TOP STORIES:

” ದೀಪಾವಳಿ ಮಾಂಕಾಳಿ ಕುಣಿತ “


ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಹಾಗು ಉಡುಪಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಾಗಿ ಈ ಕುಣಿತ ಕಂಡು ಬರುತ್ತದೆ. ದೀಪಾವಳಿ ಪಾಡ್ಯದಿಂದ ಮೊದಲ್ಗೊಂಡು ಪ್ರತೀ ಹಗಲಲ್ಲಿ ನಲಿಕೆ (ಪಾಣ) ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ. ಗ್ರಾಮದ ಗುತ್ತು ಅಥವಾ ಗೂಡಿನ ಮನೆಯಿಂದ ಆರಂಭಿಸಿ ಎಲ್ಲಾ ಮನೆಗಳಿಗೂ ಹೋಗುತ್ತಾರೆ. ಇವರಿಗೆ ಸಂಭಾವನೆಯಾಗಿ ಮನೆಮನೆಯಿಂದ ಹಣ ಸಿಗುವುದಿಲ್ಲ. ಬದಲಿಗೆ ಅಕ್ಕಿ, ಎಣ್ಣೆ, ಉಪ್ಪು, ಮೆಣಸು ದೊರೆಯುತ್ತದೆ.ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಇರುತ್ತಾನೆ. ಈತ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತಾನೆ. ಮುಖವಾಡವೆಂದರೆ ಕಣ್ಣು, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ ತಯಾರಿಸುತ್ತಾರೆ. ಕುಣಿಯುವವ ಸೀರೆಯನ್ನು ನೆರಿಗೆ ಹಾಕಿ ಒಂದರ ಮೇಲೊಂದರಂತೆ ಹಂತಹಂತವಾಗಿ ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕಾಲಿಗೆ ಗಗ್ಗರ ಕಟ್ಟಿ ಮೈಯನ್ನು ದೊಗಲೆ ಅಂಗಿಯಿಂದ ಮುಚ್ಚಿಕೊಳ್ಳುತ್ತಾನೆ. ಮುಖವಾಡದ ಹಿಂದಿನಿಂದ ಒಂದು ಸೀರೆಯನ್ನು ಇಳಿ ಬಿಟ್ಟಿರುತ್ತಾನೆ. ಇದು ಮುಖವಾಡ ಇಟ್ಟುಕೊಂಡ ವ್ಯಕ್ತಿಯ ಬೆನ್ನನ್ನು ಆವರಿಸುತ್ತದೆ. ಮುಖವಾಡವನ್ನು ಮುಖಕ್ಕೆ ಕಟ್ಟಿಕೊಳ್ಳುವುದಿಲ್ಲ. ಬದಲಿಗೆ ಎರಡು ಕೈಗಳಿಂದ ಮುಖದೆದುರು ಹಿಡಿದುಕೊಳ್ಳುತ್ತಾರೆ.

Watch Video is here:  https://www.facebook.com/watch/?v=698187894157792

ಹಾಡು ಹೇಳುವಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಿದ್ದಂತೆ ಇದರ ಲಯಕ್ಕನುಗುಣವಾಗಿ ನರ್ತಕ ಸಣ್ಣ ಹೆಜ್ಜೆಗಳನ್ನಿಟ್ಟು ಸುತ್ತು ಬರುತ್ತಾನೆ. ತೆಂಬರೆಯ ಬಡಿತ ನಿಧಾನವಾಗಿರುತ್ತದೆ. ಕೈಗಳಲ್ಲಿ ಮುಖವಾಡವನ್ನು ಮುಖಕ್ಕೆ ಎದುರಾಗಿ ಹಿಡಿದುಕೊಂಡಿರುವುದರಿಂದ ಕೈಗಳಲ್ಲಿ ಯಾವುದೇ ಭಂಗಿಯನ್ನು ಅಭಿನಯಿಸುವಂತಿಲ್ಲ. ಮುಖವಾಡವನ್ನೆತ್ತಿ ಕುಣಿತಗಾರ ನೆಲವನ್ನು ನೋಡಬೇಕಾಗಿರುವುದರಿಂದ ಕುಣಿತದಲ್ಲಿ ವೇಗ ಇರುವುದಿಲ್ಲ. ಈ ಸಂದರ್ಭದಲ್ಲಿ ಹೇಳುವ ಹಾಡು ತುಳು ಭಾಷೆಯಲ್ಲಿರುತ್ತದೆ. ಊರಿನ ರೋಗ ರುಜಿನಗಳನ್ನು ಹೋಗಲಾಡಿಸಲು ಘಟ್ಟದಿಂದ ಇಳಿದು ಮಾಂಕಾಳಿ ಬರುತ್ತಾಳೆ ಎಂಬ ನಂಬಿಕೆ ಜನಪದರಲ್ಲಿದೆ. ತುಳು ನಾಡಿನಲ್ಲಿ ಆಚರಣೆಯಲ್ಲಿರುವ ಅಟಿಕಳಿಂಜನು ಊರಿನ ಮಾರಿಯನ್ನು ನಿವಾರಿಸುವುದಕ್ಕಾಗಿ ಆಷಾಢ ಮಾಸದಲ್ಲಿ ವರ್ಷಕ್ಕೆ ಒಂದಾವರ್ತಿ ಗ್ರಾಮದಲ್ಲಿ ಬರುವುದು. ತುಳಸಿ ಪೂಜೆಯ ದಿನ ಮಾಂಕಾಳಿ ಕುಣಿತದ ಅಂತ್ಯ ಪೂಜೆ. ಆ ದಿನ ಸಂಭಾವನೆಯಾಗಿ ದೊರೆತ ಭತ್ತ, ಅಕ್ಕಿ, ತೆಂಗಿನಕಾಯಿ, ಉಪ್ಪು, ಹುಳಿ, ಮಸಿ, ಮೆಣಸುಗಳನ್ನು ಸರಳೀ ಎಲೆಯಲ್ಲಿ ಸಾಂಕೇತಿಕವಾಗಿ ಮನೆಯ ಪಕ್ಕದಲ್ಲಿ ಬಡಿಸಿಡುತ್ತಾರೆ, ಅದರ ಎದುರು ಮಾಂಕಾಳಿಯ ಮುಖವಾಡವನ್ನಿಟ್ಟು ಊರಿನ ಮಾರಿಯನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ, ಹಾಗೂ ಮುಖವಾಡವನ್ನು ತೆಗೆದು ಹೊಳೆಯಲ್ಲಿ ಬಿಡುತ್ತಾರೆ. ಈ ಮೂಲಕವಾಗಿ ಊರಿನ ಮಾರಿಯನ್ನು ಹೊಳೆ ದಾಟಿಸುವ ಆಶಯವನ್ನು ಕಾಣಬಹುದಾಗಿದೆ.

(ಸಂಪಾದಕರು: ಪ್ರೊ. ಹಿ. ಚಿ. ಬೋರಲಿಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ. ಪುಟ ೨೬.)

Credits: Beauty of Tulunad  facebook page


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »