂತ್ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯ ಹಾದಿ ಹಿಡಿದವರು. ಹೆಸರು ಗಳಿಸಬೇಕು, ಇವರ ಏಳಿಗೆಯಿಂದ ಹೆತ್ತವರು ಹೆಮ್ಮೆ ಪಡುವಂತಾಗಬೇಕು ಎಂಬುದು ಇವರಿಗಿದ್ದ ಬಹುದೊಡ್ಡ ಕನಸು. ಇವರು ಅಭಿನಯಿಸಿದ ಮೊದಲನೆಯ ಧಾರವಾಹಿ “ಝೀ ಕನ್ನಡ” ಚಾನೆಲ್ ನಲ್ಲಿ ಪ್ರಸಾರವಾದ “ಲವಲವಿಕೆ”, ಎರಡನೇ ಧಾರವಾಹಿ “ಸ್ಟಾರ್ ಸುವರ್ಣ” ಚಾನೆಲ್ ನಲ್ಲಿ ಪ್ರಸಾರವಾದ “ಅಮ್ಮ”, ಮೂರನೇ ಧಾರವಾಹಿ “ಕಲರ್ಸ್” ಚಾನೆಲ್ ನಲ್ಲಿ ಪ್ರಸಾರವಾದ “ಸರ್ಪ ಸಂಬಂಧ”, ನಾಲ್ಕನೇ ಸೂಪರ್ ಹಿಟ್ ಧಾರವಾಹಿ ಈಗ “ಸ್ಟಾರ್ ಸುವರ್ಣ” ಚಾನೆಲ್ ನಲ್ಲಿ ಪ್ರಸಾರವಾಗಿ ಸಾವಿರಕ್ಕೂ ಮೀರಿ ಎಪಿಸೋಡ್ ಗಳನ್ನು ಪೂರೈಸಿದ “ಮುದ್ದು ಲಕ್ಷ್ಮೀ”. ಇತ್ಯಾದಿ. ಇವರು ತೆಲುಗು ತಮಿಳು ಭಾಷೆಯ ಕಿರುತೆರೆಯಲ್ಲಿ ನಟಿಸಿ ಖ್ಯಾತಿಯನ್ನು ಗಳಿಸಿದ್ದಾರೆ
ಇವರ ಅಭಿನಯಕ್ಕೆ ಎರಡು ಧಾರಾವಾಹಿ ಗಳಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ರಾಜ್ಯಮಟ್ಟದಲ್ಲಿ ಇವರು ಪ್ರಶಸ್ತಿ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭಾ ಪಾಂಡಿತ್ಯದಿಂದ ಪಶಸ್ತಿಗಳನ್ನು ಪಡೆದಿದ್ದಾರೆ.
ಧ್ರುವಂತ್ ಇವರಿಗೆ ಅರಿವೇ ಗುರು. ಜೀವನದ ಅನುಭವಗಳು ಕಲಿಸಿದ ಪಾಠದ ಮೂಲಕವೇ ಎಲ್ಲ ವಿಷಯಗಳನ್ನು ತಿಳಿದುಕೊಂಡು ಇವರದ್ದೇ ಆದ ಸ್ವಂತ ದಾರಿಯಿಂದ ನಡೆದು ಎಷ್ಟೇ ಕಷ್ಟಗಳು ಕಣ್ಮುಂದೆ ಬಂದರೂ, ಆ ನೋವನ್ನು ತಂದೆ ತಾಯಿಗೆ ಕಾಣಿಸದೆ ಸಾಧನೆ ಮಾಡಬೇಕೆಂಬ ಒಂದೇ ಒಂದು ಧ್ಯೇಯವನ್ನು ಮನದಲ್ಲಿರಿಸಿಕೊಂಡು ಮುನ್ನಡೆದವರು. ಎಲ್ಲವನ್ನೂ ಎದುರಿಸಿ, ಇವತ್ತು ಕರ್ನಾಟಕದಾದ್ಯಂತ ಗುರುತಿಸಿಕೊಳ್ಳುವಂತಹ ಪ್ರತಿಭಾವಂತ ಕಲಾವಿದರಾಗಿದ್ದಾರೆ. ಸಾಧನೆಯ ಹಾದಿಯಲ್ಲಿ ಇವರು ಬಹಳ ದೊಡ್ಡ ಕನಸನ್ನು ಇಟ್ಟುಕೊಂಡವರು. ಎಲ್ಲವನ್ನೂ ಒಬ್ಬಂಟಿಯಾಗಿ ಎದುರಿಸಿದವರು.
