TOP STORIES:

FOLLOW US

ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ.! ಈ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ


ಬಹಳ ದಿನಗಳಿಂದ ಇದ್ದ ಭಯವೊಂದು ನಿಧಾನವಾಗಿ ವಾಸ್ತವದ ರೂಪ ತಾಳುತ್ತಿದ್ದು, 40 ವರ್ಷ ವಯಸ್ಸಿನ ಒಳಗಿನ ಮಂದಿಯಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ.

ಪುರುಷರಲ್ಲಿ ಸಾಮಾನ್ಯವಾಗಿ 50ರ ಹರೆಯದಲ್ಲಿ ಹಾಗೂ ಮಹಿಳೆಯರಲ್ಲಿ 60ರ ಹರೆಯದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಆಧುನಿಕ ವೈದ್ಯಕೀಯ ಲೋಕ ಲೆಕ್ಕಾಚಾರ ಮಾಡುತ್ತಿದ್ದ ನಡುವೆಯೇ ಈ ರೀತಿಯ ಹೊಸದೊಂದು ಆತಂಕ ಬೇರು ಬಿಡುತ್ತಿದೆ.

“40ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗುವುದನ್ನು ನೋಡುವುದು ಬಹಳ ಅಪರೂಪವಾಗಿತ್ತು. ಈಗ ಆಗುತ್ತಿರುವುದನ್ನು ನೋಡಿದರೆ ನಾವೆಲ್ಲೊ ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನಿಸುತ್ತಿದೆ,” ಎಂದು ಬೋಸ್ಟನ್‌ನಲ್ಲಿರುವ ಹಾರ್ವಡ್‌ ವೈದ್ಯಕೀಯ ಶಾಲೆಯ ಪ್ರೊಫೆಸರ್‌ ರಾನ್ ಬ್ಲಾಂಕ್‌ಸ್ಟೀನ್ ತಿಳಿಸಿದ್ದಾರೆ.

ಈ ಸಮಸ್ಯೆ ಕೇವಲ ಪಾಶ್ಚಾತ್ಯ ಜಗತ್ತಿಗೆ ಮಾತ್ರವೇ ಸೀಮಿತವಾಗಿಲ್ಲ. ಭಾರತದಲ್ಲೂ ಸಹ ಈ ರೀತಿ ದಿಢೀರ್‌ ಹೃದಯಾಘಾತಗಳಿಂದ ಸಾವು ಸಂಭವಿಸುವುದು ಬಲು ಸಾಮಾನ್ಯವಾಗುತ್ತಿದೆ. ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್‌ ಶುಕ್ಲಾ ಈ ಪಟ್ಟಿಗೆ ಸೇರಿದ ಹೊಸ ಹೆಸರಾಗಿದೆ ಅಷ್ಟೇ.

ಈ ಬಗ್ಗೆ ವಿವರಣೆ ಕೊಡುವ ಮುಂಬೈ ಗ್ಲೋಬಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಚರಣ್ ಲಂಜೇವಾರ್‌, “ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಹಲವಾರು ಕಾರಣಗಳಿವೆ. ನಿಷ್ಕ್ರಿಯ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆಗಳು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಮುಖ್ಯ ಕಾರಣಗಳಾಗುತ್ತವೆ” ಎಂದಿದ್ದಾರೆ.

“ತಮ್ಮ 20ರ ವಯೋಮಾನದಲ್ಲೇ ಹೃದಯಾಘಾತಕ್ಕೆ ತುತ್ತಾಗುವ ಮಂದಿ, ಮಹಿಳೆಯರನ್ನೂ ಒಳಗೊಂಡು, ಹೆಚ್ಚಾಗುತ್ತಿದ್ದಾರೆ. ದಶಕದ ಹಿಂದೆ ಹೀಗೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ಈ ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಹೃದಯಾಘಾತಗಳ ಕೇಸ್‌ಗಳು ಇನ್ನಷ್ಟು ಹೆಚ್ಚಾಗಿರುವುದನ್ನು ಕಂಡಿದ್ದೇವೆ,” ಎನ್ನುತ್ತಾರೆ ಚರಣ್.

“ಶಿಸ್ತಿನ ಪಥ್ಯ, ವಾಸ್ತವಿಕ ಹಾಗೂ ಸುದೀರ್ಘವಾಧಿಗೆ ಮಾಡಬಹುದಾದ ವ್ಯಾಯಾಮದ ಅಭ್ಯಾಸ, ಒತ್ತಡ ರಹಿತ ಜೀವನಗಳು ಕಡಿಮೆ ವಯಸ್ಸಿನಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುವ ಉತ್ತಮ ಕ್ರಮಗಳು. ಪ್ರತಿಯೊಬ್ಬ ವಯಸ್ಕನೂ ಸಹ ದೈಹಿಕ ತಜ್ಞರ ಬಳಿ ತಪಾಸಣೆಗೆ ಒಳಪಟ್ಟು, 30ರ ವಯಸ್ಸಿಗೆ ಕಾಲಿಡುವ ಮುನ್ನವೇ ನಿರ್ದಿಷ್ಟ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ರಕ್ತ ಪರೀಕ್ಷೆಯಲ್ಲಿ ಲಿಪಿಡ್ ಹಾಗೂ ಸಕ್ಕರೆ ಅಂಶವನ್ನು ಪರಿಶೀಲನೆ ಮಾಡಬೇಕು,” ಎಂದು ವಿವರಿಸಿದ್ದಾರೆ ಚರಣ್.

ನಡಿಗೆ ಹಾಗೂ ಸೈಕ್ಲಿಂಗ್‌ಗಳಿಂದಾಗಿ ಹೃದಯಾಘಾತದ ಸಾಧ್ಯತೆಯು ಬ್ರಿಟನ್‌ನ 4.3 ಕೋಟಿ ಮಂದಿಯಲ್ಲಿ ಕಡಿಮೆಯಾಗಿದೆ ಎಂದು ಬ್ರಿಟನ್‌ನ ಲೀಡ್ಸ್‌ ವಿವಿಯ ಅಧ್ಯಯನವೊಂದು ತಿಳಿಸಿದೆ.

“ನಿಮ್ಮ ಕೆಲಸದ ಸ್ಥಳಕ್ಕೆ ತಲುಪಬೇಕಾದಲ್ಲಿ ನಡಿಗೆ ಹಾಗೂ ಸೈಕ್ಲಿಂಗ್ ಮಾಡಬೇಕಾದ ಅಗತ್ಯ ಹೆಚ್ಚಾದಲ್ಲಿ ಖುಷಿ ಪಡಿ. ನಮ್ಮ ಬ್ಯುಸಿ ಜೀವನದಲ್ಲಿ ವ್ಯಾಯಾಮ ಮಾಡಲು ಸಮಯ ಸಿಗದೇ ಇರಬಹುದು. ಆದರೆ ವ್ಯಾಯಾಮ ಮಾಡಲು ನೀವು ಜಿಮ್‌ಗೆ ಹೋಗಿ ಗಂಟೆಗಟ್ಟಲೇ ಟ್ರೆಡ್‌ಮಿಲ್ ಮೇಲೆ ಕಳೆಯಬೇಕೆಂದೇನಿಲ್ಲ,” ಎನ್ನುವ ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ನಿರ್ದೇಶಕ ಮೆಟಿನ್ ಅವ್ಕಿರನ್, “ನಿಮ್ಮ ಸಂಚಾರಕ್ಕೆ ಬೈಸಿಕಲ್ ಅವಲಂಬಿಸಿದಲ್ಲಿ, ನಿಮ್ಮ ಹೃದಯ ಬಡಿತಕ್ಕೆ ಉತ್ತಮ. ಇದು ಆಯ್ಕೆಯಲ್ಲ, ಕೆಲ ಬೀದಿಗಳ ಹಿಂದೆಯೇ ನಿಮ್ಮ ವಾಹನ ಪಾರ್ಕ್ ಮಾಡುವುದು ಅಥವಾ ಕೆಲ ಸ್ಟಾಪ್‌ಗಳ ಹಿಂದೆಯೇ ಬಸ್‌ನಿಂದ ಇಳಿಯುವುದು ಇನ್ನಷ್ಟು ಆರೋಗ್ಯಕರ ಜೀವನಕ್ಕೆ ನೆರವಾಗಬಲ್ಲವು,” ಎಂದಿದ್ದಾರೆ.


Share:

More Posts

Category

Send Us A Message

Related Posts

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »

“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ 


Share       ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ


Read More »

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ


Share       ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ


Read More »

ಬಿಲ್ಲವ ಸಮಾಜಕ್ಕಾಗಿ ಪಂದ್ಯಾಟದ ಜೊತೆಗೆ ಆರ್ಥಿಕ ಯೋಜನೆಯನ್ನು ರೂಪಿಸಿದ ರುವಾರಿ ವಿಶ್ವನಾಥ ಪೂಜಾರಿ ಕಡ್ತಲ


Share       ಆದರಣೀಯ ಕ್ಷಣಗಳನ್ನು ‌ಮತ್ತೊಮ್ಮೆ ಮರಳಿಸಿ ವಿದೇಶದ  ಮಣ್ಣಲ್ಲೂ ಬಿಲ್ಲವರನ್ನು ಒಗ್ಗೂಡಿಸಿಕೊಂಡು ಒಂದು ಪಂದ್ಯಾಟ ನಡೆಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಮಾಡಿಯೇ ಸಿದ್ಧ ಎಂಬ ಸ್ಪಷ್ಟ ನಿಲುವಿನೊಂದಿಗೆ ಎಲ್ಲರಿಗೂ ಇಷ್ಟವಾಗಿಸಿದ ಕ್ರಿಕೆಟ್ ಪಂದ್ಯಾಟ ಮಾಡಿ


Read More »