TOP STORIES:

ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು


ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು……

ಪದ್ಮರಾಜ್ ಸರ್ ರವರು ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ.ಅವರ ಜೊತೆ ಮಾತನಾಡುವಾಗ ಆ ಶಕ್ತಿಯ ಪ್ರಭಾವ ನಮ್ಮ ಮೇಲೆ ಪ್ರವಹಿಸುತ್ತದೆ ಹಾಗೂ ವಿಶೇಷವಾದ ಭಕ್ತಿಭಾವ,ಗೌರವ ಮೂಡುತ್ತದೆ.ಅಷ್ಟೊಂದು ಆಕರ್ಷಣೀಯ ವ್ಯಕ್ತಿತ್ವ. ಅವರಾಡುವ ಮಾತುಗಳು ಕೇವಲ ಬಾಯಿಂದ ಹೊರಡುವುದಲ್ಲ,ಹ್ರದಯದಿಂದ ಮೂಡುವಂತಹದ್ದು.ಮಾತಿನಲ್ಲಿ ಎಲ್ಲಿಯೂ ಕಲ್ಮಷವಿಲ್ಲ.ನೇರ ನಡೆನುಡಿಯ,ಪ್ರೀತಿ ತುಂಬಿದ, ಸೌಜನ್ಯಯುತ ಮಾತುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.ಯಾರ ಜೊತೆ ಮಾತನಾಡುವಾಗಲೂ ಮುಖದಲ್ಲಿ ಮೂಡುವ ಮಂದಹಾಸ ಮುಗುಳ್ನಗೆಯಲ್ಲಿ ಪ್ರಾಮಾಣಿಕತೆ, ಪ್ರೀತಿ ತುಂಬಿರುತ್ತದೆ.ನೊಂದವರು,ಶೋಷಿತರು ಯಾರೇ ಅವರನ್ನು ಸಂಪರ್ಕಿಸಲಿ,ಕೂಡಲೇ ಸ್ಪಂದಿಸುವ ಮಾನವೀಯ ಹ್ರದಯವಿದೆ.ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿ,ಅವರ ತತ್ವಾದರ್ಶದಂತೆ ಸರ್ವಧರ್ಮೀಯರನ್ನು ಸಮಾನರಂತೆ ಕಾಣುವ ಹ್ರದಯ ವೈಶಾಲ್ಯತೆ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿ ಕೊಡುವ ಧೀಮಂತ ನಾಯಕ.*
_ಎಳೆಯ ಪ್ರಾಯದಲ್ಲೇ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿ, ನಾರಾಯಣ ಗುರುಗಳು ತಮ್ಮ ದಿವ್ಯಹಸ್ತದಿಂದ ಪ್ರತಿಷ್ಠಾಪಿಸಿದ ಕರ್ನಾಟಕ ರಾಜ್ಯದ ಏಕೈಕ ಕ್ಷೇತ್ರವಾದ ಕುದ್ರೋಳಿ ದೇವಾಲಯದಲ್ಲಿ ದೀರ್ಘಕಾಲದಿಂದ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯೊಳಗಡೆ ಹಳೇ ಬೇರು,ಹೊಸ ಚಿಗುರು ಎಂಬಂತೆ ಎಲ್ಲಾ ಹಿರಿಯರ ಗೌರವಕ್ಕೆ ಪಾತ್ರರಾಗಿ,ಬಡವರ ಕಣ್ಮಣಿ – ನಡೆದಾಡುವ ದೇವರೆಂದೇ ಖ್ಯಾತರಾದ ಶ್ರೀ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಬೆಳಗಿದ ಬಿಲ್ಲವ ಸಮಾಜದ ಕಣ್ಮಣಿಯಾಗಿ,ಯುವಕರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ ಪದ್ಮರಾಜ್ ರವರಿಗೆ ನಿಜಕ್ಕೂ ಬಿಲ್ಲವ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ.ಈಗಾಗಲೇ ಅದೆಷ್ಟೋ ಬಿಲ್ಲವ ಸಮಾಜದ ಸಂಘಟನೆಯೊಳಗೆ ಭಿನ್ನಮತ ತಲೆದೋರಿದಾಗ ಎಲ್ಲರೂ ಹುಡುಕಿಕೊಂಡು ಬರುವುದು ಪದ್ಮರಾಜ್ ರವರ ಬಳಿಗೆ. ಎರಡೂ ಕಡೆಯವರನ್ನು ಕುಳ್ಳಿರಿಸಿ,ತನ್ನ ಮಾತಿನ ಶಕ್ತಿಯಿಂದ ಐಕ್ಯತೆ ಸಾಧಿಸಿದ ಸಮನ್ವಯಕಾರ. ರಾಜಕೀಯದಲ್ಲಿ ಎಲ್ಲಿಯೂ ಗುರುತಿಸಿಕೊಳ್ಳದೆ,ಎಲ್ಲರ ಪ್ರೀತಿ ವಿಶ್ವಾಸಗಳಿಸಿದ ಪದ್ಮರಾಜ್ ರವರನ್ನು ಅಜಾತಶತ್ರು ಎಂದರೆ ತಪ್ಪಾಗಲಾರದು.ದೇಶದಲ್ಲೇ ಗಮನ ಸೆಳೆದಿರುವ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾಧಿಗಳ ನೇರ ಸಂಪರ್ಕ ಹಾಗೂ ಅವರನ್ನು ಹೆಸರು ಕರೆದು ಪ್ರೀತಿಯಿಂದ ಮಾತನಾಡಿಸುವ ಗುಣದ ಮೂಲಕ ಅವರ ನೆನಪು ಶಕ್ತಿಯ ಅಗಾಧತೆಯನ್ನು ಎತ್ತಿ ತೋರಿಸುತ್ತದೆ._
*ಇಂತಹ ಅಪಾರ ಪಾಂಡಿತ್ಯ ಹೊಂದಿದ ಪದ್ಮರಾಜ್ ರವರು ಗೋಕರ್ಣಾ ದೇವರ ದಯೆಯಿಂದ,ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಿಂದ ಕೊರೋನಾ ಸಂಕಷ್ಟದ ಕಾಲದಲ್ಲೂ ಯಾವ ಕ್ಷೇತ್ರದಿಂದಲೂ ಸಾಧ್ಯವಾಗದ ಕೆಲಸವನ್ನು ಪದ್ಮರಾಜ್ ರವರು ಸ್ವತಃ ಮುಂದಡಿಯಿಟ್ಟು, ಅದೆಷ್ಟೋ ಮಾನವೀಯ ಹ್ರದಯಗಳನ್ನು ಒಟ್ಟು ಸೇರಿಸಿ, ಸುಮಾರು 350 ಕ್ವಿಂಟಾಲ್ ಅಕ್ಕಿಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸಿದ್ದು ನಿಜಕ್ಕೂ ಅತ್ಯದ್ಭುತವಾಗಿದೆ. ಕೋರೋನಾ ನೆಪದಲ್ಲಿ ದಸರಾ ಉತ್ಸವವನ್ನು ಮಾಡಲು ಜಿಲ್ಲಾಡಳಿತ ನಿರಾಕರಿಸಿದಾಗ, ಜನರ ಪರವಾಗಿ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿ ಜಿಲ್ಲಾಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಹುಬ್ಬೇರಿಸುವಂತೆ ಮಾಡಿದ ನಿಜವಾದ ಜನನಾಯಕ.ಇವರ ಮುತುವರ್ಜಿಯಿಂದ ಹಾಗೂ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಿಂದಲೇ ಈ ಬಾರಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷವಾಕ್ಯದೊಂದಿಗೆ ಯಶಸ್ವಿ ದಸರಾ ನಡೆದಿರುವುದನ್ನು ನಾವೆಂದೂ ಮರೆಯಬಾರದು.ದಸರಾ ಉತ್ಸವದಲ್ಲಿ ಹುಲಿವೇಷಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದಾಗ ಹುಲಿ ವೇಷ ದಸರಾ ಹಬ್ಬದ ವಿಶೇಷತೆ,ಹಿಂದೂ ಧಾರ್ಮಿಕತೆಯ ಪ್ರತೀಕವೆಂದು ಸಾರಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಹುಲಿವೇಷಕ್ಕೆ ಅವಕಾಶ ದೊರಕಿಸಿ ಕೊಟ್ಟ ನಿಜವಾದ ಧಾರ್ಮಿಕ ನಾಯಕರು. ಈ ಬಾರಿಯ ದಸರಾ ಉತ್ಸವವನ್ನು ಸವಾಲಾಗಿ ಸ್ವೀಕರಿಸಿ, ಸಂಘಸಂಸ್ಥೆಗಳನ್ನು ಹಾಗೂ ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ತನ್ನತ್ತ ಸೆಳೆದು,ಸ್ವಯಂಸ್ಪೂರ್ತಿಯಿಂದ ಸ್ವಯಂಸೇವಕರಾಗಿ ದುಡಿಯುವಂತೆ ಪ್ರೇರೇಪಿಸಿ, ಜಗದ್ವಿಖ್ಯಾತ ಮಂಗಳೂರು ದಸರಾವನ್ನು ಮತ್ತೊಮ್ಮೆ ಯಶಸ್ವಿಗೊಳಿಸಿ ವಿಶ್ವಭೂಪಟದಲ್ಲಿ ಅಜರಾಮರವಾಗಿ ಬೆಳಗುವಂತೆ ಮಾಡಿದ ಕಾರ್ಯದಲ್ಲಿ ಪದ್ಮರಾಜ್ ರವರು ನಿಜಕ್ಕೂ ಕೇಂದ್ರಬಿಂದು.*

ನಿತೀಶ್ ಪೂಜಾರಿ ಮರೋಳಿ
ಮಂಗಳೂರು


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »