TOP STORIES:

FOLLOW US

ದುರ್ಬಲ‌ ವರ್ಗದ ಜನರ ಕಷ್ಟಕ್ಕೆ ಸದಾ ಹೆಗಲು ನೀಡಿ ಸಹಕಾರ ನೀಡುತ್ತಿರುವ ಸಂಸ್ಥೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್


ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಸಮುದಾಯ ಹಾಗು ಸಮಾಜದಲ್ಲಿರುವ ದುರ್ಬಲ‌ ವರ್ಗದ ಜನರ ಕಷ್ಟಕ್ಕೆ ಸದಾ ಹೆಗಲು ನೀಡಿ ಸಹಕಾರ ನೀಡುತ್ತಿರುವ ಸಂಸ್ಥೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್. ಮೂರು ವರ್ಷದ ಪಯಣದಲ್ಲಿ ಹಲವಾರು‌ ಸೇವಾ ಕಾರ್ಯವನ್ನು ನೀಡಿರುವ ಸಂಸ್ಥೆ ಈ ಬಾರಿ ವಿಶಿಷ್ಟ ಸೇವಾ ಯೋಜನೆಯೊಂದನ್ನು ಪೂರ್ಣಗೊಳಿಸಿ ಸಮಾಜಕ್ಕರ್ಪಿಸಿದೆ.ಕಡೇಶಿವಾಲಯ ದ ನೆತ್ತರ ಜೇರಾ ಎಂಬಲ್ಲಿನ ನಿವಾಸಿ ಶೇಖರ ಪೂಜಾರಿ ಜೇರಾ , ಕೂಲಿ ಕೆಲಸ ಮಾಡಿಕೊಂಡು ದಿನ‌ಸಾಗಿಸುತ್ತಿದ್ದು, ಪತ್ನಿ ಹಾಗು ಎರಡು ಪುಟ್ಟ ಮಕ್ಕಳ ಸಂಸಾರದ ಭಾರ ಇವರ ಮೇಲಿತ್ತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಕುಟುಂಬಕ್ಕೆ ಸಣ್ಣದಾದರೂ ಸ್ವಂತ ಸೂರೊಂದು ಬೇಕೆಂಬ ಕನಸು ಹಲವಾರು ವರ್ಷಗಳಿಂದ‌ ಮನದಾಳದಲ್ಲಿತ್ತು. ಈ ನಿಟ್ಟಿನಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾದರೂ ತೀವ್ರ ಆರ್ಥಿಕ ಅಡಚಣೆಯಿಂದಾಗಿ ಮನೆ ನಿರ್ಮಾಣದ 20% ಕೆಲಸವನ್ನೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ವರ್ಷಗಳೇ ಉರುಳಿದರು ಕನಸು ಕೈಗೂಡದೇ ಕೈಚೆಲ್ಲಿ ಕುಳಿತಿತ್ತು ಈ ಬಡ ಕುಟುಂಬ.

ಈ ಸಂಧರ್ಭ ಈ ಕುಟುಂಬಕ್ಕೆ ಆಶಾ ಕಿರಣವಾಗಿ‌ ಕಂಡದ್ದು ಬಿರುವೆರ್ ಕಡೇಶಿವಾಲಯ. ಕನಸು‌ ಕೈಚೆಲ್ಲಿ ಕುಳಿತಿದ್ದ ಕುಟುಂಬಕ್ಕೆ‌ ಸಂಸ್ಥೆ ಸಹಕಾರ ಮಾಡಲು‌ ನಿರ್ಧರಿಸಿತು. 3 ವರ್ಷದ ಪಯಣದಲ್ಲಿ ನಾಲ್ಕನೇ ಮನೆ ನಿರ್ಮಾಣ ಯೋಜನೆಗೆ ಕೈ ಹಾಕಿತು.

ಸರ್ವ ಸದಸ್ಯರ ಸಹಕಾರದೊಂದಗೆ, ಲಾಕ್ ಡೌನ್ ಸಂಧರ್ಭದ ಸಮಯವನ್ನು ಸದುಪಯೋಗಿಸಿಕೊಂಡ ಸಂಸ್ಥೆ ಹಲವಾರು ಶ್ರಮದಾನಗಳನ್ನು ನಡೆಸಿ ಹಾಗೂ ಟ್ರಸ್ಟ್ ನ ಸದಸ್ಯರ ಮೂಲಕವೇ ಎಲ್ಲಾ ಕೆಲಸಗಳನ್ನು ಮಾಡಿಸಿ ಸುಸಜ್ಜಿತ ಮನೆಯನ್ನು ನಿರ್ಮಿಸಿಯೇ ಬಿಟ್ಟಿತು.

ಶ್ರಮದಾನಗಳನ್ನು ಹೊರತುಪಡುಸಿ ಸುಮಾರು 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ದಿ.23/08/2020 ರಂದು ಸರಳ ಸಮಾರಂಭವೊಂದನ್ನು ನಡೆಸಿ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಈ ಮನೆಯನ್ನು ಹಸ್ತಾಂತರಿಸಲಾಯಿತು.

ಈ ಸಂಧರ್ಭ ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಉಧ್ಯಮಿಗಳು ಆದ ಶ್ರೀ. ಯಶವಂತ ಪೂಜಾರಿ ದೇರಾಜೆಗುತ್ತು. ಯುವ ನಾಯಕ, ಯುವ ಉಧ್ಯಮಿ ಶ್ರೀ. ಯತಿನ್ ಕುಮಾರ್ ಕಲ್ಲಡ್ಕ, ಹಾಗು ಶ್ರೀ ಕ್ಷೇತ್ರ ಬಾಕಿಲ ಇಲ್ಲಿನ ಪ್ರಮುಖರಾದ ಶ್ರೀ.ವಸಂತ ಪೂಜಾರಿ ಬಾಕಿಲಗುತ್ತು ಇವರು ಪಾಲ್ಗೊಂಡಿದ್ದರು.ಈ ಸಂಧರ್ಭ ವೇದಿಕೆಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ. ಸಂಜೀವ ಪೂಜಾರಿ ದಾಸಕೋಡಿ, ಅಧ್ಯಕ್ಷರಾದ ಶ್ರೀ. ಲೋಕನಾಥ ಪೂಜಾರಿ ತಿಮರಾಜೆ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಯುವ ಬರಹಗಾರ ಶೈಲು ಬಿರ್ವ ಅಗತ್ತಾಡಿ, ನಿಶಿ ಪೂಜಾರಿ ಬಾಕಿಲ, ಯುವ ಉಧ್ಯಮಿ ಶ್ರೀ. ಚಿತ್ತರಂಜನ್ ಹೊಸಕಟ್ಟ, ಟ್ರಸ್ಟ್ ನ ಸಂಚಾಲಕರಾದ ಶ್ರೀ.ವಿದ್ಯಾಧರ ಪೂಜಾರಿ ಅಣ್ಣೆಂಗಳ, ಹಿರಿಯರಾದ ಶ್ರೀ. ಸಾಂತಪ್ಪ ಪೂಜಾರಿ ಪಚ್ಚಡಿಬೈಲು ಹಾಗು ಟ್ರಸ್ಟ್ ನ ಟ್ರಸ್ಟಿಗಳು, ಸದಸ್ಯರು, ಮಹಿಳಾ ಘಟಕ, ವಿದ್ಯಾರ್ಥಿ ಘಟಕದ ಸದಸ್ಯರು ಉಪಸ್ಥತರಿದ್ದರು.

ಈ ಯೋಜನೆಯ ಯಶಸ್ಸನಲ್ಲಿ ಕೈಜೋಡಿಸಿದ ಎಲ್ಲಾ ಬಂಧು ಮಿತ್ರರಿಗೂ ಟ್ರಸ್ಟ್ ನ ವತಿಯಿಂದ ಹೃದಯಾಂತರಾಳದ ಧನ್ಯವಾದಗಳು.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »