TOP STORIES:

ಬಂಟ್ವಾಳ : ಬಿರುವೆರ್ ಕುಡ್ಲ ಮಹಾ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಮನೆಯ ಹಸ್ತಾಂತರ


ಬಂಟ್ವಾಳ:   ಬಿರುವೆರ್ ಕುಡ್ಲ ಇದರ ಮಹಾ ಸೇವಾ ಯೋಜನೆಯ ಅಂಗವಾಗಿ ಬಂಟ್ವಾಳದ ಭಂಡಾರಿ ಬೆಟ್ಟುವಿನಲ್ಲಿ ಬಡಕುಟುಂಬದ ಲಿಂಗಪ್ಪ ದಂಪತಿಗಳಿಗೆ ಸುಸಜ್ಜಿತ ಮನೆ ನಿರ್ಮಿಸಿದ್ದು ಬುಧವಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಷ್ಟ ಕಣ್ಣೀರಿನಲ್ಲಿರುವವರಿಗೆ ನೆರವು ನೀಡುವುದೇ ಭಗವಂತನ ಪೂಜೆಯಾಗಿದ್ದು, ಬ್ರಹ್ಮಶ್ರೀ ನಾರಾಯಣ ಗುರುಗಳು ಕೂಡ ಇದನ್ನೇ ಪ್ರತಿಪಾದಿಸಿದ್ದರು‌. ಒಂದು ಸರಕಾರ ಮಾಡುವ ಕಾರ್ಯವನ್ನು ಬಿರುವೆರ್ ಕುಡ್ಲ ಮಾಡುತ್ತಿದೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

 

ಬಂಟ್ವಾಳ:   ಬಿರುವೆರ್ ಕುಡ್ಲ ಇದರ ಮಹಾ ಸೇವಾ ಯೋಜನೆಯ ಅಂಗವಾಗಿ ಬಂಟ್ವಾಳದ ಭಂಡಾರಿ ಬೆಟ್ಟುವಿನಲ್ಲಿ ಬಡಕುಟುಂಬದ ಲಿಂಗಪ್ಪ ದಂಪತಿಗಳಿಗೆ ಸುಸಜ್ಜಿತ ಮನೆ ನಿರ್ಮಿಸಿದ್ದು ಬುಧವಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಅವರು ಮನೆ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ನೇತೃತ್ವದಲ್ಲಿ ಸಂಘಟನೆಯ ಯುವಕರು ಮಾದರಿ ಕೆಲಸ ಮಾಡುತ್ತಿದ್ದಾರೆ.

ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಸಹಜ.ಅದನ್ನು ಎದುರಿಸಿಕೊಂಡೇ ಇಂದು ಈ ಸಂಘಟನೆ ಈ ಮಟ್ಟಕ್ಕೆ ಬೆಳೆದಿದೆ.ಬಡವರಿಗೆ ಸೇವೆ ಮಾಡುವುದೂ ಕೂಡ ದೇವರ ಪೂಜಾ ಕಾರ್ಯ ಎನಿಸಿಕೊಳ್ಳುತ್ತದೆ.ಸರಕಾರ ಮಾಡಬೇಕಾದ ಕೆಲಸ ಬಿರುವೆರ್ ಕುಡ್ಲದಿಂದ ನಡೆದಿದೆ.ಈ ಸಂಘಟನೆ ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಬಿಜೆಪಿ ದ.ಕ ಜಿಲ್ಲಾಧ್ಯಕ್ಷ  ಸುದರ್ಶನ್ , ಬಂಟ್ವಾಳ ಶಾಸಕ ರಾಜೇಶ್ ನೈ್ಕ್ ,ನ್ಯಾಯವಾದಿ ಪ್ರಸಾದ್ ,ಮತ್ತಿತರರು ಶುಭ ಹಾರೈಸಿದರು. ಬಿರುವೆರ್ ಕುಡ್ಲದ ಮಹಿಳಾ ಘಟಕ ಸಹಿತ  22 ಘಟಕಗಳು ಸಂಯುಕ್ತವಾಗಿ ಸೇರಿ ಈ ಮಹಾ ಸೇವಾ ಯೋಜನೆ ಕಾರ್ಯ ಹಮ್ಮಿಕೊಂಡಿದೆ.ಬಂಟ್ವಾಳದಲ್ಲಿ  ನಿರ್ಮಿಸಿದ ಮನೆ 5ನೇಯದ್ದಾಗಿದೆ.ಇದರ ಜತೆಗೆ ಇತೃ 500ಕ್ಕೂ ಅಧಿಕ ಸಮಾಜಮುಖೀ ಸೇವಾ ಯೋಜನೆ ಮಾಡಿದೆ.ಉದಯ ಪೂಜಾರಿ ನೇತೃತ್ವದಲ್ಲಿ ಪ್ರಧಾನ ಸಂಘಟನೆ ಈಗಾಗಲೇ ಅಂದಾಜು 2 ಕೋಟಿಗೂ ಮಿಕ್ಕಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಆರೋಗ್ಯ ಚಿಕಿತ್ಸೆಗೆ,ವಿಕಲ ಚೇತನರಿಗೆ  ಗಾಲಿ ಕುರ್ಚಿ,ಶಿಕ್ಷಣಕ್ಕೆ  ಮತ್ತಿತರ ಯೋಜನೆಗೆ ವಿತರಿಸಿದೆ.ಸಂಘಟನೆಯ ಸದಸ್ಯರ,ದಾನಿಗಳ ನೆರವಿನಿಂದ  ನಿರಂತರವಾಗಿ ಸಮಾಜದಲ್ಲಿ ಕಳೆದ 7 ವರ್ಷಗಳಲ್ಲಿ  ಸೇವಾ ನಿರತವಾಗಿದೆ.ಕಾರ್ಯಕ್ರಮದಲ್ಲಿ ವಸಂತಪೂಜಾರಿ,ಬುಡಾ ಅಧ್ಯಕ್ಷರು,ಬಿರುವೆರ್ ಕುಡ್ಲ ಸ್ಥಾಪಕ ಉದಯಪೂಜಾರಿ,ಸಂಘಟಕ ಚಂದ್ರಕುಮಾರ್, ಮತ್ತಿತರರು ಉಪಸ್ಥಿತರಿದ್ದರು


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »