ಸಮಾಜದಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಭಗವಂತನಿಗೆ ಎಲ್ಲರೂ ಸಮಾನರೆ. ಪರಸ್ಪರ ಸಹಾಯ ಮಾಡುವುದೇ ನಿಜವಾದ ಮಾನವೀಯತೆ ಎಂದು ನಂಬಿರುವವರೆ ಕಾರ್ಕಳದ ಕಲ್ಯಾ ಗ್ರಾಮದ ತ್ರಯಂಬಕೇಶ್ವರ ಅನ್ಮಪೂರ್ಣ ಮಠದ ಶ್ರೀ ಶ್ರೀ ಶ್ರೀ ಬ್ರಹ್ಮ ಋಷಿ ಉಮಾಮಹೇಶ್ವರ ಸ್ವಾಮೀಜಿ.
(Copyrights owned by: billavaswarriors.com )
ಮೂಲತಃ ಅಜೆಕಾರು ಹೆರ್ಮುಂಡೆ ಗ್ರಾಮದ ಬೊಬ್ಬರ್ಯ ಬಾಕ್ಯಾರ್ ಎಂಬ ಕೃಷಿ ಕುಟುಂಬದ ನಾರಾಯಣ ಪೂಜಾರಿ ಹಾಗು ಸುಂದರಿ ಪೂಜಾರಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಯರ್ಲಪಾಡಿ ಗ್ರಾಮದಲ್ಲಿ ಬೆಳೆದರು. ಬಾಲ್ಯದಲ್ಲಿ ಬಹಳ ಚೇಷ್ಟೆ ಸ್ವಭಾವದವರಾಗಿದ್ದು ಐದನೇ ತರಗತಿಯವರೆಗಿನ ಶಿಕ್ಷಣ ಪಡೆದಿದ್ದಾರೆ.
(Copyrights owned by: billavaswarriors.com )
ಪೂರ್ವಶ್ರಮದಲ್ಲಿ ಉಮೇಶ್ ಕರ್ಕೇರ ಎಂಬ ಹೆಸರುಳ್ಳ ಇವರಿಗೆ ಆಧ್ಯಾತ್ಮಿಕ ಜೀವನಕ್ಕೆ ಸ್ಪೂರ್ತಿಯಾದವರು ಹಾಗು ಇವರಲ್ಲಿರುವ ಜ್ಞಾನದ ಶಕ್ತಿಯನ್ನು ಹೊರ ಹೊಮ್ಮುವಂತೆ ಮಾಡಿದವರು ಇವರ ಗುರುಗಳಾದ ಸುಂಕದಕಟ್ಟೆಯ ನಿರಂಜನ ಸ್ವಾಮೀಜಿಯವರು. ಮುಂಬಯಿಯಲ್ಲಿ ಉಮೇಶ ಕರ್ಕೇರವರು ನಿರಂಜನ ಸ್ವಾಮೀಜಿಯವರಿಂದ ದೀಕ್ಷೆ ಪಡೆದರು. ಮಹಾರಾಷ್ಟ್ರದಿಂದ ತವರೂರಿಗೆ ಬಂದು 2005 ರಲ್ಲಿ ಕಲ್ಯಾ ಗ್ರಾಮದಲ್ಲಿ ತ್ರಯಂಬಕೇಶ್ವರ ಅನ್ಮಪೂರ್ಣ ಮಠವನ್ನು ಸ್ಥಾಪಿಸಿದರು.ಜೀವನದಲ್ಲಿ ನಮಗೆ ತಿಳಿದಿರುವುದನ್ನು ಇತರರಿಗೂ ಕಲಿಸಬೇಕೆನ್ನುವ ಇವರು ಕರಾಟೆ ಭೋಧಕರಾಗಿದ್ದು. ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸದೆ ಕರಾಟೆ ಕಲಿಸುತ್ತಿದ್ದರು ಹಾಗು ಕಮಾಂಡೊಗಳಿಗೆ ತರಬೇತಿ ನೀಡುತ್ತಿದ್ದರು. ಇನ್ನು ಮುಂದೆಯೂ ಅನೇಕ ಕಲೆ ಹಾಗು ಆಟಗಳನ್ನು ಮಠದಲ್ಲಿಯೂ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ.(Copyrights owned by: billavaswarriors.com )
ಮಾನವರು ಸ್ವಾರ್ಥಿಗಳು ಹಾಗು ಅವರು ನಿರೀಕ್ಷೆಗಳೊಂದಿಗೆ ಬದುಕುತ್ತಾರೆ ಆದರೆ ಭಗವಂತ ಮಾತ್ರ ಯಾವುದೇ ನಿರೀಕ್ಷೆಗಳಿಲ್ಲದೆ ನಮ್ಮನ್ನು ಪ್ರೀತಿಸುತ್ತಾನೆ. ಹಾಗೆಯೇ ಆಧ್ಯಾತ್ಮಿಕ ಗುರುವಾದವನು ಎಂದಿಗೂ ತನ್ನ ಭಕ್ತನಿಗೆ ಹಣದ ಬೇಡಿಕೆಯಿಡುವುದಿಲ್ಲ ಭಕ್ತ ತೋರಿಸುವ ಭಕ್ತಿಯೆ ದೊಡ್ಡ ಆಸ್ತಿಯಾಗಿರುತ್ತದೆ ಎನ್ನುತ್ತಾರೆ. ತಮ್ಮ ಮಠ ನೊಂದ ಜನರ ಸ್ವಾಂತನಕ್ಕಾಗಿ ಹಾಗು ಅವರ ಕಷ್ಟಗಳ ಪರಿಹಾರಕ್ಕಾಗಿ ಇದೆ. ಇದರ ಬೆಳವಣಿಗೆ ಇಲ್ಲಿನ ದೇವತೆಯೆ ಮಾಡುತ್ತಾರೆ ಎಂದು ನಂಬಿದ್ದಾರೆ. ಇಂದಿನ ಪೀಳಿಗೆಯ ಜನ ಹೆತ್ತವರನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಹೆತ್ತವರ ಆಶೀರ್ವಾದದ ವಿನಃ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಅವರೇ ಮೊದಲ ದೇವರು ಅವರಿಗೆ ಎಂದಿಗೂ ವಿಧೇಯರಾಗಿರಬೇಕು ಹಾಗು ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾದುದು ಎಂಬ ಕಿವಿಮಾತನ್ನು ಜನತೆಗೆ ನೀಡುತ್ತಾರೆ.
(Copyrights owned by: billavaswarriors.com )
ಇಂತಹ ಆಧ್ಯಾತ್ಮಿಕ ಜ್ಞಾನಿ ನಮ್ಮ ಬಿಲ್ಲವ ಸಮಾಜದವರು ಎನ್ನುವುದು ಹೆಮ್ಮೆಯ ಸಂಗತಿ. ಎಲ್ಲರನ್ನು ಸಮಾನವಾಗಿ ಕಾಣುವ ಇವರ ಆಧ್ಯಾತ್ಮಿಕ ಬದುಕು ಸಮಾಜದ ಏಳಿಗೆಗೆ ಮಾರ್ಗದರ್ಶನವಾಗಲಿ ಎಂಬುದು ನಮ್ಮೆಲ್ಲರ ಆಶಯ.
ಬರಹ: ನಳಿನಿ ಎಸ್ ಸುವರ್ಣ ಜಾರ್ಕಳ ಮುಂಡ್ಲಿ.
(Copyrights owned by: billavaswarriors.com )