ದಕ್ಷಿಣ ಕನ್ನಡ ಜಿಲ್ಲೆಯ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತಮ್ಮ ಬ್ಯಾಂಕ್‌ನ ಸಿಬ್ಬಂದಿ, ಅಧಿಕಾರಿಗಳಿಗೆ ಸಂಘದ ಡ್ರೆಸ್‌ಕೋಡ್‌ಗೆ 9 ದಿನಗಳ ಕಾಲ ಬ್ರೇಕ್ ನೀಡಿ ನವರಂಗ್ ಬಣ್ಣದ ವಸ್ತ್ರಗಳನ್ನು ಧರಿಸಲು ಅವಕಾಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಪ್ರಧಾನ ಕಚೇರಿ ಮತ್ತು 19 ವಹಿವಾಟು ಶಾಖೆಗಳಿವೆ. ಇದರಲ್ಲಿ 100ಕ್ಕೂ ಅಧಿಕ ಮಂದಿ ಅಧಿಕಾರಿ, ಸಿಬ್ಬಂದಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ನವರಾತ್ರಿಯ ಒಂಬತ್ತು ದಿನ ಆಯಾಯ ದಿನದ ಬಣ್ಣದ ವಸ್ತ್ರ ಧರಿಸಲು ಬ್ಯಾಂಕ್‌ನ ಆಡಳಿತ ಮಂಡಳಿ ಸೂಚನೆ ನೀಡಿದೆ. ಅದರಂತೆ ಗುರುವಾರದಿಂದ ನವರಂಗ್‌ನಲ್ಲಿ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ.
ಈ ಬಗ್ಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ನವರಂಗ್ ನವರಾತ್ರಿ ಹಬ್ಬದ ಉತ್ಸವವನ್ನು ನಾಲ್ಕು ಪಟ್ಟು ಜಾಸ್ತಿಗೊಳಿಸಿದ್ದು, ಇಂತಹ ವಿಭಿನ್ನ ಪರಿಕಲ್ಪ ಆಯೋಜನೆಗೆ ಅಭಿನಂದನೆಗಳು. ಕಳೆದ ವರ್ಷವೇ ನಾವು ಡ್ರೆಸ್‌ಕೋಡ್ ಬ್ರೇಕ್ ನೀಡಲು ಯೋಜಿಸಿದ್ದೆವು. ಆದರೆ ಕೊನೇಕ್ಷಣದಲ್ಲಿ ಅದು ಸಾಧ್ಯವಾಗದ ಕಾರಣ ಈ ಬಾರಿ ಅದನ್ನು ಪ್ರಾರಂಭದಿಂದಲೇ ಅನುಸರಿಸುತ್ತಿದ್ದೇವೆ. ಬ್ಯಾಂಕ್ ದಶಮಾನೋತ್ಸವ ಆಚರಿಸುವ ಈ ಸುಸಂದರ್ಭದಲ್ಲಿ ಈ ಸಂಭ್ರಮ ಮತ್ತಷ್ಟು ಖುಷಿ ನೀಡಿದೆ. ಸಿಬ್ಬಂದಿಗಳಲ್ಲೂ ನವರಾತ್ರಿ ಉತ್ಸವದ ಸಂಭ್ರಮ ಹೆಚ್ಚಿಸುವುದರ ಜತೆ ಕರ್ತವ್ಯಕ್ಕೆ ಮತ್ತಷ್ಟು ಹುರುಪು ನೀಡುವ ಉದ್ದೇಶದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಬ್ಬಂದಿ ಕೂಡಾ ಭಾರೀ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದರು.