TOP STORIES:

ಹೀಗೆ ಮಾಡಿ, ಒಂದು ತಿಂಗಳು ಬರುವ ಗ್ಯಾಸ್ ಎರಡು ತಿಂಗಳು ಬರುತ್ತೆ!


ಅಡುಗೆ ಅನಿಲದ ಬೆಲೆಯು ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇದು ಜನಸಾಮಾನ್ಯರ ಮೇಲೆ ತೀವ್ರ ಹೊಡೆತ ಹಾಕಿದೆ. ಹೀಗಾಗಿ ಅಡುಗೆ ಗ್ಯಾಸ್ ಬಳಕೆ ಮಾಡುವ ಜನರು ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭ ಆದಷ್ಟು ಗ್ಯಾಸ್ ಉಳಿತಾಯ ಮಾಡಲು ಪ್ರಯತ್ನಿಸಬೇಕು.

ಗ್ಯಾಸ್ ನ್ನು ಉಳಿತಾಯ ಮಾಡಿದರೆ ಅದರಿಂದ ಹಣದ ಉಳಿತಾಯವು ಆಗುವುದು. ಹಾಗಾದರೆ ಗ್ಯಾಸ್ ಉಳಿಸುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆಯು ಬರಬಹುದು. ಗ್ಯಾಸ್ ಉಳಿಸಲು ಏನು ಮಾಡಬೇಕು ಎಂದು ನೀವು ತಿಳಿಯಿರಿ.

​ಬರ್ನರ್ ಶುಚಿಯಾಗಿರಬೇಕು

ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು. ಬೆಂಕಿಯ ಬಣ್ಣವನ್ನು ಗಮನಿಸಿ ಮತ್ತು ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು.
ಆದರೆ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಆಗ ಅದು ಸರಿಯಾಗಿ ಉರಿಯುತ್ತಿಲ್ಲ ಎಂದರ್ಥ.ಬರ್ನರ್ ನ್ನು ನಿಯಮಿತವಾಗಿ ಶುಚಿ ಮಾಡುತ್ತಲಿದ್ದರೆ, ಅದರಿಂದ ಬೆಂಕಿಯ ಬಣ್ಣವು ನೀಲಿ ಆಗಿರುವುದು. ಇದರಿಂದ ಗ್ಯಾಸ್ ನಷ್ಟವಾಗುವುದು ತಪ್ಪುವುದು.

​ಪಾತ್ರೆಗಳನ್ನು ಒರೆಸಿ

ಕೆಲವರು ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಗ್ಯಾಸ್ ಮೇಲೆ ಇಟ್ಟುಬಿಡುವರು. ಆಧರೆ ಇದರಿಂದ ಗ್ಯಾಸ್ ವೆಚ್ಚವಾಗುವುದು.
ಇದಕ್ಕಾಗಿ ಪಾತ್ರೆಯನ್ನು ತೊಳೆದ ಬಳಿಕ ಸ್ವಲ್ಪ ಒರೆಸಿಕೊಳ್ಳಿ. ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ತಪ್ಪುವುದು.
ಮೊದಲೇ ತಯಾರಿಸಿಡಿ

ಅಡುಗೆ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳನ್ನು ನೀವು ಮೊದಲೇ ತಯಾರು ಮಾಡಿಟ್ಟುಕೊಂಡು ಇದರ ಬಳಿಕ ಗ್ಯಾಸ್ ಉರಿಸಿ. ಗ್ಯಾಸ್ ಉರಿಸಿದ ಬಳಿಕ ತರಕಾರಿ ಕತ್ತರಿಸುವುದು ಸರಿಯಲ್ಲ. ಬೇಕಾಗುವಂತಹ ಸಾಮಗ್ರಿಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅಡುಗೆ ಮಾಡಿ.

​ಪಾತ್ರೆಯ ಮುಚ್ಚಳ ಹಾಕಿಡಿ

ನೀವು ಯಾವುದೇ ಆಡುಗೆ ಮಾಡುತ್ತಲಿದ್ದರೂ ಆಗ ಪಾತ್ರೆಯ ಮುಚ್ಚಳ ಹಾಕಿಟ್ಟರೆ ಅದರಿಂದ ಬೇಗ ಬೇಯುವುದು ಹಾಗೂ ಅದರಿಂದ ಗ್ಯಾಸ್ ಕೂಡ ಉಳಿತಾಯ ಆಗುವುದು. ಪಾತ್ರೆಯ ಮುಚ್ಚಳವನ್ನು ಮುಚ್ಚಿಟ್ಟರೆ ಅದರಿಂದ ಹಬೆಯು ನಿರ್ಮಾಣವಾಗಿ ಆಹಾರ ಬೇಗ ಬೇಯುವುದು.

ಧಾನ್ಯ ಮತ್ತು ಅಕ್ಕಿ ನೆನೆಸಿಡಿ

ಕೆಲವೊಂದು ಧಾನ್ಯಗಳು ಬೇಯಲು ತುಂಬಾ ಸಮಯ ಬೇಕಾಗುವುದು. ಹೀಗಾಗಿ ಧಾನ್ಯಗಳು ಮತ್ತು ಅಕ್ಕಿಯನ್ನು ಕೆಲವು ಗಂಟೆಗಳ ಕಾಲ ನೆನೆಯಲು ಹಾಕಿ. ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

​ಕೆಲವು ನಿಮಿಷ ಬಳಿಕ ಗ್ಯಾಸ್ ಕಡಿಮೆ ಮಾಡಿ

ಒಮ್ಮೆ ಪಾತ್ರೆಯು ಬಿಸಿಯಾದ ಬಳಿಕ ಗ್ಯಾಸ್ ಬೆಂಕಿ ಕಡಿಮೆ ಮಾಡಿ. ಆಹಾರ ಕುದಿಯಲು ಆರಂಭಿಸಿದ ವೇಳೆ ತುಂಬಾ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ತರಕಾರಿಗಳಲ್ಲಿ ಪೋಷಕಾಂಶಗಳು ಹಾಗೆ ಉಳಿಯುವುದು ಹಾಗೂ ಗ್ಯಾಸ್ ಬಳಕೆ ಕಡಿಮೆ ಆಗುವುದು.

​ಕುಕ್ಕರ್ ಬಳಸಿ

ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಬೇಗ ಆಗುವುದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಗ್ಯಾಸ್ ಖರ್ಚು ಕಡಿಮೆ ಮಾಡಲು ಕುಕ್ಕರ್ ನ್ನು ಬಳಸಿ. ಇದು ಸಮಯ ಹಾಗೂ ಗ್ಯಾಸ್ ಎರಡನ್ನು ಉಳಿತಾಯ ಮಾಡುವುದು.

ಅಗಲವಾದ ಪಾತ್ರೆ ಬಳಸಿ

ಕೆಲವರು ತುಂಬಾ ಸಣ್ಣ ಪಾತ್ರೆಗಳನ್ನು ಗ್ಯಾಸ್ ನಲ್ಲಿ ಇಡುವರು. ಇದರಿಂದ ಗ್ಯಾಸ್ ಹೊರಭಾಗಕ್ಕೆ ಬರುವುದು. ಗ್ಯಾಸ್ ನಲ್ಲಿ ಅಗಲವಾದ ಪಾತ್ರೆಗಳನ್ನು ಇಡಬೇಕು. ಇದರಿಂದ ಗ್ಯಾಸ್ ಹೊರಗೆ ಬರುವುದು ತಪ್ಪುವುದು ಹಾಗೂ ಗ್ಯಾಸ್ ನ ಉಳಿತಾಯ ಕೂಡ ಆಗುವುದು.

​ಲೀಕ್ ಇದೆಯಾ ಎಂದು ನೋಡಿ

ಬರ್ನರ್, ಪೈಪ್ ಮತ್ತು ರೆಗ್ಯೂಲೇಟರ್ ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂದು ನೋಡಿ. ಮೂಗಿನ ಮೂಲಕ ಸೋರಿಕೆ ಪತ್ತೆ ಮಾಡಬಹುದು. ಯಾವುದೇ ಲೀಕ್ ಇದ್ದರೆ ಆಗ ನೀವು ಬೇಗನೆ ಇದನ್ನು ಪತ್ತೆ ಮಾಡಿ.
ಗ್ಯಾಸ್ ನ ವಾಸನೆ ಬರುತ್ತಲಿದ್ದರೆ, ಆಗ ಲೀಕ್ ಇದೆ ಎಂದು ಅರ್ಥ ಮಾಡಿಕೊಳ್ಳಿ. ಕೆಲವೊಂದು ಸಲ ಇದು ಅಪಾಯಕಾರಿ ಕೂಡ ಆಗಬಹುದು. ಹೀಗಾಗಿ ಪದೇ ಪದೇ ಇದನ್ನು ಗಮನಿಸುತ್ತಿರಬೇಕು.
ಸೂಕ್ತ ಸರಬರಾಜುದಾರರಿಂದ ಪಡೆಯಿರಿ: ನೀವು ಸೂಕ್ತ ಸರಬರಾಜುದಾರರಿಂದ ಗ್ಯಾಸ್ ಖರೀದಿ ಮಾಡಿ. ಅನಧಿಕೃತ ಗ್ಯಾಸ್ ಬಳಕೆ ಮಾಡಬೇಡಿ. ಇದರ ತೂಕವನ್ನು ಸರಿಯಾಗಿ ಗಮನಿಸಿ ಪಡೆಯಿರಿ.

​ಕೊನೆ ಮಾತು

ನಿಮಗೆ ಈಗ ಗ್ಯಾಸ್ ಉಳಿತಾಯದ ಬಗ್ಗೆ ತಿಳಿದಿದೆ. ಇನ್ನು ನೀವು ಇದನ್ನು ಪಾಲಿಸಿಕೊಂಡು ಹೋಗಿ ನಿಮಗಾಗಿ ಹಾಗೂ ಕುಟುಂಬಕ್ಕಾಗಿ ಗ್ಯಾಸ್ ಉಳಿತಾಯ ಮಾಡಿ.
ಗ್ಯಾಸ್ ಉಳಿತಾಯವು ಪ್ರತಿನಿತ್ಯವೂ ಏನೂ ಬದಲಾವಣೆ ಉಂಟು ಮಾಡದು, ಆದರೆ ಇದು ತಿಂಗಳಲ್ಲಿ ಹಣ ಉಳಿತಾಯ ಮಾಡುವುದು. ಸಣ್ಣ ಸಣ್ಣ ಪ್ರಮಾಣದಲ್ಲಿನ ಉಳಿತಾಯವು ದೊಡ್ಡದಾಗುವುದು.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »