TOP STORIES:

FOLLOW US

ಮಲೆನಾಡ ಯೂತ್ ಐಕಾನ್ – ಅವಿನಾಶ್ ಯುವನ


  1. ಒಬ್ಬ ವ್ಯಕ್ತಿಗೆ ಸಮಾಜ ವಿಶಿಷ್ಟ ರೀತಿಯಲ್ಲಿ , ಗೌರವಯುತವಾಗಿ ಒಂದು ಸ್ಥಾನವನ್ನು ನೀಡುತ್ತೋ, ಆಗ ಆ ವ್ಯಕ್ತಿಗೆ ಅದು ಸಂದ ಉತ್ತಮ ಗೌರವವೇ ಆಗಿದೆ. ವ್ಯಕ್ತಿ ಆ ಸ್ಥಾನಕ್ಕೆ ತನ್ನ ದಾಪುಗಾಲನ್ನು ಇಡಲು ಕಠಿಣ ಪರಿಶ್ರಮ, ತಾಳ್ಮೆಯು ಅವನ ಸಂಪತ್ತಿನ ಭಾಗವಾಗಿದೆ. ತಾನು ಆ ಸ್ಥಾನಕ್ಕೆ ಬಂದು ಇತರರಿಗೆ ಯಾವಾಗ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವವನ್ನು ಸಂಪಾದಿಸುತ್ತಾನೆ ಆಗ ಪರಿಪೂರ್ಣ ವ್ಯಕ್ತಿಯಾಗಿ ಬದಲಾಗುತ್ತಾನೆ.

ಕಠಿಣ ಪರಿಶ್ರಮ, ತಾಳ್ಮೆಯ ಮುಂದೆ ಸವಾಲುಗಳು ಬಂದರು ಅದು ಗೆಲುವಿನ ಬೆಳಕಿಗೆ ಪರದೆಯ ಸರಿದಂತೆ, ತನ್ನ ಕಾರ್ಯದಲ್ಲಿ ನಂಬಿಕೆ ಇದ್ದರೆ,ಸ್ವಾಭಿಮಾನದ ಭಕ್ತಿ ಇದ್ದರೆ , ಯಾವುದು ಅಸಾಧ್ಯವಲ್ಲ..!! ಇದಕ್ಕೆ ಸ್ಪಷ್ಟ ಉದಾಹರಣೆ ” *ಅವಿನಾಶ್ ಯುವನ್* ” ಎಂಬ ಅಣ್ಣನ ಮಾಧ್ಯಮ ಲೋಕದಲ್ಲಿ ಇಟ್ಟ ದಿಟ್ಟ ಹೆಜ್ಜೆಗಳು.!! ಸಾಧನೆಗೆ ಛಲವೊಂದೇ ದಿಟ್ಟ ಹೆಜ್ಜೆ ಎಂಬುದು ಇವರ ಮೂಲ ಆಸ್ತಿ.

ರಘು ಸುವರ್ಣ ಮತ್ತು ತಾಯಿ ಸರೋಜರವರ ಮಗನಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶೃಂಗೇರಿಯ ಅಗಳಮನೆ ಎಂಬ ಗ್ರಾಮದಲ್ಲಿ ಜನಿಸಿದ ಮಲೆನಾಡ ಹುಡುಗ. ಇಂದು ಕರ್ನಾಟಕದ ಪ್ರತಿಯೊಬ್ಬರಿಗು ಇವರ ಮುಖಛರ್ಯೆಯ ಪರಿಚಯವಿದೆ. ” ನಾನು ಅವಿನಾಶ್ ಯುವನ್” ಎಂಬ ಮೇಲು ಧ್ವನಿಯಿಂದ ಸುದ್ದಿಯ ಕಡೆ ಸಾಗುವ ನಿರೂಪಕರಿವರು..!!

ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ಇಂದು ಈ ಮಟ್ಟದವರಿಗಿನ ಇವರ ಪಯಣದಲ್ಲಿ ಇವರ ಪರಿಶ್ರಮವೇ ಮೂಲ ಕಾರಣ. ಕೃಷಿ ಪ್ರಧಾನ ಕುಟುಂಬದಲ್ಲಿ ಹುಟ್ಟಿ , ಎಲ್ಲಿಯೂ ಸಂಧಾನಕ್ಕೆ ರಾಜಿ ಆಗದೆ ನಿಷ್ಠೆಯಿಂದ ಬೆಳೆದ ಈ ಯುವಕ ಈಗ ಮಾಧ್ಯಮ ಲೋಕದ ನಿರೂಪಕರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಪ್ರತಿಭೆ.

ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಎಸ್.ಜೆ.ಆರ್.ಸಿ. ಜೆ.ಸಿ(S.J.R.C.J.C)ಯಲ್ಲಿ , ಫ್ರೌಢ ಶಿಕ್ಷಣವನ್ನು ಬಾಳೆಹೊನ್ನೂರಿನ ಸಂಸ್ಥೆಯಲ್ಲಿ ಉತ್ತಮ ಅಂಕಗಳೊಡನೆ ಉತ್ತೀರ್ಣನಾಗಿ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ಪಿ.ಯು.ಸಿಯನ್ನು ಮುಗಿಸಿ, ಉನ್ನತ ಶಿಕ್ಷಣವನ್ನು ಶೃಂಗೇರಿಯಲ್ಲಿ ಪೂರ್ಣಗೊಳಿಸಿದರು.

ಕಾಲೇಜು ದಿನಗಳಲ್ಲಿಯೇ ಏನಾದರು ಸಾಧನೆಯನ್ನು ಮಾಡಲೇಬೇಕೆಂಬ ದೃಢ ನಿರ್ಧಾರವನ್ನು ತಳೆದಿದ್ದರು. ತನ್ನ ಅದ್ಭುತ ಮಾತಿನಿಂದಲೇ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿ ಮಾಡುವಂತಹ ಅದ್ಭುತ ಕಲೆಯನ್ನು ಕಾಲೇಜು ದಿನಗಳಲ್ಲಿಯೇ ಮೈಗೂಡಿಸಿಕೊಂಡಿದ್ದರು. ಉನ್ನತ ಶಿಕ್ಷಣದ ನಂತರ ಬೆಂಗಳೂರಿನಲ್ಲಿ ಆನಿಮೇಷನ್ ಮತ್ತು ಮಲ್ಟಿಮೀಡಿಯಾ ವಿಭಾಗದಲ್ಲಿ ಎರಡು ವರುಷಗಳ ತರಬೇತಿಯನ್ನು ಪೂರೈಸಿದರು.
ಆವಾಗಲೇ ತನ್ನ ಬಹುಮುಖ ಪ್ರತಿಭೆ ಮತ್ತು ವೃತ್ತಿ ಪರಿಣಿತಿಯಲ್ಲಿನ ಶ್ರದ್ಧೆಯೇ ಇವರನ್ನು ” ಸುವರ್ಣ ನ್ಯೂಸ್ ” ಚಾನಲ್ ನಲ್ಲಿ ವಿಡಿಯೋ ಎಡಿಟರ್ ವಿಭಾಗದಲ್ಲಿ ಸುಧೀರ್ಘ ಮೂರು ವರುಷಗಳ ಅನುಭವವನ್ನು ಪಡೆದು ಸಹೋದ್ಯೋಗಿಗಳ ಪ್ರಶಂಶೆಗೆ ಪಾತ್ರರಾದರು. ಅನಂತರ ತನ್ನ ಅನುಭವ ಮತ್ತು ಅವಕಾಶದಿಂದ ‘ರಾಜ್ ನ್ಯೂಸ್ ಕನ್ನಡ’ ಚಾನಲ್ ನಲ್ಲಿ ಪ್ರೋಗ್ರಾಮಿಂಗ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದರು. ತದನಂತರ ತನ್ನ ಧ್ವನಿಯಿಂದಲೆ ‘ಬಿಟಿವಿ ಕನ್ನಡ’ ದಲ್ಲಿ ಅನುಭವವನ್ನು ಉಣಬಡಿಸಿದರು. ‘ಕಸ್ತೂರಿ ನ್ಯೂಸ್’ ವಿನಲ್ಲಿ ಸ್ಪೋರ್ಟ್ಸ್ ವಿತ್ ಆ್ಯಂಕರಿಂಗನ್ನು ಒಂದೂವರೆ ವರುಷ ತನ್ನ ಕಾರ್ಯ ದಕ್ಷತೆಯ ಪರಿಚಯ ಎಲ್ಲರಿಗೂ ತಿಳಿಸಿದರು. ಆಮೇಲೆ ನ್ಯೂಸ್ 18 ಕನ್ನಡ ಚಾನಲ್ ನಲ್ಲಿ ಸೀನಿಯರ್ ಆ್ಯಂಕರ್ ಆಗಿ ಎರಡು ವರುಷ ಸೇವೆ ಸಲ್ಲಿಸಿದರು. ಆದಾಗಲೇ ಇವರನ್ನು ದೊಡ್ಡದೊಂದು ಅವಕಾಶ ಹುಡುಕುತ್ತಾ ಬಂತು. ಕರ್ನಾಟಕದ ಪ್ರತಿಷ್ಠಿತ ನಂಬರ್ ವನ್ ಚಾನಲ್ ” ಟಿವಿ 9 ಕನ್ನಡ “ದ ವಾಯ್ಸ್ ಓವರ್ ಎಡಿಟಿಂಗ್ ಮತ್ತು ನ್ಯೂಸ್ ಆ್ಯಂಕರ್ ಆಗಿ ಸುಮಾರು ಒಂದೂವರೆ ವರುಷದಿಂದ ಕರ್ನಾಟಕ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ..!!

ತೀಕ್ಷ ಉತ್ತರ, ಸುದ್ದಿಯ ಬಿತ್ತರದ ಚತುರತೆ ಮತ್ತು ಬ್ರೇಕಿಂಗ್ ನ್ಯೂಸ್ ನಲ್ಲಿ ಹೊಸತನದ ವಿವರಣೆ ಅವಿನಾಶ್ ಅಣ್ಣನನ್ನು ಮಾಧ್ಯಮ ಲೋಕದಲ್ಲಿ ಹೊಸ ಯೂತ್ ಆ್ಯಂಕರ್ ಆಗಿ ಪರಿವರ್ತನೆ ಮಾಡಿತು. ಇದರ ಹಿಂದೆ ಗುರಿಯ ಕಡೆ ಸಾಗುವ ಇವರ ಪರಿಶ್ರಮವೇ ಇವರ ಬೆನ್ನಿಗೆ ನಿಂತಿದೆ ಎಂದರೆ ತಪ್ಪಾಗಲಾರದು..!

ಇಂದು ಅವಿನಾಶ್ ಅಣ್ಣನನ್ನು ಕಾಣದ ಕರ್ನಾಟಕ ಜನತೆಯಿಲ್ಲ..!! ಮತ್ತೊಂದು ಇವರ ಆಸ್ತಿ ಎಂದರೆ ಇವರ ಧ್ವನಿ.!! ಧ್ವನಿಯೇ ಇವರ ಪ್ರತಿಭೆಯ ಕೈ ಗನ್ನಡಿ. ಅಣ್ಣನ ಧ್ವನಿಯಲ್ಲಿ ವಿಷಯದ ಗರ್ಭವೇ ಅಡಗಿರುತ್ತದೆ.

ಅವಿನಾಶ್ ಅಣ್ಣ ಯಾವುದರಲ್ಲೂ ರಾಜಿಯಾಗುವ ವ್ಯಕ್ತಿಯೇ ಅಲ್ಲ, ನೇರ ವ್ಯಕ್ತಿತ್ವ , ಎಲ್ಲರ ಜೊತೆ ಸಾಮಾನ್ಯರಂತೆ ಬೆರೆಯುವ ಗುಣವೇ ಅಣ್ಣನನ್ನು ಈ ಸ್ಥಾನಕ್ಕೆ ಬಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಎಲ್ಲರನ್ನು ಗೌರವಯುತವಾಗಿ, ವಿನಯವಾಗಿ ಮಾತನಾಡಿಸುವ ಮತ್ತು ವೃತ್ತಿಯನ್ನು ಗೌರವವಾಗಿ ಕಾಣುವ ಕಾರಣದಿಂದಲೇ ಮಾಧ್ಯಮ ಲೋಕದಲ್ಲಿ ತನ್ನ ಛಾಪನ್ನು ತೋರಿಸುತ್ತಿದ್ದಾರೆ. ವಾಯ್ಸ್ ಓವರ್ ಎಡಿಟಿಂಗ್ ನಲ್ಲಿ ತನ್ನ ಧ್ವನಿಗೆ ಗೌರವಯುತ ಕಲೆ ನೀಡುವ ಪ್ರತಿಭೆ ಇವರದ್ದು . ಟಿ.ವಿ 9 ಕರ್ನಾಟಕದಲ್ಲಿ ಇವರ ಧ್ವನಿಗೆ ಒಂದು ವಿಶೇಷ ಗೌರವ ಇದೆ.

ಅಣ್ಣನಿಗೆ ಕೃಷಿ ಕ್ಷೇತ್ರದಲ್ಲಿ ಏನಾದರು ಮಾಡಬೇಕೆಂಬ ಒಂದು ಮಹಾನ್ ಕನಸು ಜೊತೆಯಾಗಿದೆ. ಇದರ ಬಗ್ಗೆ ತುಂಬಾ ಒಲವು ಕೂಡ ಇದೆ. ಈಗಲೂ ಹಲವು ಯುವಕರನ್ನು ಕೃಷಿ ಕ್ಷೇತ್ರದ ಕಡೆಗೆ ಕರೆದೊಯ್ಯುವ ಕಾರ್ಯವನ್ನು ಹಮ್ಮು – ಬಿಮ್ಮು ಇಲ್ಲದೆ ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ ಚಾನೆಲ್ -1 ಎಂಬ ನ್ಯೂಸ್ ಚಾನಲ್ ನಲ್ಲೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಯಾವುದೇ ಕಾರ್ಯಕ್ರಮದ ಉಸ್ತುವಾರಿ, ವಾಯ್ಸ್ ಓವರ್ ಮತ್ತು ನ್ಯೂಸ್ ರೀಡಿಂಗ್ ನಲ್ಲಿ ಅಣ್ಣನ ವಿಶಿಷ್ಟ ಅನುಭವ ಒಂದು ತಲ್ಲಣವನ್ನು ಸೃಷ್ಟಿ ಮಾಡುತ್ತಿದೆ.

ಬಾಲ್ಯದಲ್ಲಿ ತಾನು ಬಡತನದ ಬೆಂಕಿಯಲ್ಲಿ ಬೆಂದರೂ, ಹಣದ ಸಮಸ್ಯೆಯನ್ನು ಕಂಡರೂ , ಯಾರೇ ಕೈ ಚಾಚಿದರು ಸಹಾಯವನ್ನು ನೀಡುವಂತಹ ವ್ಯಕ್ತಿತ್ವ ಇವರದ್ದು. ತನ್ನ ಸಮಾಜ ಕಾರ್ಯದ ಬಗ್ಗೆ ಪ್ರಚಾರ ಬಯಸದ ಇವರು ಹಲವಾರು ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಕರ್ನಾಟಕ ತತ್ತರಿಸಿ ಹೋದ ಸಂದರ್ಭದಲ್ಲಿ ಟಿ.ವಿ 9 ಮುಖಾಂತರ ಜನತೆಗೆ ಕರೆಕೊಟ್ಟು ,ಇಡೀ ಜನತೆ ಆಹಾರದ ಪೊಟ್ಟಣಗಳನ್ನು ಕಛೇರಿಗೆ ತಲುಪಿಸಿದ್ದರು, ಇದರ ಜವಾಬ್ದಾರಿಯನ್ನು ಕೆಲವರ ಜೊತೆ ತಾವು ವಹಿಸಿಕೊಂಡು ಕರ್ನಾಟಕದ ಮೂಲೆ-ಮೂಲೆಗಳಿಗೆ ತಲುಪಿಸುವಂತಹ ಮಹಾನ್ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿದ್ದರು.

ಹಲವಾರು ಸಂಘ-ಸಂಸ್ಥೆಗಳ ಜೊತೆಗೆ ತನ್ನ ಸೇವಾ ಕಾರ್ಯದ ಚಟುವಟಿಕೆಗಳನ್ನು ಮಾಡುತ್ತಿರುವ ಅಣ್ಣನ ಹೆಸರಿಗೆ ಮಾಧ್ಯಮ ಲೋಕದಲ್ಲಿ ಒಂದು ವಿಶೇಷ ಗೌರವವಿದೆ.

ಇಂದಿನ ಯುವ ಜನತೆಗೆ ಪ್ರೇರಣೆಯಾಗುವಂತಹ ವ್ಯಕ್ತಿತ್ವದ ಜೊತೆಗೆ , ಎಲ್ಲರಿಗೂ ಮಾದರಿಯಾಗುವಂತಹ ಇವರಿಗೆ ಹಲವಾರು ಗೌರವ ಪುರಸ್ಕಾರಗಳು ದಾರಿಯನ್ನು ಹುಡುಕುತ್ತಾ ಇವರ ಮಡಿಲಿಗೆ ಬಂದವು .

೧.2019ರಲ್ಲಿ ” ಕೋಟಿ-ಚೆನ್ನಯ ಯುವ ಪ್ರತಿಭೆ” ಪುರಸ್ಕಾರವನ್ನು ಬಾಳೆಹೊನ್ನೂರಿನಲ್ಲಿ ಪಡೆದರು.
೨.ಲಯನ್ಸ್ ಕ್ಲಬ್ ನೀಡಿದ ಮಲೆನಾಡ ಯೂತ್ ಐಕಾನ್* ಎಂಬ ಅತ್ಯುನ್ನತ ಪ್ರಶಸ್ತಿಯನ್ನು ಪಡೆದರು.

೩. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸ್ಪಾರ್ಕ್ ಬಿಲ್ಲವ (Spark Billava) ಸಮಾರಂಭದಲ್ಲಿ ಗಣ್ಯ ವ್ಯಕ್ತಿಯಾಗಿ ಸ್ಫೂರ್ತಿದಾಯಕ ಭಾಷಣವನ್ನು ನೀಡಿದರು.

೪.2018ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ 30 ಜಿಲ್ಲೆಗಳಿಗೆ ತೆರಳಿ ಗ್ರೌಂಡ್ ರಿಪೋರ್ಟ್ ಮಾಡಿದ ಹೆಗ್ಗಳಿಕೆ ಇವರದು. ಇದಕ್ಕಾಗಿ ಮಾಧ್ಯಮದಲ್ಲಿ ” youngest Anchor” ಎನ್ನುವ ಬಿರುದನ್ನು ಪಡೆದರು.

ಇವರು ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟು. ಹಲವಾರು ಟೂರ್ನಿಗಳಲ್ಲಿ ಅತ್ಯುತ್ತಮ ಆಟವನ್ನು ನೀಡಿ, ಹಲವಾರು ಕ್ರೀಡಾ ಪ್ರಶಸ್ತಿಗಳನ್ನು ತನ್ನೆಡೆಗೆ ಸೆಳೆದುಕೊಂಡ ಅದ್ಭುತ ಪ್ರತಿಭೆ ಇವರು.

ತನ್ನ ಬಿಡುವಿನ ಸಮಯದಲ್ಲಿ ಎಂದೂ ಸುಮ್ಮನೆ ಕೂರದ ಅಣ್ಣ , ಅದ್ಭುತ ಬರಹಗಾರರು ಹೌದು.!! ಹಲವಾರು ಬರಹಗಳನ್ನು ಬರೆದು ಅದರಲ್ಲೂ ಸೈ ಎನಿಸಿಕೊಂಡವರು..!!

ಇವರು ಒಬ್ಬ ಅದ್ಭುತ ಭಾಷಣಕಾರ,ಸಭಾಂಗಣದ ಸಭಿಕರನ್ನು ತನ್ನ ಮಾತಿನಲ್ಲಿ ಹಿಡಿದಿಟ್ಟುಕೊಂಡು, ಬದಲಾವಣೆ ತರುವಂತಹ ವಾಕ್ ಚತುರ ಇವರು.

ಎಲ್ಲಾ ಕ್ಷೇತ್ರಗಳಲ್ಲಿ ಅವಿನಾಶ್ ಯುವನ್ ಎಂಬ ಹೆಸರಿನ ಸಣ್ಣ ಅಲೆಯ ಸ್ಪರ್ಶ ಇದ್ದೇ ಇದೆ. ಹಾಗೆಯೇ ಮಾಧ್ಯಮ ಲೋಕದಲ್ಲಿ ಅಣ್ಣನ ಹೆಸರು ಇನ್ನು ಎತ್ತರಕ್ಕೆ ಸಾಗಬೇಕೆಂಬ ಆಸೆ ಎಲ್ಲರದ್ದು. ಆ ದಾರಿಯ ಕಡೆಗೆ ಅಣ್ಣನು ಕಠಿಣ ಪರಿಶ್ರಮದಿಂದ ಸಾಗುತ್ತಿದ್ದಾರೆ. ಮುಂದೊಂದು ದಿನ ಮಾಧ್ಯಮ ಲೋಕದಲ್ಲಿ ಅವಿನಾಶ್ ಯುವನ್ ಎಂಬ ಹೆಸರು ಪ್ರಧಾನ ವ್ಯಕ್ತಿಗಳ ಸಾಲಿನಲ್ಲಿ ಕಾಣುವಂತಹ ದಿನ ದೂರವಿಲ್ಲ ಎಂದು ಹೇಳಿದರೆ ತಪ್ಪಾಗಲಾರದು…!!

ಇವರ ಮಾತಿನಲ್ಲಿ ಇರುವ ಹಳ್ಳಿತನದ ಸೊಗಡು ನೋಡುಗರಿಗೆ,ಕೇಳುವವರಿಗೆ ತನ್ನ ಊರಿನ ನೆನಪನ್ನು ಮಾಡುತ್ತದೆ.

ಇದು ಅವಿನಾಶ್ ಅಣ್ಣನ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ ಇನ್ನುಳಿದವು ಇತಿಹಾಸ..

ಬರಹ : ವಿಜೇತ್ ಪೂಜಾರಿ ಶಿಬಾಜೆ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »