ಬರಹ: ಪುಷ್ಪರಾಜ್ ಪೂಜಾರಿ
ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆ ಎರಡೂ ನಿಷ್ರಯೋಜಕವಾಗುತ್ತದೆ. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆದು ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ. ಚಿತ್ರಕಲಾ ಶಿಕ್ಷಣ ಜೀವನದ ಸಮರಸಗಳನ್ನು ಹೊಂದಿರುವ ಕಲೆ, ಇದು ಕೇವಲ ಕಲಾ ಶಿಕ್ಷಣವಲ್ಲ.
ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ|ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಖ್ಯಾತ ಚಿತ್ರ ಕಲಾವಿದೆ ಮಂಜುಶ್ರೀ ನಿಜಕ್ಕೂ ಇವತ್ತು ಕಲಿಯುವ ಛಲ ಹಾಗೂ ಎಲ್ಲರ ಬೆಂಬಲವಿದ್ದರೆ ಏನ್ನನ್ನೂ ಸಾಧಿಸಬಹುದು ಎನ್ನುದ್ದಕ್ಕೆ ಉದಾಹರಣೆಯಾಗಿದ್ದಾರೆ.
ಮಂಜುಶ್ರೀ ಚರಿತ್ ಅವರು ಮೂಲತಃ ಮಂಗಳೂರಿನ ಬಿಜೈನಲ್ಲಿ ಸುಧೀರ್ ಕುಮಾರ್ ಹಾಗೂ ವಿಜಯ ಅವರ ಪುತ್ರಿಯಾಗಿ ಜನಿಸಿ, ತನ್ನ ವಿದ್ಯಾಭ್ಯಾಸ ವನ್ನು ಕೆನರಾ ಕಾಲೇಜು ನಲ್ಲಿ ಮುಗಿಸಿ, ಬಿಎಸ್ ಸಿ ಫ್ಯಾಷನ್ ಡಿಸೈನರ್ ಪದವಿ ಪಡೆದು, ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನರ್ ಕೊರ್ಸ್ ಕೂಡ ಮಾಡಿದ ಇವರು, ಬಾಲ್ಯದಿಂದಲೇ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ್ದರು. ಇದರ ಜೊತೆಗೆ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ವಾಲಿಬಾಲ್ ಆಟದಲ್ಲಿ ಬೆಸ್ಟ್ ಆಟ್ಯಾಕರ್ ಎಂಬ ಬಿರುದು ಕೂಡ ದೊರೆಯಿತು.ಹಾಗೂ ಬೆಸ್ಟ್ ಔಟ್ ಗೊಂಯಿಗ್ ಸ್ಟುಂಡೆಟ್ ಆಗಿದ್ದಾರೆ.ನಂತರ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ ಇವರು ಎಲ್.ಕೆ ಶೆವ್ಗೂರ್ ಚಿತ್ರ ಕಲೆ ಶಾಲೆಗೆ , ವಿಷ್ಣು ಸದ್ಗುರು ಗುರುಗಳ ಪ್ರೆರಣೆಯಿಂದ ಚಿತ್ರ ಕಲೆಯನ್ನು ಸಂಪೂರ್ಣವಾಗಿ ಅರಿತರು. ಜನ ಮೆಚ್ಚುಗೆಗೆ ಪಾತ್ರರಾದರು.
ಮುದ್ದುಲಕ್ಷ್ಮಿ ಧಾರಾವಾಹಿಯ ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಮಂಜುಶ್ರೀಯವರಿಗೆ ಕಲೆಗೆ ಪ್ರೊತ್ಸಾಹ ನೀಡುವುದರ ಜೊತೆಗೆ ಫ್ಯಾಷನ್ ಲೋಕಕ್ಕೂ ಸಾತ್ ಕೊಡುವುದರ ಜೊತೆಗೆ, ಸಿನಿಮಾ ರಂಗಕ್ಕೂ ಪರಿಚಯಿಸುತ್ತಿದ್ಡಾರೆ.
ಈಗಾಗಲೆ ಇವರು ಆಟ್ಸ್ ಕೆಫೆ ಎಂಬ ಹೊಸ ಚಿತ್ರ ಕಲೆಯ ಆನ್ ಲೈನ್ ವೆಬ್ ಸೈಟ್ ಪ್ರಾರಂಭಿಸಿದ್ದು ಇದರ ಮೂಖಾಂತರ ಚಿತ್ರ ಕಲೆಯಲ್ಲಿ ಆಸಕ್ತಿ ಹಾಗು ಕಲಿಯುವವರಿಗೆ ಗುರುಗಾಳಾಗಿದ್ದಾರೆ.
ಆಟ್ಸ್ ಕೆಫೆ ಕಳೆದ 4 ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು, ಇತ್ತೀಚೆಗೆ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ದೇಶ ವಿದೇಶಗಳಿಂದ ಚಿತ್ರ ಕಲೆ ತರಭೇತಿಗೆ ನೋಂದಣಿಯಾಗಿದ್ದಾರೆ ಅವರ ಚಿತ್ರಕಲಾ ಆಸಕ್ತಿಗೆ ಇನ್ನಷ್ಟು ಹುಮ್ಮಸ್ಸು ದೊರಕಿದೆ. ಇದನ್ನು ಸಂತಸದಿಂದ ವ್ಯಕ್ತಪಡಿಸಿದ್ದಾರೆ.
ಚಿತ್ರಕಲಾ ಆನ್ ಲೈನ್ ಕ್ಲಾಸ್ ಗೆ ಭಾಗವಹಿಸುವವರು ಸಂಪರ್ಕಿಸಿ: +91 9035495532 ( ಮಂಜುಶ್ರೀ ಚರಿತ್ )