ರಾಮ್ ಫ್ರೆಂಡ್ಸ್,(ಕಟೀಲು)
ಸಮಾಜಸೇವೆಯೇ ನಮ್ಮ ಧ್ಯೇಯ
ಐದನೇ ಸೇವಾ ಯೋಜನೆ
ಮಂಗಳೂರು ಬಜ್ಪೆ ಪೆರಾರ ನಿವಾಸಿ ತಿಲಕ್ ಶೆಟ್ಟಿ ಯವರ ಮಗನಾದ 12ವರ್ಷದ ಮಗು ದೇವಿಶ್ ಶೆಟ್ಟಿ ಗೆ ದಿನಾಂಕ 05-01-2021ರಂದು ಬಜ್ಪೆ ಸುಂಕದಕಟ್ಟೆ ಎಂಬಲ್ಲಿ ರಸ್ತೆ ಅಪಘಾತವಾಗಿದ್ದು ಸುಮಾರು 12ದಿನಗಳಿಂದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟದಲ್ಲಿ ಸುಪ್ತ ವ್ಯವಸ್ಥೆ ಯಲ್ಲಿ ಇದ್ದಾನೆ ಆತನ ಮೆದುಳು ಕಿಡ್ನಿ ಲಿವರ್ ಎಲುಬುಗಳಿಗೆ ಪೆಟ್ಟು ಆಗಿದ್ದು ಈ ವರೆಗೆ 2ಲಕ್ಷ ಖರ್ಚಾಗಿದ್ದು 5ಲಕ್ಷಗಳ ಖರ್ಚು ತಗಲ ಬಹುದೆಂದು ವೈದ್ಯರು ಹೇಳಿರುತ್ತಾರೆ. ಈ ಕುಟುಂಬ ಕಡು ಬಡತನದಲ್ಲಿದ್ದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದು ತಂದೆ ಕ್ಯಾಟರಿಂಗ್ ನಲ್ಲಿ ತಾತ್ಕಾಲಿಕ ವಾಗಿ ಕೆಲಸ ಮಾಡುತ್ತಾರೆ ಇವರ ಆರ್ಥಿಕ ಪರಿಸ್ಥಿತಿ ಯು ಕೈಗೆ ಏಟುಕದ ಸ್ಥಿತಿಯಲ್ಲಿದ್ದರೆ ಇವರ ಈ ಸ್ಥಿತಿಯನ್ನು ಕಂಡು ನಮ್ಮ ತಂಡ ರಾಮ್ ಫ್ರೆಂಡ್ಸ್(,ಕಟೀಲು) ವತಿಯಿಂದ (20,000 ಮೊತ್ತವನ್ನು )ಈ ಐದನೇ ಸೇವಾ ಯೋಜನೆ ಶ್ರೀ ನಾಗಬ್ರಹ್ಮ ಯುವಕ ಮಂಡಲ (ರಿ) ಹಾಗೂ ಶ್ರೀ ಕ್ಷೇತ್ರ ಪೆರಾರ ದೈವಸ್ಥಾನದ ಆಡಳಿತ ಮಂಡಳಿ ಇವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಪೆರಾರ ದೈವಸ್ಥಾನದಲ್ಲಿ ಶ್ರೀ ಸಾಯಿಶ್ ಚೌಟ ತಲೇಕಳ (ಆಡಳಿತಾಧಿಕಾರಿ ಶ್ರೀ ಕ್ಷೇತ್ರ ಪೆರಾರ), ಸುರೇಶ್ ಅಂಚನ್ (ಕಾರ್ಯದರ್ಶಿ ಶ್ರೀ ಕ್ಷೇತ್ರ ಪೆರಾರ) ಶೇಖರ್ ಸಪಲಿಗ (ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರು ಪೆರಾರ), ಚಂದ್ರಪೂಜಾರಿ ಪೆರಾರ( ನಾಗಬ್ರಹ್ಮ ಯುವಕ ಮಂಡಲ ಉಪಾಧ್ಯಕ್ಷರು) ರಮೇಶ್ ಅಮೀನ್ ಹಾಗೂ ರಾಮ್ ಫ್ರೆಂಡ್ಸ್ ಕಟೀಲು ತಂಡದ ನಾಯಕರು ಮತ್ತು ಸರ್ವ ಸದಸ್ಯರೊಂದಿಗೆ ನೀಡಲಾಯಿತು
ನಮ್ಮ ಉದ್ದೇಶ ಒಂದೇ ಸಮಾಜಸೇವೆ ನಮ್ಮೊಡನೆ ಕೈಜೋಡಿಸಿ