TOP STORIES:

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್


ಈ ತುಳುನಾಡಿನ ಮಣ್ಣಿನ ಗುಣವೇ ಹಾಗೇ, ಅದೇಷ್ಟೋ ಸಾಧಕರನ್ನು,ಉದ್ಯಮಿಗಳನ್ನು ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಪುಣ್ಯ ಭೂಮಿ ಇದು. ಕೆಲವರು ಸದ್ದು ಮಾಡಿದರು,ಇನ್ನು ಕೆಲವರು ತನ್ನ ಕಾರ್ಯದಿಂದಲೇ ತನ್ನತ್ತ ತಿರುಗುವಂತೆ ಮಾಡಿದರು ಎಂಬುದನ್ನು ಹೇಳಲು ಯಾವುದೇ ಅಂಜಿಕೆಯಿಲ್ಲ.ಇಂದು ತುಳುನಾಡಿನ ಮನೆ ಮಗಳ ಸಣ್ಣ ಪರಿಚಯವನ್ನು ನಿಮ್ಮ ಎದುರಿಗೆ ತರಲೇಬೇಕು ಅನಿಸಿತು. ನಮ್ಮ ಪ್ರಧಾನಿಯಾದ ನರೇಂದ್ರ ಮೋದಿಯವರು ಇತ್ತೀಚೆಗೆ ಅಮೇರಿಕದ ಪ್ರವಾಸವನ್ನು ಕೈಗೊಂಡಿದ್ದರು.

ಪ್ರಧಾನಿ ಮತ್ತು ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ನಮ್ಮ ಕರಾವಳಿಯ ಆನಂದ್ ರೆಸ್ಟೋರೆಂಟ್ ಗೆ(ಆನಂದ್ ಪೂಜಾರಿ) ನೀಡಲಾಗಿತ್ತು. ಇವರು ಕ್ಯಾಪಿಟಲ್ ಹಿಲ್ ಮತ್ತು ವೈಟ್ ಹೌಸ್ಸ್ ಗೆ ಭಾರತೀಯ ಶೈಲಿಯ ಆಹಾರ ಕ್ರಮಕ್ಕೆ ಗುತ್ತಿಗೆ ಪಡೆದ ನಮ್ಮ ಹೆಮ್ಮೆಯ ಕರಾವಳಿಗರು. ಈ ಸಂದರ್ಭದಲ್ಲಿ ಸುಮಲ್ ಕೋಟ್ಯಾನ್ ಅವರು ನರೇಂದ್ರ ಮೋದಿ ಮತ್ತು ಗಣ್ಯ ವ್ಯಕ್ತಿಗಳಿಗೆ ಭಾರತೀಯ ಆತಿಥ್ಯ ನೀಡುವ ಜವಾಬ್ದಾರಿಯ ಹೊಣೆಯನ್ನು ಇವರು ವಹಿಸಿಕೊಂಡಿದ್ದರು.ಕರಾವಳಿಯ ಒಬ್ಬಳು ಮನೆ ಮಗಳು ದೂರದ ಅಮೆರಿಕದಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದುದು ನಮಗೆಲ್ಲರಿಗೂ ಹೆಮ್ಮಯ ವಿಷಯವೇ. 2017 ಮತ್ತು 2021ರಲ್ಲೀ ಎರಡು ಬಾರಿ ಈ ಕಾರ್ಯವನ್ನು ಮಾಡಿದ ಸುಮಲ್ ಕೋಟ್ಯಾನ್ ರವರು ಮಂಗಳೂರಿನ ಮೇರಿ ಹಿಲ್ ನಲ್ಲಿ ಜನಿಸಿದವರು.

ಗೋಪಾಲ ಪೂಜಾರಿ ಮತ್ತು ಸುಫಲ ರವರ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅನಾಸ್ ನಲ್ಲಿ ಪ್ರೌಢ ಶಿಕ್ಷಣವನ್ನು ಕಾರ್ಮಲ್ ಶಾಲೆಯಲ್ಲಿ ಪೂರ್ಣಗೊಳಿಸಿದರು.ಹಾಗೆಯೇ ಪಿ.ಯು.ಸಿ.ಯನ್ನು ಸೈಂಟ್ ಅಲೋಶಿಸ್,ಬಯೋಟೆಕ್ನಾಲಜಿ ಎಂಜಿನಿಯರಿಂಗ್ ನ್ನು ನಿಟ್ಟೆ ಮಂಗಳೂರಿನಲ್ಲಿ ಮುಗಿಸಿದರು.

ಅಮೆರಿಕದಲ್ಲಿ 9 ವರುಷದಿಂದ ವಾಸವಾಗಿರುವ ಸುಮಲ್ ಅವರು ಸಂದೀಪ್ ಕೋಟ್ಯಾನ್ ರವರನ್ನು ವಿವಾಹವಾಗಿ ತಮ್ಮ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ.ಹಾಗೆಯೇ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.ಹೊಟೇಲ್ ಉದ್ಯಮದಲ್ಲಿ ಅತೀವ ಆಸಕ್ತಿ ಇದ್ದ ಇವರು ಆನಂದ್ ಪೂಜಾರಿಯವರ ಆನಂದ್ ರೆಸ್ಟೋರೆಂಟ್ ನ ಜೊತೆ ಸೇರಿದರು,ಆನಂದ್ ರೆಸ್ಟೋರೆಂಟ್ 4 ಬಾರಿ ಪ್ರಧಾನಿ ಮತ್ತು ಭದ್ರತ ದಳದ ಆತಿಥ್ಯವನ್ನು ವಹಿಸಿಕೊಂಡ ಹೆಮ್ಮೆ ಇವರದು.

ಮೋದಿಯವರು ಸುಮಲ್ ಕೋಟ್ಯಾನ್ ಜೋತೆ ಹಂಚಿಕೊಂಡ ಮಾತು:

ಪ್ರಧಾನಿ ಮೋದಿಯವರು “ಮಗಳೇ” ಎಂದು ಕರೆಯುತ್ತಿದ್ದರಂತೆ, ಖುದ್ದಾಗಿ ಮೋದಿಯವರೇ ಕಳೆದ ಕಾರ್ಯಕ್ರಮದಲ್ಲಿ (2017) ನೀವೇ ಇದ್ದುದು ಅಲ್ಲವೇ ಎಂದು ಕೇಳಿದರಂತೆ. ಹಾಗೆಯೇ ಮಂಗಳೂರು ಎಂದಾಗ ಕರ್ನಾಟಕ ಎಂಬುದನ್ನು ಹೇಳಿದರಂತೆ.

ಒಬ್ಬ ಮಹಿಳೆಯಾಗಿ ಅಷ್ಟು ದೊಡ್ಡ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಕರಾವಳಿಗರ ಪಾಲಿಗೆ ಹೆಮ್ಮೆಯ ವಿಷಯವೇ. ಪ್ರಧಾನಿ ಮೋದಿಯವರ ಸರಳತೆಯನ್ನು ನೇರವಾಗಿ ಕಂಡ ಇವರು,ಇಂತಹ ಅವಕಾಶವನ್ನು ಪಡೆದು ಧನ್ಯನಾದೆ ಎನ್ನುತ್ತಾರೆ.

ವಿಜೇತ್ ಪೂಜಾರಿ ಶಿಬಾಜೆ.

 


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »