ಅಭಿಪ್ರಾಯ ಸಂಗ್ರಹ
ದೈಜಿವರ್ಲ್ಡ್ ಟಿವಿಯ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮ ಟಿವಿ ಮುಖ್ಯಸ್ಥ, ಜನಪ್ರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಹಾಗೂ ತುಳುನಾಡ ತಲೈವ ಅರವಿಂದ್ ಬೋಳಾರ್ ನಡೆಸಿಕೊಡುವ ಕಾರ್ಯಕ್ರಮ. ನಟನೆಯ ಬಗ್ಗೆ ಮಾತನಾಡುವುದಾರೆ ತುಳುನಾಡಿನಲ್ಲಿ ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ. ತುಳುನಾಡಿನಲ್ಲಿ ಇದೀಗ ಹಾಸ್ಯ ಎಂದರೆ ಬೋಳಾರ್ ಹಾಗೂ ಬೋಳಾರ್ ಎಂದರೆ ಹಾಸ್ಯ ಎಂಬ ಸ್ಥಿತಿಯುಂಟಾಗಿದೆ.
ಅರವಿಂದ್ ಬೋಳಾರ್ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಅವರ ಪ್ರತಿಭೆ ಹಾಗೂ ಲಕ್ಷಾಂತರ ಅಭಿಮಾನಿಗಳ ಆಶೀರ್ವಾದ. ಇದೀಗ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಬರೋಣ. ಕಾರ್ಯಕ್ರಮದ ಹದಿನಾಲ್ಕು ಸಂಚಿಕೆಗಳು ಈಗಾಗಲೇ ಮುಗಿದಿವೆ. ಈ ಸರಣಿಯಲ್ಲಿ ಇನ್ನು ಎಷ್ಟು ಸಂಚಿಕೆಗಳು ಬಾಕಿ ಇವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಹದಿನಾಲ್ಕು ಸಂಚಿಕೆಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಬೋಳಾರರು ತನ್ನನ್ನು ಯಾಕೆ ತುಳುನಾಡ ಮಾಣಿಕ್ಯ ಅಥವಾ ತುಳುನಾಡ ತಲೈವ ಎಂಬ ಎಂದು ವೀಕ್ಷಕರು ಕರೆಯುತ್ತಾರೆ ಎಂದು ಸಾಬೀತುಪಡಿಸಿದ್ದಾರೆ. ಫಿಲೋಸಫಿ ಹಾಗೂ ಉತ್ತಮ ಸಂದೇಶಗಳೊಂದಿಗಿನ ಸ್ಕ್ರಿಪ್ಟ್ ಹೊಂದಿದ ಈ ಕಾರ್ಯಕ್ರಮದಲ್ಲಿ ಬೋಳಾರರು ನೂರಕ್ಕೆ ನೂರು ಶತಮಾನ ಹೊಸತನವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕಳೆದ ವಾರ ಅವರು ಮಾಡಿದ Double Act ಅಂತೂ ಸ್ಥಳೀಯ ವಾಹಿನಿಗಳ ಇತಿಹಾಸದಲ್ಲಿ ಹೊಸ ಧಾಕಲೆಯನ್ನೇ ರಚಿಸಿದೆ. ಆಷ್ಟೊಂದು Perfection ಅದರಲ್ಲಿ ಇತ್ತು.
ಹಳೆ ಮಧ್ಯವನ್ನು ಹೊಸ ಬಾಟ್ಲಿಯಲ್ಲಿ ತುಂಬಿಸಿಕೊಟ್ಟಂತೆ ಪದೇ ಪದೇ ಹಳೆಯ ಹಾಸ್ಯ ಸಂಭಾಷಣೆ, ಕಲಾವಿದರ ಪೋಷಕರ ಹೆಸರು ಉಲ್ಲೇಖಿಸಿ “ ನಿನ್ನ ಅಮ್ಮೆ..ಎನ್ನ ಅಮ್ಮೆ” ಎಂದು ಅವರ ತೇಜೋವಧೆ ಮಾಡಿ, ಅಶ್ಲೀಲ ಮಾತುಗಳೊಂದಿಗೆ, ಸ್ಕ್ರಿಪ್ಟಿ ಬಗ್ಗೆ ಏನೆಂದು ಗೊತ್ತಿರದ, ಇನ್ನೂ Update ಆಗದ ಕೆಲವರು ಮಾಡುವ ಹಾಸ್ಯ ಕಾರ್ಯಕ್ರಮಗಳು ಜನರಿಂದ ತಿರಸ್ಕಾರಗೊಳ್ಳಲು ಆರಂಭವಾಗಿವೆ. ಕೆಲ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ದೊರಕುವ ನೀರಸ ಪ್ರತಿಕ್ರಿಯೆಯೇ ಇದನ್ನು ತೋರಿಸುತ್ತದೆ. ಆದರೆ ಬೋಳಾರ್ ಕಾರ್ಯಕ್ರಮಗಳು ಮಾತ್ರ ವೀಕ್ಷಕರನ್ನು ಹಿಡಿದು ನಿಲ್ಲಿಸುವಲ್ಲಿ ಸಫಲವಾಗುತ್ತಿವೆ. ಕಾರಣ ಬೋಳಾರರು ಹೊಸತನವನ್ನು ನೀಡುತ್ತಿದಾರೆ. ಅವರ ಹಾಸ್ಯಗಳಲ್ಲಿ ಪ್ರಸ್ತುತ ವಿದ್ಯಾಮಾನಗಳ ಆಗುಹೋಗುಗಳು ನೇರವಾಗಿ ಪ್ರತಿಫಲಿಸುತ್ತಿವೆ.
ಉತ್ತಮ ಸ್ಕ್ರಿಪ್ಟ್ ಹಾಗೂ ತಾಂತ್ರಿಕ ವರ್ಗವನ್ನು ಅವರು ಬಳಸುತ್ತಿದ್ದಾರೆ. ಫತಿಫಲವೆಂಬಂತೆ ದಿನೇ ದಿನೇ ವೀಕ್ಷಕರನ್ನು ಮನಬಿಚ್ಚಿ ನಗಿಸುವ ಜೊತೆಗೆ , ಸಮಾಜಿಕವಾಗಿ ಚಿಂತಿಸಲೂ ಅವರು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಓರ್ವ ಜವಬ್ದಾರಿಯುತ ಕಲಾವಿದನಾಗಿ ಬೋಳಾರ್ ಮಿಂಚಲು ಇದು ಕಾರಣವಾಗಿರಬಹುದು. ಚಿಂತನೆಯೊಂದಿಗೆ ನಮ್ಮನ್ನು ನಗಿಸುವ ಬೋಳಾರ್ ಅವರಿಗೆ ಧನ್ಯವಾದಗಳು.
ತುಳುನಾಡಿನ Updated ಕಲಾಭಿಮಾನಿಗಳ ಪರವಾಗಿ,