ಮಾನವ ಸೇವೆಯೇ ಮಾಧವ ಸೇವೆ ಜೀವ ನೀಡುವ ಶಕ್ತಿ ಇಲ್ಲದಿದ್ದರೂ ಜೀವಕ್ಕೆ ಆಸರೆ ನೀಡುವ ಸೌಜನ್ಯ ವಿರಲೆಂಬ ನೀರಿಕ್ಷೆ.
ಪಚ್ಚನಾಡಿ ಸಂತೋಷ ನಗರದ ನಿವಾಸಿ ಶ್ರೀಮತಿ ರತ್ನ ಕಳೆದ ಮೂರು ವರ್ಷ ಪಾಶ್ವವಾಯುವಿನಿಂದ ಮಲಗಿದಲ್ಲೇ ಇದ್ದಾರೆ. ಹೊರ ಪ್ರಪಂಚದ ಅರಿವೇ ಇರದ ಅವರಿಗೆ ಹೊರ ಪ್ರಪಂಚ ನೋಡಬೇಕಾದರೆ ಎತ್ತಿಕೊಂಡು ಓಡುವ ಪರಿಸ್ಥಿತಿ. ಈ ಹೊತಿನಲ್ಲಿ ಮನೆಯವರ ಕೋರಿಕೆ ಮೇರೆಗೆ ಜೆಸಿಐ ಪ್ರಮುಖರಾದ ಸಾರಿಕಾ ಪೂಜಾರಿ ಅವರಲ್ಲಿ ಕೇಳಿಕೊಂಡು, ತಕ್ಷಣ ಸ್ಪಂದಿಸಿ ಎಲೆಕ್ಟ್ರೋಪ್ಲೇಟ್ ಫೋಲ್ಡಬ್ಲ್ ಗಾಲಿ ಕುರ್ಚಿಯನ್ನು ಉಚಿತವಾಗಿ ನೀಡಿ. ಬಡತನ ರೇಖೆಯ ಕೆಳಗಿನ ಫಲಾನುಭವಿಯ ಮುಖದಲ್ಲಿ ಹೊಸ ಉತ್ಸಾಹ ತಂದಿದ್ದಾರೆ. ಮಂಗಳೂರು ನಗರದಲ್ಲಿ ಸಾರಿಕಾ ಪೂಜಾರಿ ಮತ್ತು ತಂಡ ಅನೇಕ ಸಮಾಜಮುಕಿ ಕಾರ್ಯ ಗಳನ್ನು ಮಾಡಿ ತುಂಬ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಸಹಕರಿಸಿದ ಶ್ರೀಮತಿ ವಸುಧಾ ,ಪ್ರಾರ್ಥನಾ ಶರತ್ ಪದವಿನಂಗಡಿ ನಟರಾಜ್ ಪಚ್ಚನಾಡಿ ಧನುಷ್ ರಾಜ್ ಪಚ್ಚನಾಡಿ ರಘುವೀರ್ ಪಚ್ಚನಾಡಿ, ಜಯಪ್ರಕಾಶ್ ಪದವಿನಂಗಡಿ, ತಾರಾನಾಥ್ ,ಹಾಗು ಅಶೋಕ್ ಮಂಗಳ ಜ್ಯೋತಿ ಇದ್ದರು.