ಮಾನಸಿಕ ಒತ್ತಡ ಹೆಚ್ಚಾದರೆ, ತಲೆ ಕೂದಲು ಹೆಚ್ಚು ಉದುರುತ್ತದೆ. ಇದಕ್ಕೆ ಒತ್ತಡ ನಿವಾರಣಾ ತಂತ್ರಗಳು ಪರಿಹಾರ ಅಷ್ಟೇ.
ಮಾನಸಿಕ ಒತ್ತಡದಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಪರೋಕ್ಷವಾಗಿ ಪ್ರಾರಂಭವಾಗುತ್ತವೆ. ಇದರಿಂದ ಇದ್ದಕ್ಕಿದ್ದಂತೆ ಮನುಷ್ಯನಿಗೆ ಬಿಪಿ, ಸಕ್ಕರೆ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ.
ಕೆಲವರಿಗೆ 30 ವರ್ಷಕ್ಕೆ ಬರುವ ಸಮಯದಲ್ಲಿ ತಲೆಕೂದಲು ಅರ್ಧಕ್ಕೆ ಅರ್ಧ ಉದುರಿ ಹೋಗಿರುತ್ತದೆ. ಇದಕ್ಕೆ ಈಗಿನ ಜೀವನ ಶೈಲಿ ಮತ್ತು ದುಡಿಮೆಯ ಒತ್ತಡ ಜೊತೆಗೆ ಸಂಸಾರದ ತಾಪತ್ರಯಗಳು ಕಾರಣ ಎಂದು ಹೇಳಬಹುದು.
ನಗರ ಪ್ರದೇಶದಲ್ಲಿ ವಾಸ ಮಾಡುವ ಜನರು ಮಾನಸಿಕ ಒತ್ತಡ ನಿವಾರಣೆಗೆ ಕೆಲವೊಂದು ತರಗತಿಗಳನ್ನು ಅಟೆಂಡ್ ಮಾಡುತ್ತಾರೆ. ಇದರ ಜೊತೆಗೆ ಈ ಲೇಖನದಲ್ಲಿ ತಿಳಿಸಿರುವ ಹಾಗೆ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸಿದರೆ ಮಾನಸಿಕ ಒತ್ತಡ ಸಮಸ್ಯೆ ನಿಮ್ಮಿಂದ ಶಾಶ್ವತವಾಗಿ ದೂರ ಆಗುತ್ತದೆ ಮತ್ತು ಸಮೃದ್ಧವಾದ ತಲೆ ಕೂದಲಿನ ಬೆಳವಣಿಗೆ ನಿಮ್ಮದಾಗುತ್ತದೆ.
ಮಧುಮೇಹ ಸಮಸ್ಯೆಯಿಂದ ಗಂಡಸರಿಗೆ ನೆತ್ತಿಯ ಕೂದಲು ಉದುರಬಹುದು
1. ಪುರುಷರು ವಯಸ್ಕರಾಗಿ ಜೀವನ ನಡೆಸಿದ ಕೆಲವು ದಿನಗಳಲ್ಲಿ ಹಣೆಯ ಮೇಲ್ಭಾಗದಲ್ಲಿ ಹಾಗೂ ನೆತ್ತಿಯ ಮಧ್ಯಭಾಗದಲ್ಲಿ ನಿಧಾನವಾಗಿ ತಲೆಕೂದಲು ಮಾಯವಾಗಲು ಪ್ರಾರಂಭವಾಗುತ್ತದೆ.
2. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಂಡ್ರೂಜನಿಕ್ ಅಲೋಪೆಸಿಯಾ ಎಂದು ಕರೆಯುತ್ತಾರೆ. ಪುರುಷರಲ್ಲಿ ಬಹಳ ಸಾಮಾನ್ಯವಾಗಿ ಈ ಸಮಸ್ಯೆ ಇರುತ್ತದೆ. ಬಹುತೇಕ ಶೇಕಡ 50% ಪುರುಷರಲ್ಲಿ 50 ವರ್ಷ ದಾಟಿದ ನಂತರದಲ್ಲಿ ಮೇಲೆ ಹೇಳಿದ ಹಾಗೆ ತಲೆ ಕೂದಲು ಮಾಯವಾಗುತ್ತಾ ಬರುತ್ತದೆ.
3. ಕೆಲವರಿಗೆ ಒಂದೇ ಕಡೆ ಕೂದಲು ಹೆಚ್ಚು ಉದುರಿದರೆ ಇನ್ನು ಕೆಲವರಿಗೆ M ಆಕಾರದಲ್ಲಿ ತಲೆ ಕೂದಲು ಉದುರುತ್ತದೆ. ಇದಕ್ಕೂ ಮೀರಿದಂತೆ ಮಧ್ಯವಯಸ್ಸಿನಲ್ಲಿ ಮತ್ತು ವಯಸ್ಸಾದ ನಂತರ ತಲೆ ಕೂದಲು ಹೆಚ್ಚು ಉದುರುವುದು ಸಾಮಾನ್ಯ.
ಅನುವಂಶಿಯತೆ ಕೂಡ ಕಾರಣ ಇರಬಹುದು!
ಆದರೆ ಯಾವುದೇ ವಯಸ್ಸಿನಲ್ಲಿ ಕೂಡ ತಲೆಕೂದಲು ಉದುರುವಿಕೆ ಇರುತ್ತದೆ. ಅನುವಂಶಿಯತೆ ಕೂಡ ಇದಕ್ಕೆ ಒಂದು ಕಾರಣ ಆಗಿರಬಹುದು.
ಕುಟುಂಬದಲ್ಲಿ ಈ ಹಿಂದೆ ಯಾರಿಗಾದರೂ ತಲೆ ಕೂದಲು ಹೆಚ್ಚು ಉದುರಿ ಹೋಗಿದ್ದರೆ ಅದು, ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ಸಹ ಕಾಣಬಹುದು.
ನಿಮ್ಮ ತಾಯಿಯ ಕಡೆಯ ಸಂಬಂಧದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ನಿಮಗೆ ಇಂತಹ ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಏಕೆಂದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಪಾರ ಪ್ರಮಾಣದಲ್ಲಿ ಇರುವುದು ಇದಕ್ಕೆ ಕಾರಣ.
ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಎದುರಾಗುವ ಮಾನಸಿಕ ಖಿನ್ನತೆ ಮತ್ತು ಆತಂಕ ಕೂಡ ಒಂದು ಕಾರಣ ಎಂದು ಹೇಳಬಹುದು. ಏಕೆಂದರೆ ಮಾನಸಿಕವಾಗಿ ಹೆಚ್ಚು ದುಗುಡ ಮನೆ ಮಾಡಿದರೆ, ದೇಹದಲ್ಲಿ ಲೈಂಗಿಕ ಹಾರ್ಮೋನುಗಳ ಮಟ್ಟ ಮತ್ತು ಉತ್ಪತ್ತಿ ಹೆಚ್ಚಾಗುತ್ತದೆ.
ಹಾಗಾಗಿ ಮೊದಲು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಮಾನಸಿಕ ಒತ್ತಡ ಹೆಚ್ಚಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಕೂಡ ಏರುಪೇರಾಗುತ್ತದೆ. ಇದರಿಂದಲೂ ಸಹ ತಲೆಕೂದಲು ಉದುರಿ ಹೋಗುವ ಸಾಧ್ಯತೆ ಇರುತ್ತದೆ.
ಈ ಲೇಖನದಲ್ಲಿ ನಿಮ್ಮ ತಲೆ ಕೂದಲು ಉದುರುವಿಕೆಯನ್ನು ಹೆಚ್ಚು ಮಾಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕೆಲವು ವಿಧಾನಗಳನ್ನು ತಿಳಿಸಿ ಕೊಡಲಾಗಿದೆ.
ವೈದ್ಯಕೀಯ ಲೋಕ ಸಹ ಇದನ್ನು ಒಪ್ಪಿಕೊಂಡಿದೆ. ಈ ವ್ಯಾಯಾಮವನ್ನು ಮಾಡುವುದು ಅತ್ಯಂತ ಸುಲಭ. ನೀವು ಸಹ ಅತಿಯಾದ ಮಾನಸಿಕ ಒತ್ತಡ ಎದುರಾದ ಸಂದರ್ಭದಲ್ಲಿ ಹೀಗೊಮ್ಮೆ ಟ್ರೈ ಮಾಡಿ.
ಮೊದಲು ನೆಲದ ಮೇಲೆ ಕಣ್ಣುಮುಚ್ಚಿಕೊಂಡು ನೇರವಾಗಿ ಕುಳಿತುಕೊಳ್ಳಿ
* ಈಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ದೀರ್ಘವಾಗಿ ಉಸಿರನ್ನು ಒಳಗೆ ತೆಗೆದು ಕೊಳ್ಳುವುದರಿಂದ ನಿಮ್ಮ ಹೊಟ್ಟೆಯ ಭಾಗದಿಂದ ನಿಮ್ಮ ತಲೆಯವರೆಗೆ ಉಸಿರಿನ ಚಲನೆಯನ್ನು ಅನುಭವಿಸಿ.
* ಉಸಿರನ್ನು ಹೊರಬಿಡುವ ಮೂಲಕ ಮತ್ತೊಮ್ಮೆ ಇದೇ ಪದ್ಧತಿಯನ್ನು ಅನುಸರಿಸಿ. ಒಂದು ವೇಳೆ ನಿಮಗೆ ಮಾನಸಿಕ ಒತ್ತಡ ಕಂಡುಬಂದ ಸಮಯದಲ್ಲಿ ಪ್ರತಿ ಬಾರಿ ಐದು ನಿಮಿಷ ಈ ರೀತಿ ಮಾಡಿ. ಇದರಿಂದ ನಿಮಗೆ ಹೆಚ್ಚು ವಿಶ್ರಾಂತಿ ಮತ್ತು ಮನಸ್ಸಿಗೆ ಶಾಂತಿ ಜೊತೆಗೆ ನಿಮ್ಮ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ.
50 ವರ್ಷ ಮೇಲ್ಪಟ್ಟವರಿಗೆ ಧ್ಯಾನದ ಟಿಪ್ಸ್
ಧ್ಯಾನ ಮಾಡುವುದು ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳುವುದರ ಸಲುವಾಗಿ. ನೇರವಾಗಿ ಕುಳಿತುಕೊಂಡು ಕಣ್ಣುಮುಚ್ಚಿ ಯಾವುದಾದರೂ ಒಂದು ವಿಚಾರದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವುದು ಧ್ಯಾನದ ಒಂದು ವಿಧಾನ.
ನಿಮಗೆ ಬೇಕಾದರೆ ಓಂ ಎಂಬ ಮಂತ್ರವನ್ನು ಪಠಿಸಬಹುದು. ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಮತ್ತು ಹೊರಗೆ ಬಿಡುತ್ತಾ ಮಂತ್ರವನ್ನು ಪಠಿಸಿ ಧ್ಯಾನವನ್ನು ಮಾಡಬಹುದು.