TOP STORIES:

ಪುಷ್ಪರಾಜ್ ಅಮಿನ್ ಮತ್ತು ತಂಡದಿಂದ ಮೈಕ್ರೋ ಲೈಟ್ ಸೀ ಪ್ಲೇನ್ ತಯಾರು – ಬೇಕಿದೆ ಸರಕಾರದ ಸಹಾಯ ಹಸ್ತ


ಉಡುಪಿ: ಒಂದೆಡೆ ಸರಕಾರಗಳು ದೇಶೀಯ ಉತ್ಪನ್ನ, ಸಂಶೋಧನೆಗಳಿಗೆ ಒತ್ತು ನೀಡಿ ಸ್ವದೇಶದಲ್ಲಿ ತಯಾರಾಗುವ ಅವಿಶ್ಕಾರಗಳಿಗೆ ವೇದಿಕೆ ಒಗದಿಸಲು ಚಿಂತನೆ ನಡೆಸುತ್ತಿದೆ. ಆದರೆ ಮತ್ತೊಂದೆಡೆ ಉಡುಪಿಯ ಹೆಜಮಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ದೇಶದಲ್ಲೇ ಮೊದಲು ಎನ್ನುವ ರೀತಿಯಲ್ಲಿ ಸಂಶೋಧನೆ ಒಂದು ನಡೆದಿದ್ದು ಸರಕಾರದ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಉಡುಪಿಯ ಗಡಿಭಾಗ ಹೆಜಮಾಡಿ ಎಂಬ ಪುಟ್ಟ ಗ್ರಾಮದಲ್ಲಿ ಉತ್ಸಾಹಿ ಯುವ ಪಡೆ ತಮ್ಮದೇ ಸ್ವಂತ ಬಂಡವಾಳದೊಂದಿಗೆ ದೇಶದಲ್ಲೇ ಮೊದಲು ಎಂಬಂತೆ ಮೈಕ್ರೋ ಲೈಟ್ ಸೀ ಪ್ಲೇನ್ ಒಂದನ್ನು ತಯಾರು ಮಾಡಿದ್ದಾರೆ. ಈ ಸೀ ಪ್ಲೇನ್ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಪುಷ್ಪರಾಜ್ ಅಮಿನ್ ಎಂಬವರು ಈ ಯೋಜನೆಯ ರೂವಾರಿ. 8 ಮಂದಿ ಯುವಕ ಯುವತಿಯರ ಜೊತೆ ಗೂಡಿ ಈ ಸೀ ಪ್ಲೇನ್ ಅನ್ನು ತಯಾರಿಸಿದ್ದು ಇಲ್ಲಿನ ಶಾಂಭವಿ ನದಿಯಲ್ಲಿ ಯಶಸ್ವಿ ಪ್ರಾಯೋಗಿಕ ಹಾರಾಟ ಕೂಡಾ ನಡೆದಿದೆ, 1 ವರ್ಷದ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ಫಲವಾಗಿ ಸೀ ಪ್ಲೇನ್ ನಿರ್ಮಾಣವಾಗಿದ್ದು ಸುಮಾರು 7 ರಿಂದ 8 ಲಕ್ಷ.ರೂ. ವೆಚ್ಚ ತಗುಲಿದೆ.

“ಸಣ್ಣದಿಂದಲೇ ನನಗೆ ವಿಮಾನ ಹಾರಿಸಬೇಕು ಎಂಬ ಆಸೆ ಇದ್ದಿತ್ತು. ಕಳೆದ ಕೆಲ ವರ್ಷಗಳಲ್ಲಿ ಸಣ್ಣ ಸಣ್ಣ ವಿಮಾನದ ಮಾಡೆಲ್‌‌ಗಳನ್ನು ಮಾಡಿದ್ದೇನೆ. ಹಲವಾರು ಮಕ್ಕಳಿಗೆ ತರಬೇತಿಯನ್ನು ಕೂಡಾ ನೀಡಿದ್ದೇನೆ. ಓರ್ವ ವ್ಯಕ್ತಿ ಕುಳಿತುಕೊಂಡು ಹೋಗುವಂತಹ ವಿಮಾನ ಮಾಡಬೇಕು ಎಂಬ ಆಸೆ ಇದ್ದಿತ್ತು. ಆದರೆ ವಿಮಾನ ಮಾಡುವುದು ತುಂಬಾ ಕಷ್ಟಕರ. ಆಕಾಶದಲ್ಲಿ ಹಾರುವ ವಿಮಾನ ತಯಾರಿಸಲು ಜಾಗದ ಕೊರತೆ ಮತ್ತು ಹಣದ ಅವಶ್ಯಕತೆ ಕೂಡಾ ಇತ್ತು ಹೀಗಾಗಿ ನೀರಿನಲ್ಲಿ ಹೋಗುವ ವಿಮಾನವನ್ನು ತಯಾರಿಸಿದೆವು. ನನ್ನ ಮನೆಯ ಹತ್ತಿರವೇ ನದಿ ಇರುವುದರಿಂದ ಇದರ ಪ್ರಾಯೋಗಿಕ ಪ್ರಯೋಗಕ್ಕೆ ಮತ್ತು ಇನ್ನಿತರ ಕೆಲಸಕ್ಕೆ ಕೂಡಾ ಸುಲಭವಾಗಿತ್ತು. ಈ ಯೋಜನೆಗೆ ಸಹಕಾರಿಯಾಗುವಂತೆ ಸರಕಾರ ನಮಗೆ ಒಂದು ಸಣ್ಣ ಮಟ್ಟದ ವರ್ಕ್ ಶಾಪ್ ಮತ್ತು ಅಗತ್ಯ ಸವಲತ್ತುಗಳನ್ನು ಒದಗಿಸಿ ಕೊಡಬೇಕು” ಎನ್ನುತ್ತಾರೆ ಈ ತಂಡದ ಮುಖ್ಯಸ್ಥರು ಮತ್ತು ಮಾರ್ಗದರ್ಶಕರು ಆದ ಪುಷ್ಪರಾಜ್ ಅಮಿನ್.

ಈ ಇಡೀ ಸೀ ಪ್ಲೇನ್ ತಯಾರಾದದ್ದು ಪುಷ್ಪರಾಜ್ ಅವರ ಮನೆಯ ಅಂಗಳ ಗದ್ದೆ, ಮತ್ತು ತೋಟದಲ್ಲಿ. ಯಾವುದೇ ದೊಡ್ಡ ವರ್ಕ್ ಶಾಪ್ ಇಲ್ಲದೇ, ಆಧುನಿಕ ಉಪಕಣಗಳು ಇಲ್ಲದೇ ತಮ್ಮಲ್ಲಿ ಲಭ್ಯವಿರುವ ಉಪಕರಣಗಳನ್ನು ಬಳಸಿ ಈ ಸೀ ಪ್ಲೇನ್ ಅನ್ನು ತಯಾರು ಮಾಡಿದ್ದಾರೆ, ತಂಡದಲ್ಲಿ ಪುಷ್ಪರಾಜ್ ಅಮೀನ್ ಸೇರಿದಂತೆ, ಟ್ರೈನಿ ಪೈಲಟ್ ವಿನಯಾ ಯು, ಯಾಚ್ ಕ್ಯಾಪ್ಟನ್ ವಸುರಾಜ್ ಅಮಿನ್, ವೃತ್ತಿಪರ ಡ್ರೋನ್‌‌ ಆಪರೇಟರ್ ಅಭಿಷೇಕ್ ಎಂ ಕೋಟ್ಯಾನ್, ಏರೋನಾಟಿಕಲ್ ವಿದ್ಯಾರ್ಥಿ ಉತ್ಸವ್ ಉಮೇಶ್, ಏರೋನಾಟಿಕಲ್ ಪ್ರಾಧ್ಯಾಪಕ ಶಯನಿ ರಾವ್, ರೇಶ್ಮಾ ಬಂಗೇರ, ಅಶ್ವಿನಿ ರಾವ್ ಸೇರಿದ್ದಾರೆ.

“ಈ ಸೀ ಪ್ಲೇನ್ 190 ಕೆಜಿ ಇದ್ದು, ಓರ್ವ ಪೈಲಟ್ ಕುಳಿತುಕೊಂಡು ಸಂಚರಿಸಲು ಸಾಧ್ಯವಿದೆ. ನಮ್ಮ ಪ್ರಥಮ ಪ್ರಯತ್ನದಲ್ಲೇ ನಾವು ಯಶಸನ್ನು ಕಂಡಿದ್ದೇವೆ. ನಮ್ಮ ದೇಶದಲ್ಲಿ ಇಷ್ಟು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ತಯಾರಾಗಿರುವ ಪ್ರಥಮ ವಿಮಾನ ಇದು. ಇದನ್ನು ದ್ವೀಪಗಳ ನಡುವೆ ಸಂಚಾರಕ್ಕೆ, ನೆರೆ ಸಂಧರ್ಭದಲ್ಲಿ ಪರಿಹಾರ ಕಾರ್ಯಕ್ಕೆ, ಪ್ರವಾಸೋದ್ಯಮಕ್ಕೆ, ಬಳಕೆ ಮಾಡಬಹುದು. ಆದರೆ ಸರಿಯಾದ ವರ್ಕ್ ಶಾಪ್, ಉಪಕರಣಗಳು ಇಲ್ಲದೇ ಈ ಪ್ರಯೋಗ ಯಶಸ್ವಿಯಾಗಿದೆ” ಎನ್ನುತ್ತಾರೆ ತಂಡದ ಸದಸ್ಯ ಶಯನಿ ರಾವ್.

ದೃತಿ ಮೈಕ್ರೋಲೈಟ್ ಸೀ ಪ್ಲೇನ್ ಎಂದು ಇದನ್ನು ಹೆಸರಿಸಲಾಗಿದ್ದು ಸುಮಾರು 120 ಕೆಜಿ ಭಾರವಿದೆ. 33 ಹೆಚ್.ಪಿ ಮೋಟಾರ್ ಅನ್ನು ಈ ಸೀ ಪ್ಲೇನ್‌‌ಗಾಗಿ ಬಳಸಲಾಗಿದೆ. ಗ್ರೇಡ್ ಅಲುಮಿನಿಯಂ, ಫೋಮ್, ಫೈಬರ್ ಬಟ್ಟೆ, ನೈಲಾನ್ ಬಟ್ಟೆ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಈ ಸೀ ಪ್ಲೇನ್ ತಯಾರಿಯಲ್ಲಿ ಬಳಸಲಾಗಿದೆ. ತಂಡವು ಸೂಕ್ತ ಪರಿಕರ, ವ್ಯವಸ್ಥೆಗಳು ಲಭ್ಯವಾದಲ್ಲಿ ಮುಂದಿನ ದಿನಗಳಲ್ಲಿ 4,610 ಸೀಟರ್ ಸೀ ಪ್ಲೇನ್ ಗಳನ್ನು ತಯಾರಿಸಲು ಕೂಡಾ ಯೋಜನೆ ಹಾಕಿಕೊಳ್ಳುತ್ತಿದೆ.

ಈ ಪ್ರಯೋಗಕ್ಕೆ ಆಗಿರುವ ಖರ್ಚು ವೆಚ್ಚ ಎಲ್ಲವನ್ನೂ ತಂಡದ ಸದಸ್ಯರು, ಸ್ನೇಹಿತರು, ಮತ್ತು ಸಾಲ ಮಾಡುವ ಮೂಲಕ ನಿಭಾಯಿಸಿದ್ದಾರೆ.

ಈ ಮೊದಲು ಗುಜರಾತಿನ ಅಹಮದಾಬಾದ್‌ನಲ್ಲಿ ವಿದೇಶದಿಂದ ತರಿಸಿದ್ದ ಸೀ ಪ್ಲೇನ್ ಅನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿ ಅದರಲ್ಲಿ ಪ್ರಯಾಣವನ್ನು ಕೂಡಾ ಮಾಡಿದ್ದರು. ಆದರೆ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್‌ಗೆ ಇದೀಗ ಅಗತ್ಯ ಬೆಂಬಲ ಬೇಕಾಗಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಈ ಯುವ ಅವಿಷ್ಕಾರಿಗಳಿಗೆ ನೆರವಾಗಬೇಕಿದೆ.


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »