ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಸುಸಂಸ್ಕೃತ ಸಮಾಜವನ್ನು ರೂಪಿಸಲು ಅವಿರತ ಶ್ರಮಿಸುವ ಸಮಸ್ತ ಗುರುವೃಂದದ ಗೌರವಾರ್ಥವಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ ‘ಬದಲಾವಣೆಯತ್ತ ಶಿಕ್ಷಣ ನೀತಿ’ ಯುವವಾಹಿನಿಯ ಸಭಾಂಗಣ ಬಲಾಯಿಪಾದೆ, ಉದ್ಯಾವರದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಾದ ದೀಪಕ್ ಕೆ. ಬೀರ ಭಾಗವಹಿಸಿದ್ದರು.
ಸಮಾರಂಭದಲ್ಲಿ ಯು. ಕಮಲಬಾಯಿ ಹೈಸ್ಕೂಲ್ ಕಡಿಯಾಳಿಯ ನಿವೃತ್ತ ಮುಖ್ಯ ಶಿಕ್ಷಕ ಎನ್.ಎಮ್.ಪೂಜಾರಿ ಮತ್ತು ಶ್ರೀ ಮಹಾದೇವಿ ಹೈಸ್ಕೂಲ್ ಕಾಪು ನಿವೃತ್ತ ಶಿಕ್ಷಕ ಮೋಹನ್ ಸುವರ್ಣರನ್ನು ಸನ್ಮಾನಿಸಲಾಯಿತು. ಉಡುಪಿ ಘಟಕದ ಸದಸ್ಯ ಶಿಕ್ಷಕರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಜಗದೀಶ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕರಾದ ಶಿಕ್ಷಕಿ ಶ್ರೀಮತಿ ಅಮಿತಾಂಜಲಿ ಮತ್ತು ಉಪನ್ಯಾಸಕ ದಯಾನಂದ ಕರ್ಕೇರ, ಕಾರ್ಯದರ್ಶಿ ಮಾಲತಿ ಅಮೀನ್, ಮಹಿಳಾ ಸಂಚಾಲಕಿ ಕುಮಾರಿ ನವೀಷ ಮತ್ತು ಯುವವಾಹಿನಿಯ ಸದಸ್ಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.