ನವಚೇತನ ಸೇವಾ ಬಳಗ
ಬಡವರ ಸೇವೆಯೇ ದೇವರ ಸೇವೆ
ಭವತಿ ಭಿಕ್ಷಂ ದೇಹಿ
ದಿನಾಂಕ 13/02/2021 ರಂದು ಗುರುಪುರ ಬಂಡೀ ಉತ್ಸವದಲ್ಲಿ ನವಚೇತನ ಸೇವಾ ಬಳಗ ದ ಮುಂದಾಳತ್ವದಲ್ಲಿ ನಂದನ್ ಇವರ ಚಿಕಿತ್ಸ ವೆಚ್ಚದ ಮೊತ್ತಕ್ಕಾಗಿ ಭವತಿ ಭಿಕ್ಷಾಂದೇಹಿ ಎಂಬ ವಿಭಿನ್ನ ಪ್ರಯತ್ನ ಮಾಡುವಲ್ಲಿ ಸುಮಾರು 18275 ರೂಪಾಯಿಗಳನ್ನು ಬಂಡಿ ಉತ್ಸವದಲ್ಲಿ ನೆರೆದಿರುವ ದಾನಿಗಳ ನೆರವಿನಿಂದ ಹಾಗು ನವಚೇತನ ಸೇವಾ ಬಳಗ ದ ಎಲ್ಲಾ ಆತ್ಮೀಯ ಸ್ನೇಹಿತರ ಸಹಕಾರದಿಂದ ಯಶಸ್ವಿಗೊಂಡಿದೆ.
ನಂದನ್ ಇವರು ತನ್ನ ಮನೆಯ ನಿರ್ವಾಹಣೆಗಾಗಿ ಗಾರೆ ಕೆಲಸಕ್ಕೆ ತೆರಳುತಿದ್ದು ಹಾಗು ತನ್ನ ತಂದೆ ಹುಟ್ಟು ಅಂಗವೈಕಲ್ಯರಾಗಿದ್ದು ತನ್ನ ಮನೆಯ ಆಧಾರ ಸ್ತಂಭವಾಗಿದ್ದರು. ಕಳೆದ ವಾರ ಮುದ್ರಾಡಿ ಪೇಟೆ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತಕ್ಕೆ ಒಳಗಾಗಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ಇದ್ದು ಈ ಎಲ್ಲಾ ಪರಿಸ್ಥಿತಿಯ ಮನಗಂಡು ನಮ್ಮ ನವ ಚೇತನ ಸೇವಾ ಬಳಗ ವು ನೆರವಿನ ಹಸ್ತ ಭವತಿ ಭಿಕ್ಷಾಂದೇಹಿ ಎಂಬ ಉತ್ತಮ ಸಮಾಜಮುಖಿ ಕಾರ್ಯಕ್ಕೆ ಮುಂದಡಿ ಇಟ್ಟು ಯಶಸ್ವಿಗೊಳಿಸುವಲ್ಲಿ ಸಹಕರಿಸಿದ ದಾನಿಗಳಿಗೆ ಮತ್ತು ನವಚೇತನ ಸೇವಾ ಬಳಗದ ಎಲ್ಲಾ ಆತ್ಮೀಯರಿಗೆ ಪ್ರೀತಿಯ ವಂದನೆಗಳು ಹಾಗು ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ…
ನವ ಚೇತನ ಸೇವಾ ಬಳಗ…