ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆವ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಬಾಳಿಬೆಳಗಿದ ಪುಣ್ಯದ ಮಣ್ಣು, ಗುರುಸಾಯನ ಬೈದ್ಯರಿಂದ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿಯಾಗಿ ಪುನರ್ಜನ್ಮ ಪಡೆದ ಪರಮಪಾವನ ಭೂಮಿ. ವೈದ್ಯೆ ವಿದ್ಯೆಕಲಿತ ನೆಲದಚಾರಿತ್ರಿಕ ಹಿನ್ನೆಲೆಯಲ್ಲಿ ರಚನೆಗೊಂಡ ಬಿಡುಗಡೆಯಾದ ಕೂಡಲೇ ತುಳುನಾಡಿನ ಸಂಗೀತ ಪ್ರೇಮಿಗಳ ಮನೆಸೂರುಗೊಂಡುಸಮಾಜಿಕ ಜಾಲ ತಾಣಗಳಲ್ಲಿ ಬಾರಿ ಸಂಚಲನವನ್ನು ಸೃಷ್ಟಿಸಿದ, ಅರ್ಥಗರ್ಭಿತವಾಗಿ ತಮ್ಮ ಸಾಹಿತ್ಯದ ಮೂಲಕ ಶ್ರೀ ಕ್ಷೇತ್ರಗೆಜ್ಜೆಗಿರಿಯ ಮಣ್ಣಿನ ಕಂಪನ್ನು ವಿಶ್ವವ್ಯಾಪ್ತಿಯ ಕೋಟಿ ಚೆನ್ನಯರ ಭಕ್ತರಿಗೆಲ್ಲಾ ಪಸರಿಸಿದ ರೇಣುಕಾ ಕಣಿಯೂರು ಸಾಹಿತ್ಯರಚನೆಯಲ್ಲಿ ಮೂಡಿಬಂದ ಅತ್ಯುತ್ತಮವಾದ ಭಕ್ತಿಗೀತೆ ಜೋಡು ನಂದಾದೀಪ.
ಜಿಪಿ ಕ್ರಿಯೇಷನ್ಸ್ ಲಾಂಛನದಲ್ಲಿ ಈಗಾಗಲೇ ಐತಿಹಾಸಿಕ ದಾಖಲೆ ನಿರ್ಮಾಣವಾದ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿಎರಾಜೆಬರ್ಕೆ ಮನೆತನದ ಗೆಜ್ಜೆಗಿರಿತ ಬ್ರಹ್ಮಲಶಯೆ ಮತ್ತು ಕಟೀಲಿನ ಭಕ್ತಿಗೀತೆ ಮೈನಿಲಿಕೆ ಮಲ್ಲಿಗೆದ ಅಲಂಕಾರೊನೆ ತುಳುನಾಡಿನಖ್ಯಾತ ಉದಯೋನ್ಮುಖ ಯುವ ಗಾಯಕ ಗುರುಪ್ರಸಾದ್ ಮತ್ತು ಕಟೀಲಿನ ಪುರವಾಸಿನಿ ಭ್ರಮರಾಂಬಿಕೆ ಗೀತೆ ಮತ್ತು ಹಲವು ಪುಣ್ಯಕ್ಷೇತ್ರದ ಭಕ್ತಿಗೀತೆಗಳನ್ನು ಹಾಡಿರುವ ಗಾಯಕಿ ಗ್ರೀಷ್ಮ ಕಟೀಲ್ ಗಾಯನದಲ್ಲಿ ಮೂಡಿಬಂದ ಗೆಜ್ಜೆಗಿರಿ ಕ್ಷೇತ್ರದ ಭಕ್ತಿಗೀತೆಗೆಕೈಜೋಡಿಸಿದ ತಂಡದ ಪ್ರಮುಖರನ್ನು ಕ್ಷೇತ್ರದ ವತಿಯಿಂದ ಶುಭ ಹಾರೈಸಿ ಈ ತಂಡದಿಂದ ಇನ್ನಷ್ಟು ಕ್ಷೇತ್ರದ ಸೇವೆಗೆ ಸರ್ವಶಕ್ತಿವರ್ಯರು ಚೈತನ್ಯ ತುಂಬಲೆಂದು ಪ್ರಾರ್ಥಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕೋಶಾಧಿಕಾರಿ ದೀಪಕ್ಕೋಟ್ಯಾನ್, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಟ್ರಸ್ಟಿ ಚಂದ್ರಹಾಸ್ ಉಚ್ಚಿಲ್, ಪ್ರಮುಖರಾದ ಮಂಜುನಾಥ್ ಸಾಲ್ಯಾನ್, ಗಣೇಶ್ ಪೂಜಾರಿ ಕಲ್ಲಡ್ಕ, ಜನಾರ್ಧನ ಪೂಜಾರಿ ಪಾದಡ್ಕ,ಚರಣ್ ಉಳ್ಳಾಲ್, ಕುಮಾರ್ ಇರುವೈಲ್,ಹರೀಶ್ ಬಾಕಿಲಗುತ್ತು ದೀಪಕ್ ಸಜಿಪ ಮತ್ತಿತರರು ಉಪಸ್ಥಿತರಿದ್ದರು.