ಸಾಧಿಸುವವನಿಗೆ ಯಾವುದರ ಭಯವೂ ಇರುವುದಿಲ್ಲ. ತಲುಪಲಿರುವ ಗುರಿಯಷ್ಟೇ ಮುಖ್ಯವಾಗಿರುತ್ತದೆ. ಈಗ ಧ್ರುವಂತ್ ಅವರು ಕಲರ್ಸ್ ಕನ್ನಡ ಚಾನಲ್ ಬಿಗ್ ಬಾಸ್ ಸೀಸನ್ 12 ನಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ವ್ಯಕ್ತಿತ್ವದ ಆಟವನ್ನು ಆಡುತ್ತಿದ್ದಾರೆ. ಪ್ರತಿಭಾವಂತ ಕಲಾವಿದರಾದ ಇವರು ನೇರ ನಡೆ-ನುಡಿ ಪ್ರಾಮಾಣಿಕ ವ್ಯಕ್ತಿತ್ವ ಚಿಂತನಶೀಲತೆ ಪ್ರಬುದ್ಧತೆಯ ಮೂಲಕ ಬಹುತೇಕರ ಗಮನವನ್ನು ಸೆಳೆದಿದ್ದಾರೆ. ನಮ್ಮ ತುಳುನಾಡಿನ ಸಂಸ್ಕಾರವನ್ನು ಆಚಾರ ವಿಚಾರಗಳನ್ನು ರೂಡಿಸಿಕೊಂಡು ಶಿಸ್ತು ಸಮಯದಿಂದ ಮುನ್ನಡೆಯುತ್ತಿರುವ ಧ್ರುವಂತ್ ಬಿಗ್ ಬಾಸ್ ವಿನ್ನರ್ ಆಗುವ ಎಲ್ಲಾ ಅರ್ಹತೆಯನ್ನು ಪಡೆದಿದ್ದಾರೆ. ಬಿಲ್ಲವ ಸಮುದಾಯದಿಂದ ಓರ್ವ ಅರ್ಹವ್ಯಕ್ತಿ ಬಿಗ್ ಬಾಸ್ ಮನೆಯಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಹೀಗಾಗಿ ನಾವೆಲ್ಲರೂ ಜಿಯೋ ಹಾಟ್ ಸ್ಟಾರ್ appಅನ್ನು ಡೌನ್ಲೋಡ್ ಮಾಡಿ ವೋಟ್ ವಿಭಾಗದಲ್ಲಿ ದ್ರುವಂತ್ ಭಾವಚಿತ್ರಕ್ಕೆ 99 ಬಾರಿ ಪ್ರೆಸ್ ಮಾಡಿ ವೋಟು ಮಾಡಿ ಅವರನ್ನು ಬೆಂಬಲಿಸಬೇಕಾಗಿ ನಮ್ರ ವಿನಂತಿ. ನಮ್ಮ ಸಮಾಜದ ಅರ್ಹ ಪ್ರತಿಭೆಗೆ ನಮ್ಮೆಲ್ಲರ ಬೆಂಬಲ ಸದಾ ಇರಲಿ.
✍️ ಟೀಮ್ ಬಿಲ್ಲವ ವಾರಿಯರ್ಸ್
(Copyrights owned by: billavaswarriors.com )


