TOP STORIES:

FOLLOW US

ಯಕ್ಷ ತರಂಗ- ಡಾ. ದಿನಕರ್. ಎಸ್. ಪಚ್ಚನಾಡಿ


ತುಳುನಾಡ ನರ ನಾಡಿ ಮಿಡಿತ. ಯಕ್ಷಗಾನವೆಂಬ ಗಂಡುಕಲೆಯ ಸೆಳೆತ

ಯಕ್ಷಗಾನ ವೈಭವದ ಧ್ವನಿಯಾಗಿ ತುಳುನಾಡ ಮಣ್ಣಲ್ಲಿ ಹುಟ್ಟಿ ಯಕ್ಷರಂಗದ ನಿರ್ದೇಶಕನಾಗಿ ಕಲೆಯಲ್ಲಿ ಬೆಳೆದು ಪ್ರಜ್ವಲಿಸಿದ ಹೀಗೊಂದು ಪ್ರತಿಭೆ ಡಾ.ದಿನಕರ ಎಸ್.ಪಚ್ಚನಾಡಿ.


ಯಕ್ಷ ಕೌಮುದಿಯು ಇವರತ್ತ ಹರಿದು ಸೆಳೆದು ಯಕ್ಷಗಾನದಲ್ಲಿ ಸಾಧನೆಯ ಸೊಬಗಿನ ಸೋನೆ ವರ್ಷವಾಗಿ ಹರ್ಷವಾಗಿ ಶಿಷ್ಯರಿಗೆ ಕಲಾ‌‌ ಧಾರೆಯನ್ನು ಎರೆಯುತ್ತಲೇ ಬಂದಿರುವ ಶ್ರೀಯುತರು ೧೪ ಜೂನ್ ೧೯೭೫ ರಲ್ಲಿ ದಿ.ದೇಜಪ್ಪ ಪಚ್ಚನಾಡಿ ಹಾಗೂ ಶ್ರೀಮತಿ ದೇವಕಿ ಪಚ್ಚನಾಡಿ ದಂಪತಿಗೆ ಸುಪುತ್ರರಾಗಿ ಜನಿಸಿದರು. ವಿದ್ಯಾಭ್ಯಾಸದಲ್ಲಿ ಬಿ. ಎ. ಪತ್ರಿಕೋದ್ಯಮ, ಕನ್ನಡದಲ್ಲಿ ಎಂ. ಎ ಪದವಿ ಪಡೆದು‌ ನಂತರ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಮೀಮಾಂಸೆ ಕುರಿತು ಸಂಶೋಧನೆ ಮಾಡಿ ಡಿ’ಲಿಟ್(ಡಾಕ್ಟರ್ ಆಫ್ ಲಿಟ್ರೆಚರ್)ಪದವಿ ಪಡೆದರು.

ಶ್ರೀಯುತರ ಸಾಧನೆಗೆ ಚಿಕ್ಕಂದಿನಿಂದಲೇ ಅವರ ಅಜ್ಜಿಯಿಂದ ಪ್ರೋತ್ಸಾಹ ಆರಂಭವಾಯಿತು. ಅಜ್ಜಿ *”ಆಟದ ಲೋಲಮಕ್ಕ”* ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವರು.
ಪದವಿನಂಗಡಿಯಲ್ಲಿ ಗೇರುಬೀಜ ಘಟಕ ಬಂದ್ ಆದಾಗ ಮತ್ತೆ ಘಟಕ ಪ್ರಾರಂಭವಾದರೆ ದೇವರಿಗೆ ಯಕ್ಷಗಾನ ಬಯಲಾಟದ ಸೇವೆಯನ್ನು ನೀಡುವೆ ಎಂದು ಹರಕೆ ಹೊತ್ತಂತಹ ಸಂದರ್ಭದಲ್ಲಿ ಹರಕೆಗೆ ಪ್ರತಿ ಫಲ ಫಲಿಸಿದ ನಂತರ ಸತತ ೩೯ ವರ್ಷಗಳ ನಿರಂತರ ಕಟೀಲು ಮೇಳದ ದೇವಿ ಮಹಾತ್ಮೆ ಯಕ್ಷಗಾನ ಸೇವೆಯನ್ನು ಊರ ಕಲಾಭಿಮಾನಿಗಳ ಸಹಕಾರದಲ್ಲಿ ನೆರವೇರಿಸುತ್ತಾ ಬಂದಿರುವರು. ಪ್ರಸ್ತುತ ಕುಟುಂಬದವರು ಸೇವೆಯನ್ನು ಮುಂದುವರಿಸಿ, ೫೧ ವರ್ಷಗಳ ಸೇವೆ ಸಂದಿದೆ. ಅಜ್ಜಿಗೆ ಯಕ್ಷಗಾನ ಸೇವೆಯಿಂದ ಆಗಿರುವ ಸಂತೃಪ್ತಿ ಹಾಗೂ ಸೇವೆಯ ಮೇಲಿರುವ ಅಜ್ಜಿಯ ನಂಬಿಕೆ ಹಾಗೂ ಪ್ರೀತಿಯೇ ಮೊಮ್ಮಗನನ್ನು ಇಂದು ಯಕ್ಷಗಾನದಲ್ಲಿ ಕರಗತಗೊಳಿಸಿದೆ. ಹೀಗೆ ಇವರ ಯಕ್ಷಗಾನದ ಪಯಣವು ಆರಂಭವಾಯಿತು.

ಮೊದಲ ಹಂತದ ನಾಟ್ಯಾಭ್ಯಾಸವನ್ನು ಕಾವೂರು ಕೇಶವರವರಲ್ಲಿ, ಡಾ.ಸುಕುಮಾರ್ ಪಂಡಿತ್ ರವರ ಸಂಚಾಲಕತ್ವದ ಪದವಿನಂಗಡಿ, ಯಕ್ಷ ಸಂಗಮದ ಮೂಲಕ ನಿತ್ಯ ವೇಷ ಹಾಗೂ ಬಾಲ ಅಯ್ಯಪ್ಪನಾಗಿ ರಂಗ ಪ್ರವೇಶ. ಆಮೇಲೆ ಎರಡನೇ ಹಂತದಲ್ಲಿ ಭಾರತೀಯ ವಿದ್ಯಾಭವನ ಇಲ್ಲಿ ಒಂದು ವರ್ಷ‌ ತರಬೇತಿ ಪಡೆದರು. ಪಿ.ವಿ ಪರಮೇಶ್ (ನಾಟ್ಯ) ಹಾಗೂ ಸರ್ಪಂಗಳ ಈಶ್ವರ ಭಟ್ (ಪ್ರಸಂಗ ಮಾಹಿತಿ), ಮದ್ದಳೆಯ ಪ್ರಾಥಮಿಕ ಶಿಕ್ಷಣವನ್ನು ನೆಡ್ಲೆ ನರಸಿಂಹ ಭಟ್ ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಪಡೆದಿರುವರು. ಛಂದೋಬ್ರಹ್ಮ ಡಾ.ಎನ್ ನಾರಾಯಣ ಶೆಟ್ಟಿಯವರಿಂದ ಛಂದಸ್ಸಿನ ಆಳವಾದ ಅಧ್ಯಯನ ಮಾಡಿರುವರು.

ಡಾ.ಅಮೃತ ಸೋಮೇಶ್ವರ, ಕುಂಬಳೆ ಸುಂದರ ರಾವ್, ಡಾ.ಎಂ ಪ್ರಭಾಕರ ಜೋಶಿ,‌ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಪ್ರೊ.ಎ.ವಿ.ನಾವಡ, ಡಾ.ಮೋಹನ ಕುಂಟಾರ್, ತೋನ್ಸೆ ಪುಷ್ಕಳ್ ಕುಮಾರ್, ಮುದ್ದು ಮೂಡು ಬೆಳ್ಳೆ, ಡಾ.ಸದಾನಂದ ಪೆರ್ಲ, ಶಿವಾನಂದ ಕರ್ಕೇರ, ದೇವರಾಜ ಹೆಗ್ಡೆ ಪುತ್ತೂರು, ಶಶಿಲೇಖ. ಬಿ, ವರ್ಕಾಡಿ ರವಿ ಆಲೆಪೂರಾಯ ಇವರೆಲ್ಲರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಬೆಳೆದ ಯುವ ವಿದ್ವಾಂಸ ಡಾ.ಪಚ್ಚನಾಡಿ. ಯಕ್ಷಗಾನದ ಬಹುಮುಖ
ಕಲಾವಿದನಾಗಿ ತಮ್ಮ ಅನನ್ಯ ಚಿಂತನೆಯ ಮೂಲಕ ಅನೇಕ ಕೃತಿಗಳನ್ನು ರಚಿಸಿ ಪ್ರದರ್ಶನ ಮಾಡಿ ರಂಗದಲ್ಲಿ ತಮ್ಮದೇ ಹೊಸ ಛಾಪನ್ನು ಮೂಡಿಸಿರುವರು. ಇವರ ಪ್ರಸಂಗಗಳ ಪ್ರದರ್ಶನವನ್ನು ಮೇಳ,ಹವ್ಯಾಸಿ ರಂಗ ಮತ್ತು ತಾಳಮದ್ದಳೆಯ ಪ್ರದರ್ಶನಗಳಲ್ಲಿ ಕಾಣಬಹುದಾಗಿದೆ.

‘ರಾಜಾದಂಡಕ’, ‘ವೀರತರಣಿಸೇನ’,
‘ಪಾಂಚಜನ್ಯೋತ್ಪತ್ತಿ’, ‘ಮಯ-ಮಾಯಾವಿ ದುಂದುಭಿ’, ‘ಕದ್ರಿ ಕ್ಷೇತ್ರ ಮಹಾತ್ಮೆ’, ‘ಆದಿ‌ಚುಂಚನ ಗಿರಿ ಕ್ಷೇತ್ರ ಮಹಾತ್ಮೆ’, ‘ಮಾನಾದಿಗೆದ ಮಣೆ’, ‘ರಾಮ ಬಂಟೆ ಹನೂಮಂತೆ’, ‘ಏಸು ಕ್ರಿಸ್ತ ಮಹಾತ್ಮೆ’, ‘ಕಚ್ಚೂರ ಮಾಲ್ದಿ-ಕೋರ್ದಬ್ಬು ತನ್ನಿಮಾನಿಗ’, ‘ಬೋಲದೂರುಡ್ ಅಮರ್ ಬೀರೆರ್’ ಮೊದಲಾದ ೧೫ಕ್ಕೂ ಮಿಕ್ಕಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವರು. ಉದಯವಾಣಿ, ಹೊಸದಿಗಂತ ಹಾಗೂ ಇತರೆ ಸ್ಮರಣ ಗ್ರಂಥಗಳಲ್ಲಿ ಇವರು‌ ಬರೆದಂತಹ ಹಲವು ಲೇಖನಗಳು ಪ್ರಕಟವಾಗಿವೆ.

ಸಮಾಜದಲ್ಲಿ ಸಾಮಾಜಿಕ ಜನ ಜಾಗೃತಿ ಮೂಡಿಸುವಲ್ಲಿ ಇವರು ತಮ್ಮ ಮೀಮಾಂಸಾತ್ಮಕ ಆಲೋಚನೆಗಳಿಂದ ಭಾಸ್ಕರ್ ರೈ ಕುಕ್ಕುವಳ್ಳಿ, ಶ್ರೀ ನವನೀತ ಶೆಟ್ಟಿ ಕದ್ರಿ ಮೊದಲಾದವರ ಸಂಯೋಜನೆ-ಸಹಕಾರದಲ್ಲಿ ‘ತೈಲ ಸಂರಕ್ಷಣೆ’, ‘ಧೂಮ ಮಾಲಿನ್ಯ’, ‘ಚಿಕುನ್ ಗುನ್ಯಾ’, ‘ವನಸಂರಕ್ಷಣೆ’, ‘ನಾರಾಯಣಾಸ್ತ್ರ-ಕೊರೋಣಾಸ್ತ್ರ’ ಇತ್ಯಾದಿ ಪ್ರಸಂಗಗಳನ್ನು ರಚಿಸಿರುವರು.

ಅದೇ ರೀತಿ ಗುರ್ಜಿ ದೀಪೋತ್ಸವ ಸಮಿತಿ ಬಳ್ಳಾಲ್ ಭಾಗ್ ಈ ಸಂಸ್ಥೆಯ ಸ್ಮರಣ ಸಂಚಿಕೆ “ವಜ್ರ ದೀಪ” ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ದ.ಕ, ಉಡುಪಿ ಜಿಲ್ಲೆ ಈ ಸಂಸ್ಥೆಯಿಂದ ಹೊರಹೊಮ್ಮಿದ “ದೃಷ್ಟಿ” ಇವಲ್ಲದೆ ಪುರಾಣ ಲೋಕದ ಸಾರ್ವಭೌಮ ಪುತ್ತೂರು ನಾರಾಯಣ ಹೆಗ್ಡೆ “ಆಟದ ಲೋಲಮಕ್ಕ” ಬದುಕಿನ ಹೆಗ್ಗುರುತುಗಳು ಹಾಗೂ “ಛಂದೋಬ್ರಹ್ಮ, ಡಾ.ಎನ್. ನಾರಾಯಣ ಶೆಟ್ಟಿ” ಎಂಬೀ ಕೃತಿಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿರುವರು.

ತನ್ನ ಅಪ್ರತಿಮ ಕಲೆ, ಜ್ಞಾನ, ವಿದ್ಯೆಯಿಂದ ಬಹುಮುಖವಾಗಿ ತನ್ನ ಪ್ರತಿಭೆಯನ್ನು ತಾನೇ ಪೋಣಿಸಿ ಹಂತ ಹಂತವಾಗಿ ಯಕ್ಷಗಾನ ಪ್ರಸಂಗ-ಪಚ್ಚನಾಡಿ ಪ್ರಸಂಗ ಸಂಪುಟ-೧ ಕೃತಿ ಬಿಡುಗಡೆಗೊಳಿಸಿರುವರು. ಶ್ರೀ ಶರತ್ ಕುಮಾರ್ ಕದ್ರಿ ಇವರ ಸಂಚಾಲಕತ್ವದ ಹವ್ಯಾಸಿ ಬಳಗ ಕದ್ರಿ(ರಿ‌.) ಮಂಗಳೂರು ಈ ಸಂಸ್ಥೆಯ ಮುಖ್ಯ ಕಲಾವಿದನಾಗಿದ್ದು ಬಳಗದ ದಶಮಾನೋತ್ಸವ ಸ್ಮರಣ ಗ್ರಂಥ ‘ಯಕ್ಷ ಕದಳಿ’ಯ ರೂಪರೇಷೆ ಮಾಡಿರುವರು. ಯಕ್ಷಗಾನ ಅಕಾಡೆಮಿಯ ನೇತೃತ್ವದಲ್ಲಿ ತೆಂಕುತಿಟ್ಟು ಯಕ್ಷಗಾನ ಕಲಾವಿದರ ವ್ಯಕ್ತಿಪರಿಚಯ ಗ್ರಂಥಕ್ಕೆ ಮಾಹಿತಿ ಸಂಗ್ರಹ ಹಾಗೂ ಬರಹ ನಿರೂಪಣೆ ಮಾಡಿರುವರು.

ಯಕ್ಷಗಾನ ತರಬೇತಿಯ ಗುರುವಾಗಿ ಇವರು ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಎಸ್.ಡಿ.ಎಂ.ಲಾ ಕಾಲೇಜು, ಎಸ್. ಡಿ.‌ ಎಂ. ಬಿ. ಬಿ.‌ ಎಂ. ಕಾಲೇಜು, ಕೆನರಾ ಕಾಲೇಜು, ಬೆಸೆಂಟ್ ಕಾಲೇಜು, ಅಮೃತ ವಿದ್ಯಾಲಯ, ಪೊಂಪೈ ಪ್ರೌಢಶಾಲೆ ಉರ್ವ, ರಾಮಾಶ್ರಮ ಸಂಯುಕ್ತ ಪದವಿ ಪೂರ್ವ ಕಾಲೇಜು, ಮೊದಲಾದ ಶೈಕ್ಷಣಿಕ ಸಂಸ್ಥೆಗಳು, ಕರಾವಳಿ ಲೇಖಕಿಯರ ವಾಚಕಿಯರ ಸಂಘ(ರಿ.), ವಕೀಲರ ಸಂಘ ಮಂಗಳೂರು ಇಲ್ಲಿನ ತಂಡಗಳಿಗೆ ಯಕ್ಷಗಾನ ನಿರ್ದೇಶನ ಮಾಡಿರುವರು. ಸ್ಪರ್ಧಾ ಪ್ರಶಸ್ತಿ ಪಡೆದಿರುವ ಉಲ್ಲೇಖವೂ ಇದೆ. ಬ್ರಹ್ಮ ಶ್ರೀ ನಾರಾಯಣ ಗುರು‌ ಯಕ್ಷಗಾನ ಮಂಡಳಿ ಕುಳಾಯಿ, ಶ್ರೀ ಕಚ್ಚೂರ ಮಾಲ್ದಿ ಯಕ್ಷಗಾನ ಮಂಡಳಿ ಕಾವೂರು, ಶ್ರೀ ಧರ್ಮಶಾಸ್ತ ಯಕ್ಷವೃಂದ ಕುಲಶೇಖರ, ಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿ ಗುರುನಗರ ಮೇರಿಹಿಲ್ ಇವುಗಳ ಸ್ಥಾಪಕ ಹಾಗೂ ನಿರ್ದೇಶಕರಾಗಿರುವರು. ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಹಾಗೂ ಮಂಗಳೂರು, ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ಯಕ್ಷಗಾನ ತರಬೇತಿಯ ಗುರುಗಳಾಗಿರುವರು.

೨೦೧೦ರಲ್ಲಿ ಲಿಂಗಪ್ಪ ಸೀತಾದೇವು ಅವರ ಅಧ್ಯಕ್ಷತೆಯಲ್ಲಿ ವಿದ್ಯಾಧರ ಶೆಟ್ಟಿ ಪೊಸಕುರಲ್, ತಡಂಬೈಲು ವಾಸುದೇವ ರಾವ್, ಚಂದ್ರಶೇಖರ ಕೆ. ಶೆಟ್ಟಿ, ರಾಜ್ ಕುಮಾರ್ ಕುಲಶೇಖರ, ಮುರಳೀ ಕಡೇಕಾರು, ಸುಂದರ ಶೆಟ್ಟಿ ಬೆಟ್ಟಂಪಾಡಿ, ಬಜ್ಪೆ ರಾಘವದಾಸ್, ಕೇಶವ ಶಕ್ತಿನಗರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀಧರ ಶೆಟ್ಟಿ ಪುಳಿಂಚ, ಕುಳಾಯಿ ಕೃಷ್ಣ ಹೆಬ್ಬಾರ್ ಹಾಗೂ ಸಹೋದರರು, ದಯಾನಂದ ಕತ್ತಲ್ ಸಾರ್, ರಾಮ್ ಪ್ರಸಾದ್ ಎಸ್,ಎಂ. ಸಿ. ಕುಮಾರ್, ಎಂ. ಎಂ. ಸಿ. ರೈ, ಧನಪಾಲ್ ಎಚ್ ಶೆಟ್ಟಿಗಾರ್, ಎಲ್ಲೂರು ರಾಮಚಂದ್ರ ಭಟ್, ರೋಹಿತ್ ಕೃಷ್ಣಾಪುರ, ಶರತ್ ಶೆಟ್ಟಿ ಪಡು, ಜಯಶ್ರೀ ಗುರುನಗರ ಇವರೆಲ್ಲರ ಪ್ರೋತ್ಸಾಹದಲ್ಲಿ “ಜ್ಞಾನಾಮೃತ ಮಂಗಳೂರು”ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖೇನ ಸ್ವರಚಿತ ಯಕ್ಷಗಾನ ಪ್ರಸಂಗ-೫ ಚೊಚ್ಚಲ ಕೃತಿಯನ್ನು ಬಿಡುಗಡೆ ಮಾಡಿದ್ದಾರೆ, ಪಚ್ಚನಾಡಿ ಲೇಖನ ಸಂಪುಟ-೧ ಬಿಡುಗಡೆಯಾಗಿದೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ‘ ಬ್ರಹ್ಮ‌ಶ್ರೀ ತತ್ವ ಪ್ರವಚನ’, “ಯಕ್ಷಗಾನ ಛಂದೋಂಬುಧಿಯ ರಂಗ ಪ್ರಯೋಗ”, ‘ಪುಣ್ಯಧಾಮ’-ಮನೆಯ ಆಚಾರ ವಿಚಾರ ಚಿಂತನ, ಕಾವ್ಯ ಪ್ರವಚನ. ‘ಕಾಲ ಧರ್ಮ’-ಸಂಸ್ಕಾರ ಚಿಂತನೆಯ ಯಕ್ಷಗಾನ ಪಾತ್ರ ಸಂವಾದದ ತಾಳಮದ್ದಳೆ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಕಾವ್ಯಗಳಿಂದ ‘ಕಾವ್ಯ ಕಲರವ’ ಇತ್ಯಾದಿ ಸಂಸ್ಕಾರ ಸಂವರ್ಧನೆಯ ವಿಶಿಷ್ಟ ಕಾರ್ಯಕ್ರಮ ನಡೆಸಿರುವರು. ಪ್ರಸ್ತುತ ಡಾ. ಎನ್. ನಾರಾಯಣ ಶೆಟ್ಟಿ ಸ್ಮರಣಾರ್ಥ ‘ಛಂದಸ್ಸು ಅಧ್ಯಯನ’ ಉಚಿತ ಅಂತರ್ಜಾಲ ತರಬೇತಿ ನಡೆಸುತ್ತಿದ್ದಾರೆ.

ಯಕ್ಷಗಾನ ರಂಗದಲ್ಲಿ ಬಲಿಷ್ಠವಾದ ಬೇರು‌ ಇಂದು ನಿರಂತರ ಫಲ ನೀಡೋ ಬೆಳೆದ ಮರದಂತೆ ಇವರು ಕಲಾ ಸೇವೆಗೆ ಚುಕ್ಕಿ ಇಡದೆ ಮುಂದುವರಿಯುತ್ತಲೇ ‘ಸಂಜೀವಿನಿ ಮಂತ್ರ’, ‘ಜೀವನ ಜೋಪಾನ’, ‘ಅಗೋಳಿ ಮಂಜಣ್ಣೆ’, ‘ಬಬ್ಬರ್ಯೆ’ ಇತ್ಯಾದಿ ಕಿರು ನಾಟಕಗಳನ್ನೂ ರಚಿಸಿರುವರು. ‘ಭ್ರಾಮರಿ ಛಂದೋರವಿಂದ ಮಾಲಾರ್ಚನ ಸ್ತೋತ್ರಂ’, ‘ಕಂದ ಪಂಚಕ’, ‘ನವರಸ ರಂಗ’ ಮೊದಲಾದ ಖಂಡ ಕಾವ್ಯಗಳನ್ನು ರಚಿಸಿರುವರು. ಗಾಂಪಣ್ಣನ ತಿರುಗಾಟ(ರೇಡಿಯೋ ಪ್ರಹಸನ) ಇವುಗಳನ್ನೂ ರಚಿಸಿರುವರು. ಪರ ಊರಿನಲ್ಲೂ ತಮ್ಮ ಯಕ್ಷಗಾನದ ಕಂಪನ್ನು ಸೂಸುತ್ತಾ ಇವರು ಆಕಾಶವಾಣಿ, ದೂರದರ್ಶನಗಳು ಸೇರಿದಂತೆ ದೆಹಲಿ, ಮುಂಬಯಿ, ಪಣಜಿ, ಬೆಂಗಳೂರು, ಗುರುವಾಯೂರು, ಮೊದಲಾದ ಮಹಾನಗರಗಳಲ್ಲಿ ಪುಂಡುವೇಷದ ಪಾತ್ರಧಾರಿಯಾಗಿ ಅಭಿಮಾನಿಗಳ ಮನ್ನಣೆಗೆ ಭಾಗಿಯಾಗಿರುವರು. ೨೦೧೫ ರಲ್ಲಿ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಯೂರೋಪ್ ಖಂಡದ ಸ್ವೀಡನ್ ದೇಶಕ್ಕೆ ಪ್ರವಾಸ ಗೈದು ರಾಜಧಾನಿಯಾದ ಸ್ಟಾಕ್ ಹೋಮ್ ನಲ್ಲಿ ೨ ಯಕ್ಷಗಾನ ಕಾರ್ಯಕ್ರಮಕ್ಕೆ ಭಾಗಿಯಾಗಿರುವರು.

ಇವರ ಅಸಾಮಾನ್ಯ ಸಾಧನೆಗೆ ಸಂದ ಸಮ್ಮಾನ ಪುರಸ್ಕಾರಗಳು ಹಲವು. ಬ್ರಹ್ಮ ಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿ ಕುಳಾಯಿ ಇದರ ವತಿಯಿಂದ ಗುರು ವಂದನೆ, ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ವಿದ್ಯಾರ್ಥಿ ಯಕ್ಷಗಾನ ಸಂಭ್ರಮ-೨೦೧೦ ವತಿಯಿಂದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಯಕ್ಷಗಾನ ತಂಡದ ನಿರ್ದೇಶಕ ಪುರಸ್ಕಾರ, ಬ್ರಹ್ಮ ಶ್ರೀ ‌ನಾರಾಯಣ ಗುರು ಸಮಾಜ ಸೇವಾ‌ ಸಂಘ (ರಿ.) ಕುಳಾಯಿ ಡಾಕ್ಟರೇಟ್ ಪದವಿ ಗೌರವದ ನಿಮಿತ್ತ ಸನ್ಮಾನ, ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಕುಳಾಯಿ ಡಾಕ್ಟರೇಟ್‌‌ ಪದವಿ ಗೌರವದ ನಿಮಿತ್ತ ಸನ್ಮಾನ, ಶ್ರೀ ವಿಘ್ನೇಶ್ವರ ಯಕ್ಷಗಾನ ಮಂಡಳಿ ದೇವಿನಗರ ಪದವಿನಂಗಡಿ ಮಂಗಳೂರು ಡಾಕ್ಟರೇಟ್ ಪದವಿ ಗೌರವದ ನಿಮಿತ್ತ ಸನ್ಮಾನ, ಶ್ರೀ ಕಾಳಿಕಾಂಬಾ ವಿನಾಯಕ ತರಬೇತಿ ಕೇಂದ್ರದ ಪುರಸ್ಕಾರ, ಹವ್ಯಾಸಿ ಬಳಗ ಕದ್ರಿ(ರಿ.) ಮಂಗಳೂರು ೧೫ ನೇ ವಾರ್ಷಿಕೋತ್ಸವ ಯಕ್ಷಪಕ್ಷ ಸಮಾರೋಪ ಸಮಾರಂಭದಲ್ಲಿ ಡಾಕ್ಟರೇಟ್ ಪದವಿಯ ಗೌರವದ ನಿಮಿತ್ತ ಸನ್ಮಾನ. ೨೦೧೦ರಲ್ಲಿ ಯಕ್ಷಗಾನ ಪ್ರಸಂಗ -೫ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿ ಬಿಡುಗಡೆಯ ರೂ.೧೦,೦೦೦ ಗೌರವಧನ ಪುರಸ್ಕಾರ ಲಭಿಸಿದೆ. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಪಾವಂಜೆ ವತಿಯಿಂದ “ಪ್ರತಿಭಾ ಧ್ರುವ” ಬಿರುದಾಂಕಿತ ಪ್ರಶಸ್ತಿ, ಶ್ರೀ ಸುಬ್ರಹ್ಮಣ್ಯ ಯಕ್ಷ ಕಲಾಭಾರತಿ ಸೂಡ ಯಕ್ಷಗಾನ ಕವಿ ಸಮ್ಮೇಳನದಲ್ಲಿ ಸ್ಕಂದ ಪುರಸ್ಕಾರ, ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನ ಏಳಿಂಜೆ-ನವಚೇತನ ಯುವಕಮಂಡಲ ‘ರಜತ ವೈಭವ’ ಸಮಾರಂಭದಲ್ಲಿ ಸನ್ಮಾನ, ವಿಶ್ವ ಬ್ರಾಹ್ಮಣ ಸಮಾಜ ಸಂಘ (ರಿ.)ಕಿನ್ನಿಗೋಳಿ ಮಂಗಳೂರು ಇದರ ವತಿಯಿಂದ ಸಮ್ಮಾನ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಶಿವಾಜಿನಗರ ಪಚ್ಚನಾಡಿ-ಪ್ರತಿಷ್ಟಾ ವರ್ಧಂತಿ ಉತ್ಸವ ಸಮಾರಂಭದಲ್ಲಿ ಸಮ್ಮಾನ, ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಗಾಂಧಿನಗರ ಮಂಗಳೂರು ಬ್ರಹ್ಮ ಶ್ರೀ ನಾರಾಯಣ ಗುರು‌ಜಯಂತಿ ಸಮಾರಂಭದಲ್ಲಿ ಗೌರವ ಪುರಸ್ಕಾರ, ಸರಾಯೂ ದಶಮಾನ ಸಂಭ್ರಮ ಸನ್ಮಾನ, ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಕುಳಾಯಿ ವತಿಯಿಂದ ರೂ.೧೨,೦೦೦ ಗೌರವ ಕಾಣಿಕೆಯೊಂದಿಗೆ ಗುರು ವಂದನೆ. ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್(ರಿ.)ದೇವಿನಗರ ಪಚ್ಚನಾಡಿ ಸನ್ಮಾನ, ಯೆಯ್ಯಾಡಿ, ಶಕ್ತಿನಗರ, ಪದವಿನಂಗಡಿ, ನಾಗರಿಕ ಸನ್ಮಾನ, ಪೊಂಪೈ ಪ್ರೌಢಶಾಲೆ ಉರ್ವ ಮಂಗಳೂರು ವತಿಯಿಂದ ‘ಭಗವಾನ್ ಏಸು ಕ್ರಿಸ್ತ’ ತುಳು ಪ್ರಸಂಗ ರಚನೆ ಹಾಗು ಪ್ರದರ್ಶನದ ನಿಮಿತ್ತ ಸನ್ಮಾನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ “ವಿದ್ಯಾರ್ಥಿಗಳ ಯಕ್ಷೋತ್ಸವ ರಜತ ಸಂಭ್ರಮ” ನಿರ್ದೇಶಕ ಪುರಸ್ಕಾರ, ಶ್ರೀ ಗುರು ವೈದ್ಯನಾಥ ಬಬ್ಬುಸ್ವಾಮಿ ದೇವಸ್ಥಾನ ಕಾವೂರು ಪದವು ಮಂಗಳೂರು ಇಲ್ಲಿ ‘ಶ್ರೀ ಕಚ್ಚೂರ ಮಾಲ್ದಿ ಕೋರ್ದಬ್ಬು ತನ್ನಿಮಾನಿಗ’ ಈ ಪ್ರಸಂಗ ರಚನೆ ಹಾಗೂ ನಿರ್ದೇಶನದ ನಿಮಿತ್ತ ಸ್ವರ್ಣ ಮುದ್ರಿಕೆಯೊಂದಿಗೆ ಸನ್ಮಾನ,
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದವಿನಂಗಡಿ, ದೇವಿನಗರ ಮಂಗಳೂರು ವತಿಯಿಂದ ಸನ್ಮಾನ, ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ (ರಿ.)ಜ್ಯೋತಿನಗರ ಕುಲಶೇಖರ ಸ್ವರ್ಣ ಮುದ್ರಿಕೆಯೊಂದಿಗೆ ೩೫,೦೦೦ ರೂ ಗೌರವ ನಿಧಿಯೊಂದಿಗೆ ಗುರು ವಂದನೆ, ಶ್ರೀ ಗಣೇಶೋತ್ಸವ ಸಮಿತಿ ಕೋಡಿಕಲ್ ಸನ್ಮಾನ, ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ಮೊಡಂಕಾಪು ಬಂಟ್ವಾಳ “ಕ್ಷೇತ್ರ ಮಹಾತ್ಮೆ” ಪ್ರಸಂಗ ರಚನೆಯ ನಿಮಿತ್ತ ಗೌರವ ನಿಧಿಯೊಂದಿಗೆ ಸನ್ಮಾನ, ಆಶ್ರಯ ಮಿತ್ರವೃಂದ (ರಿ.)ಪಚ್ಚನಾಡಿ ಸನ್ಮಾನ, ಪಂಚವಾರ್ಷಿಕ ಯಕ್ಷಕಲೋತ್ಸವ ಸುರತ್ಕಲ್ ಮಾರಿಗುಡಿ‌ ಸನ್ಮಾನ, ಕೂಳೂರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಮಂದಿರ ಹಾಗು ಯುವವಾಹಿನಿ(ರಿ.)ಕೂಳೂರು ಘಟಕ ಸನ್ಮಾನ, ಯುವವಾಹಿನಿ(ರಿ.)ಕೊಲ್ಯ ಘಟಕ ಪುರಸ್ಕಾರ, ಹವ್ಯಾಸಿ ಬಳಗ ಕದ್ರಿ(ರಿ.)ಮಂಗಳೂರು ಸಂಸ್ಥೆಯ ರಜತ ದಂಪತಿ ಸನ್ಮಾನ ಸಂದಿರುತ್ತವೆ. ಹೀಗೇ ಹಲವಾರು ಪ್ರಶಸ್ತಿ ಪುರಸ್ಕಾರಗಳ ಸರದಾರ ಈ ಯಕ್ಷಲೋಕದ ಪಯಣಕ್ಕೆ ಸನ್ಮಾನ, ಗೌರವ ದಕ್ಕಲೇ ಬೇಕಾದದ್ದು ಅಂತಹ ವಿಶಿಷ್ಟ ಪ್ರತಿಭೆ.


ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ೧೫ ವರ್ಷ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ೬ ವರ್ಷ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.)ಯ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.೬ ವರ್ಷ ಹರೇಕಳ, ಪಾವೂರು, ಬಂಟ್ವಾಳ, ಪೊರ್ಕೋಡಿ, ಕಾವೂರು, ಪರಪಾದೆ ಇಲ್ಲಿ ೭ ದಿನಗಳ ವಾರ್ಷಿಕ ಶಿಬಿರವನ್ನು ಪ್ರತಿ ವರ್ಷ ನಡೆಸಿ ವಿದ್ಯಾರ್ಥಿಗಳ ಜೊತೆಗೆ ಉತ್ತಮ ಶ್ರಮದಾನ ಗೈದು ಗೌರವಕ್ಕೆ ಪಾತ್ರರಾಗಿದ್ದಾರೆ. ೨೦೧೮-೧೯ನೇ ಸಾಲಿನಲ್ಲಿ ಎನ್.‌ ಎಸ್. ಎಸ್ ಸುವರ್ಣ ಸಂಭ್ರಮದ ನಿಮಿತ್ತ ಪಾವೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಪ್ರೌಢಶಾಲೆಗೆ ತಮ್ಮ ಕಾಲೇಜಿನ ಪ್ರಾಯೋಜಕತ್ವದಲ್ಲಿ “ಆವರಣ ರಕ್ಷೆ” ಯೋಜನೆಯ ಕೊಡುಗೆಯನ್ನು ನೀಡಿರುವರು. ೩ ವರ್ಷ ಕಾಲೇಜಿನ ಲಲಿತ ಕಲಾ ಸಂಘದ ನಿರ್ದೇಶಕರಾಗಿ ವಿದ್ಯಾರ್ಥಿ ತಂಡ ಭಾಗವಹಿಸುವಿಕೆಯೊಂದಿಗೆ ಹಲವು ಸ್ಪರ್ಧಾ ಪ್ರಶಸ್ತಿ ಪಡೆಯುವುದಕ್ಕೆ ಕಾರಣರಾಗಿರುವರು.ಕಾಲೇಜಿನ ಕನ್ನಡ ಸಂಘದ ನಿರ್ದೇಶಕರಾಗಿಯೂ ಉತ್ತಮ ಕಾರ್ಯಕ್ರಮಗಳನ್ನು ನಡೆಸಿರುವರು.ಕಾಲೇಜಿನ ಸಂಚಾಲಕರಾದ ಎಸ್. ಜಯವಿಕ್ರಮ್, ಪ್ರಾಂಶುಪಾಲರಾದ ಡಾ.ಗಂಗಾಧರ.ಬಿ., ಡಾ.ರೇಣುಕಾ.ಕೆ., ಶ್ರೀಮತಿ ಕ್ಷಮಾ ಎನ್.ರಾವ್ ಹಾಗೂ
ಬೋಧಕ, ಬೋಧಕೇತರ ವೃಂದದ ಪ್ರೋತ್ಸಾಹವನ್ನು ಸದಾ ಸ್ಮರಿಸುವ ಪಚ್ಚನಾಡಿಯವರು ಗುಣಗ್ರಾಹಿ, ಪರೋಪಕಾರಿ ಹೀಗೆಂಬ ವ್ಯಕ್ತಿತ್ವ ವಿಶೇಷಣದ ಆಡುನುಡಿಗಳಿಗೆ ಪಾತ್ರರಾಗಿರುವರು.

ತಾಯಿಯೊಂದಿಗೆ ಮಾವಂದಿರಾದ ಜಯಂತ ಅಮೀನ್, ರಾಮ ಅಮೀನ್, ಸಹೋದರ ಸಹೋದರಿಯರಾದ ಜಲಜಾಕ್ಷಿ, ಪ್ರೇಮನಾಥ್, ಮಹಾಲಕ್ಷ್ಮಿ, ತ್ರಿವೇಣಿ, ಪ್ರಸಾದ್, ಶೀಲಾಕ್ಷಿ, ಬಾಲಕೃಷ್ಣ, ಭುವನ, ಧರ್ಮಪತ್ನಿ ಬಬಿತಾ ಹಾಗು ಕುಟುಂಬ ವರ್ಗದ ಸಹಸ್ಪಂದನ ಪ್ರೋತ್ಸಾಹ ಸದಾ ಲಭಿಸಿದೆ‌. ಹಾಗೆಯೇ ಕೀರ್ತಿ ಶೇಷ, ಮೋನಪ್ಪ ಪೂಜಾರಿ, ಲೀಲಾವತಿ, ರಮೇಶ್‌ ಪೂಜಾರಿ, ನಳಿನಾಕ್ಷಿ ಇವರು ಕೂಡಾ ಸ್ಮರಣೀಯರು ಎನ್ನುತ್ತಾರೆ.

ಯಕ್ಷಗಾನ ಸಂಶೋಧಕ, ಪ್ರಾಧ್ಯಾಪಕ, ಲೇಖಕ, ವಿಮರ್ಶಕ, ಗ್ರಂಥ ಸಂಯೋಜಕ, ರಂಗ ನಿರ್ದೇಶಕ, ಕವಿ, ಚಿತ್ರಕಾರ, ಪ್ರವಚನಕಾರ, ಪ್ರಸಾಧನಕಾರ (೯ವರ್ಷ ಸ್ವಂತ ವೇಷಭೂಷಣದೊಂದಿಗೆ), ಯಕ್ಷಗುರು, ಪ್ರಸಂಗ ಕರ್ತ, ವೇಷಧಾರಿ, ತಾಳಮದ್ದಳೆ ಅರ್ಥಧಾರಿ, ಸಂಪನ್ಮೂಲ ವ್ಯಕ್ತಿ, ವಿವಿಧ ಕಲಾಪ್ರಕಾರಗಳ ವೇದಿಕೆಯಲ್ಲಿ ತೀರ್ಪುಗಾರ ಹೀಗೆ ಬರೆದಷ್ಟು ಮುಗಿಯದ ಕಥೆ. ಜೀವನದುದ್ದಕ್ಕೂ ಎದೆಗುಂದದೆ ಯಕ್ಷಗಾನ ಕಲೆಯಲ್ಲಿ ಸಾಧನಾ ಶ್ರೇಷ್ಠ ವ್ಯಕ್ತಿಯಾಗಿ, ಸರಳ ಜೀವನದಲ್ಲಿ ಶ್ರಮ ಜೀವಿಯಾಗಿ ಸಾರ್ಥಕ ಬದುಕನ್ನು ರೂಪಿಸಿ ಕಲಾ ರಂಗದಲ್ಲಿ ವಿಷ್ಣು,ರಾಮ, ಅರ್ಜುನ, ದೇವೇಂದ್ರ, ಹನೂಮಂತ, ಕೃಷ್ಣ, ಲಕ್ಷ್ಮಣ, ದ್ರೋಣ, ಗರುಡ, ಅವೀಕ್ಷಿತ, ಸುಧನ್ವ, ಸುದರ್ಶನ, ತರಣಿಸೇನ, ಬಭ್ರುವಾಹನ, ಭಾರ್ಗವ, ಅಭಿಮನ್ಯು ಇತ್ಯಾದಿ ಅಲೌಕಿಕ ಲೋಕದ ಪಾತ್ರಗಳಲ್ಲಿ ಮಿಂಚಿದವರು. ಕಲಾಗುರುವಾಗಿ, ಪ್ರಾಧ್ಯಾಪಕರಾಗಿ, ಛಂದಸ್ಸು ಸಾಹಿತ್ಯ- ಅರ್ಥ ಬೋಧಕರಾಗಿ ಅಸಂಖ್ಯಾತ ಶಿಷ್ಯರನ್ನು ಹೊಂದಿದ್ದಾರೆ. ಶಿಕ್ಷಕರು, ನ್ಯಾಯವಾದಿಗಳು, ಕಾರ್ಪೊರೇಟರ್ಗಳು, ಉದ್ಯಮಿಗಳು ಇವರ ಶಿಷ್ಯರಾಗಿರುವುದು ಹಿರಿಮೆಯ ಸಂಗತಿ.

ನಿಮ್ಮ ಕಲಾತರಂಗದ ಸೀಮೆಯೂ ಇನ್ನೂ ಹೆಚ್ಚು ವಿಸ್ತರಿಸುತ್ತಾ ಹೋಗಲಿ ಎಂಬುದೇ ನಮ್ಮ ಸದಾಶಯ.

*”ಯಕ್ಷಗಾನಂ ವಿಶ್ವಗಾನಂ”*

*”ಯಕ್ಷಗಾನಂ ಗೆಲ್ಗೆ”*
*”ಯಕ್ಷಗಾನಂ ಬಾಳ್ಗೆ”*

___________
*✍️ತೃಪ್ತಿ.ಜಿ.ಕುಂಪಲ.*


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »